For Quick Alerts
ALLOW NOTIFICATIONS  
For Daily Alerts
 

ಉಮೇಶ್‌ ಯಾದವ್ ಭರ್ಜರಿ ಬೌಲಿಂಗ್ ಪ್ರದರ್ಶನದ ಯುಗಾರಂಭ :ಇರ್ಫಾನ್ ಪಠಾಣ್

Peak movement for Umesh yadavs Bowling strength : Praised by irfan Patan, harbhajan singh

14ನೇ ಐಪಿಎಲ್‌ ಆವೃತ್ತಿಯಲ್ಲಿ ಒಂದು ಪಂದ್ಯವನ್ನಾಡದ ಬಲಗೈ ವೇಗಿ ಉಮೇಶ್ ಯಾದವ್ 15 ನೇ ಆವೃತ್ತಿಯಲ್ಲಿ ಕೆಕೆಆರ್ ಪರ ಅಬ್ಬರದ ಪ್ರದರ್ಶನ ನೀಡುತ್ತಿದ್ದಾರೆ. ಮೂಲ ಬೆಲೆ 2 ಕೋಟಿಗೆ ಕೊಲ್ಕತ್ತಾ ತಂಡ ಸೇರಿಕೊಂಡಿದ್ದು, ವೈಟ್-ಬಾಲ್ ವೃತ್ತಿಜೀವನವನ್ನು ಪುನರುಜ್ಜೀವನಗೊಳಿಸುವತ್ತ ದೈತ್ಯಾಕಾರದ ದಾಪುಗಾಲು ಹಾಕುತ್ತಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಮತ್ತು ಹರ್ಭಜನ್ ಸಿಂಗ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಇರ್ಪಾನ್ ಪಠಾಣ್, '' ಉಮೇಶ್ ಇದೀಗ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅವರು ಉತ್ತಮವಾಗಿ ಔಟ್‌ ಸ್ವಿಂಗ್ ಮಾಡುತ್ತಿದ್ದಾರೆ. ಪವರ್ ಪ್ಲೇ ಬೌಲರ್ ಆಗಿರುವ ಅವರು ಉತ್ತಮ ಲಯದಲ್ಲಿದ್ದಾರೆ. ಹರಾಜಿನ 1 ನೇ ದಿನದಂದು ಉಮೇಶ್‌ ಮಾರಾಟವಾಗದೆ ಹೋದರು. ಅದಕ್ಕಾಗಿ ಅವರಿಗೆ ನೋವು ಆಗಿರಬೇಕು ಆದ್ರೆ ಕೆಕೆಆರ್ ಅವರನ್ನು ಮೂಲ ಬೆಲೆಗೆ ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಹಾಗಾಗಿ ಅತ್ಯುತ್ತಮ ಪ್ರದರ್ಶನದ ಮೂಲಕ ಕೆಕೆಆರ್ ಮ್ಯಾನೇಜ್‌ಮೆಂಟ್ ತನ್ನ ಮೇಲೆ ತೋರಿಸಿದ ನಂಬಿಕೆಯನ್ನು ಮರುಪಾವತಿಸುತ್ತಿದ್ದಾರೆ'' ಎಂದು ಹೇಳಿದರು.

Peak movement for Umesh yadavs Bowling strength : Praised by irfan Patan, harbhajan singh

ಪವರ್ ಪ್ಲೇ ಓವರ್‌ಗಳಲ್ಲಿ ಅತ್ಯುತ್ತಮವಾಗಿ ಬೌಲ್ ಮಾಡುತ್ತಿರುವ ಉಮೇಶ ಯಾದವ್‌ ಕೆಕೆಆರ್ ತಂಡದ ಗೆಲುವಿಗೆ ಅವಶ್ಯಕವಾದ ವಿಕೆಟ್‌ಗಳನ್ನು ಉರುಳಿಸುತ್ತಿದ್ದಾರೆ. ಕಳೆದ ಆರು ಪಂದ್ಯಗಳಲ್ಲಿ 10 ವಿಕೆಟ್ ಪಡೆಯುವ ಮೂಲಕ ಕೆಕೆಆರ್‌ ತಂಡದ ಬೌಲಿಂಗ್್ನ ಪ್ರಮುಖ ಅಸ್ತ್ರವಾಗಿರುವ ಉಮೇಶ್‌ ಯಾದವ್ ಪರ್ಪಲ್ ಕ್ಯಾಪ್ ರೇಸ್್ನಲ್ಲಿದ್ದಾರೆ.

ಮೈಲುಗಲ್ಲುಗಳಾಗಿ ನಿರ್ಮಾಣವಾಗಲಿವೆ ಎಂದು ಹೇಳಿದ್ದಾರೆ.

ಉಮೇಶ್ ಸಾಮರ್ಥ್ಯ ಸಾಬೀತುಪಡಿಸುವ ಸಮಯ ಬಂದಿದೆ: ಹರ್ಭಜನ್ ಸಿಂಗ್

ಈ ಐಪಿಎಲ್ ಆವೃತ್ತಿಯಲ್ಲಿ ಉಮೇಶ್‌ ಅವರ ಪ್ರದರ್ಶನ ನಂಬಲಸಾಧ್ಯವಾಗಿದೆ. ಆವೃತ್ತಿಯ ಆರಂಭದಲ್ಲಿ ತಂಡವು ಅವರಿಗೆ ದೊಡ್ಡ ಪಾತ್ರವನ್ನು ನೀಡಲಿಲ್ಲ. ಏಕೆಂದರೆ ಅವರ ನಿಜವಾದ ಸಾಮರ್ಥ್ಯದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. ಆದರೆ ಈಗ ಅವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ ಮತ್ತು ಅವರ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ ಎಂದು ಹರ್ಭಜನ್ ಹೇಳಿದರು.

Peak movement for Umesh yadavs Bowling strength : Praised by irfan Patan, harbhajan singh

ಉಮೇಶ್ ಯಾದವ್ ಕಳೆದ ಎರಡು ಸೀಸನ್‌ಗಳಲ್ಲಿ ಐಪಿಎಲ್‌ನಲ್ಲಿ ಹೆಚ್ಚು ಪಂದ್ಯ ಆಡಿರಲಿಲ್ಲ. ಡೆಲ್ಲಿ ಡೇರ್‌ಡೆವಿಲ್ಸ್‌ನೊಂದಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಂತರ ಅವರು ಮೊದಲ ಬಾರಿಗೆ ಕೋಲ್ಕತ್ತಾ ನೈಟ್ ರೈಡರ್ಸ್‌ಗಾಗಿ ಆಡುತ್ತಿದ್ದಾರೆ.

ಡೇವಿಡ್ ವಾರ್ನರ್ ಅವರನ್ನು ಅಂಪೈರ್ ಔಟ್ ಕೊಡಲಿಲ್ಲ , ಆದರೆ | Oneindia Kannada

ಈವರೆಗೂ 127 ಐಪಿಎಲ್ ಪಂದ್ಯಗಳನ್ನಾಡಿರುವ ಉಮೇಶ ಯಾದವ್‌ ಅವರು 129 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೆಕೆಆರ್ ಮುಂದಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಎದುರಿಸಲಿದೆ ಮತ್ತು ಉಮೇಶ್ ಯಾದವ್ ಯಾವ ರೀತಿ ತಂಡಕ್ಕೆ ನೆರವಾಗಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

Story first published: Saturday, April 16, 2022, 17:22 [IST]
Other articles published on Apr 16, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+