Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಬಿಡಿಯಂತ ಆಟಗಾರರೇ ಪಿಎಸ್ಎಲ್ ಆಡಿದ್ದಾರೆ; ಐಪಿಎಲ್ ಮಟ್ಟಕ್ಕೆ ಪಿಎಸ್ಎಲ್ ಕೂಡ ಬೆಳೆಯುತ್ತೆ ಎಂದ ಸಿಇಒ

PCB CEO wants PSL to match standards of IPL

ಮಾರ್ಚ್ ತಿಂಗಳಿನಲ್ಲಿ ಆರಂಭವಾಗಿದ್ದ ಈ ವರ್ಷದ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿ ಕೊರೊನಾವೈರಸ್ ಕಾರಣದಿಂದ ಅರ್ಧದಲ್ಲಿಯೇ ಮುಂದೂಡಲ್ಪಟ್ಟಿತ್ತು. ಹೀಗೆ ಮುಂದೂಡಲ್ಪಟ್ಟಿದ್ದ ಪಿಎಸ್ಎಲ್ ಟೂರ್ನಿಯನ್ನು ಜೂನ್ 9ರಿಂದ ಯುಎಇಯಲ್ಲಿ ಮುಂದುವರೆಸಲಾಗುತ್ತಿದೆ.

ಆರ್‌ಸಿಬಿ ಸರಿಯಾಗಿ ಬಳಸಿಕೊಳ್ಳದೇ ತಂಡದಿಂದ ಕೈಬಿಟ್ಟ ಸ್ಟಾರ್ ಕ್ರಿಕೆಟಿಗರಿವರು!

ಇದೇ ವೇಳೆ ಪಾಕಿಸ್ತಾನ್ ಸೂಪರ್ ಲೀಗ್ ಅಭಿವೃದ್ಧಿಯ ಕುರಿತು ಮಾತನಾಡಿರುವ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್‌ನ ಸಿಇಒ ವಾಸಿಂ ಖಾನ್ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ರೀತಿ ಬೆಳೆಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಜಗತ್ತಿನ ಶ್ರೀಮಂತ ಟಿ ಟ್ವೆಂಟಿ ಕ್ರಿಕೆಟ್ ಲೀಗ್ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ. ಐಪಿಎಲ್ ರೀತಿಯೇ ತಮ್ಮ ತಮ್ಮ ದೇಶಗಳ ಕ್ರಿಕೆಟ್ ಲೀಗ್‌ಗಳೂ ಕೂಡ ಪ್ರಸಿದ್ಧಿಯಾಗಬೇಕು ಎಂಬುದು ಪ್ರತಿಯೊಬ್ಬರ ಆಶಯ, ಅದೇ ರೀತಿ ಪಾಕ್ ಕ್ರಿಕೆಟ್ ಬೋರ್ಡ್ ಕೂಡ ಪಿಎಸ್ಎಲ್ ಟೂರ್ನಿಯನ್ನು ಐಪಿಎಲ್ ಟೂರ್ನಿ ರೀತಿ ಅಭಿವೃದ್ಧಿಪಡಿಸಬೇಕೆಂಬ ಗುರಿಯನ್ನು ಹೊಂದಿದೆ.

ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಭಾರತ ಗೆದ್ದು ಬೀಗಿದ್ದ ಟೆಸ್ಟ್ ಸರಣಿಯೇ ಅತ್ಯುತ್ತಮ ಎಂದು ಘೋಷಿಸಿದ ಐಸಿಸಿ

'ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿಯನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ. ಹೀಗೆ ಪಿಎಸ್ಎಲ್ ಟೂರ್ನಿಯನ್ನು ಆರ್ಥಿಕವಾಗಿ ಅಭಿವೃದ್ಧಿಪಡಿಸಿದರೆ ಬರುವ ಲಾಭದಿಂದ ಇನ್ನೂ ಹೆಚ್ಚಿನ ಆಟಗಾರರನ್ನು ಖರೀದಿಸಬಹುದು. ಈ ಕೆಲಸ ದೀರ್ಘಾವಧಿಯ ಸಮಯವನ್ನೇನೂ ತೆಗೆದುಕೊಳ್ಳುವುದಿಲ್ಲ, ಈಗಾಗಲೇ ಐಪಿಎಲ್‌ನಲ್ಲಿ ಮಿಂಚಿದ್ದ ಎಬಿ ಡಿವಿಲಿಯರ್ಸ್ ರೀತಿಯ ಆಟಗಾರರನ್ನು ಪಿಎಸ್ಎಲ್ ಸೆಳೆದಿದ್ದು ಮುಂದಿನ ದಿನಗಳಲ್ಲಿ ಐಪಿಎಲ್ ರೀತಿಯೇ ಪಾಕಿಸ್ತಾನ್ ಸೂಪರ್ ಲೀಗ್ ಟೂರ್ನಿ ಕೂಡ ದೊಡ್ಡ ಮಟ್ಟ ತಲುಪಲಿದೆ' ಎಂದು ವಾಸಿಂ ಖಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ

Story first published: Tuesday, June 8, 2021, 17:38 [IST]
Other articles published on Jun 8, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+