Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪೆಪ್ಸಿ ಇಲ್ಲದ ಐಪಿಎಲ್? ಬಿಸಿಸಿಐಗೆ ಶಾಕ್ ಕೊಟ್ಟ ಪೆಪ್ಸಿ

ನವದೆಹಲಿ, ಅ. 09: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗೆ ತಂಪು ಪಾನೀಯ ಕಂಪನಿ ಪೆಪ್ಸಿಕೋ ಸಕತ್ ಶಾಕ್ ನೀಡಿದೆ. ಅವಧಿಗೆ ಮುನ್ನ ಪ್ರಾಯೋಜಕತ್ವ ಒಪ್ಪಂದದಿಂದ ಹೊರ ನಡೆಯುವುದಾಗಿ ಶುಕ್ರವಾರ ಘೋಷಿಸಿದೆ.

2017ರ ತನಕ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್ ) ನ ಪ್ರಮುಖ ಪ್ರಾಯೋಜಕತ್ವ ಹೊಂದಿದ್ದ ಪೆಪ್ಸಿ ಸಂಸ್ಥೆ, ಪ್ರಾಯೋಜಕತ್ವದಿಂದ ಹೊರಬರಲು ನಿರ್ಧರಿಸಿದೆ. ಕ್ರಿಕೆಟ್ ಆಟದ ಸಭ್ಯತೆ ಮೀರಿರುವ ಐಪಿಎಲ್ ಗೆ ಪ್ರಾಯೋಜಕತ್ವ ಮಾಡುವುದರಿಂದ ಪೆಪ್ಸಿ ಸಂಸ್ಥೆಯ ಗೌರವಕ್ಕೂ ಧಕ್ಕೆ ಎಂದು ಹೇಳಿಕೊಂಡಿದೆ.[ರಾಜೀವ್ ಶುಕ್ಲಾ ಕೈಯಲ್ಲಿ ಚೆನ್ನೈ, ರಾಜಸ್ಥಾನ ಭವಿಷ್ಯ]

ಬಿಸಿಸಿಐ ಜೊತೆ ಒಪ್ಪಂದ ಮುರಿದುಕೊಳ್ಳಲು ಐಪಿಎಲ್ ನಲ್ಲಿನ ಭ್ರಷ್ಟಾಚಾರವೇ ಕಾರಣ ಎಂದು ತಿಳಿದು ಬಂದರೂ, ಬಿಸಿಸಿಐ ಮಾತ್ರ ಒಪ್ಪಲು ಸಿದ್ಧವಿಲ್ಲ, ಪೆಪ್ಸಿ ಸಂಸ್ಥೆ ತನ್ನದೇ ಆದ ತಾಂತ್ರಿಕ ಕಾರಣಗಳನ್ನು ನೀಡಿ ಡೀಲ್ ಕ್ಯಾನ್ಸಲ್ ಮಾಡುತ್ತಿದೆ. ಮುಂದಿನ ಸೀಸನ್ ನಿಂದ ಹೊಸ ಪ್ರಾಯೋಜಕರನ್ನು ಹುಡುಕಬೇಕಿದೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.

IPL without Pepsi

ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಈ ಬಗ್ಗೆ ಪ್ರತಿಕ್ರಿಯಿಸಿ, ಇದೇನು ದೊಡ್ಡ ವಿಷಯವಲ್ಲಮ್ ಪೆಪ್ಸಿಕೋ ಸಂಸ್ಥೆ ಜೊತೆ ಬಿಸಿಸಿಐ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ ಸಮಸ್ಯೆ ಬಗೆ ಹರಿಸಿಕೊಳ್ಳಲಿದೆ ಎಂದಿದ್ದಾರೆ.[ಐಪಿಎಲ್ ಹಗರಣ 2013 ರಿಂದ 2015: ಟೈಮ್ ಲೈನ್]

2013ರಿಂದ 2017ರ ಅವಧಿವರೆಗೆ ಇಂಡಿಯನ್ ಪ್ರಿಮಿಯರ್ ಲೀಗ್ ನ ಟೈಟಲ್ ಸ್ಪಾನರ್ ಆಗಿ ಪೆಪ್ಸಿ ಸಂಸ್ಥೆ ಒಪ್ಪಂದ ಮಾಡಿಕೊಂಡಿತ್ತು. ಬಿಸಿಸಿಐ ಜೊತೆ ಸುಮಾರು 396 ಕೋಟಿ ರು(71.77 ಮಿಲಿಯನ್ ಯುಎಸ್ ಡಿ) ಡೀಲ್ ಮಾಡಿಕೊಂಡಿದ್ದ ಪೆಪ್ಸಿಕೋ ಕಂಪನಿ ಈಗ ಪ್ರಾಯೋಜಕತ್ವವನ್ನು ಹಿಂಪಡೆಯಲು ನಿರ್ಧರಿಸಿದೆ. ಹೀಗಾಗಿ ಬಿಸಿಸಿಐ ಬಾಕಿ ಮೊತ್ತವನ್ನು ಪೆಪ್ಸಿಗೆ ಪಾವತಿ ಮಾಡಬೇಕಾದ ಪರಿಸ್ಥಿತಿ ಎದುರಿಸುತ್ತಿದೆ.

ಐಪಿಎಲ್ ನ ಫಿಕ್ಸಿಂಗ್ ಪ್ರಕರಣದಿಂದ ನಮ್ಮ ಸಂಸ್ಥೆಯ ಗೌರವ, ಮೌಲ್ಯಕ್ಕೆ ಧಕ್ಕೆ ಉಂಟಾಗಿದೆ ಎಂದು ಪೆಪ್ಸಿ ಹೇಳಿದೆ. ಅಕ್ಟೋಬರ್ 18ರಂದು ಮುಂಬೈನಲ್ಲಿ ಬಿಸಿಸಿಐ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಒಪ್ಪಂದದ ಬಗ್ಗೆ ಚರ್ಚೆ ನಡೆಯಲಿದೆ. (ಪಿಟಿಐ)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+