ವೀರೇಂದ್ರ ಸೆಹ್ವಾಗ್‌ಗೆ ಕೊಹ್ಲಿ ಗೌರವ ಸೂಚಿಸಿದ್ದು ಹೇಗೆ?
ಚೆನ್ನೈ, ಅಕ್ಟೋಬರ್. 23: ವಿರಾಟ್ ಆಟ ಭಾರತಕ್ಕೆ ಜಯ ತಂದುಕೊಟ್ಟಿದೆ. ಆದರೆ ಅದಕ್ಕಿಂತ ಭಿನ್ನವಾಗಿ ಹೇಳುವುದಾದರೆ ಸಿಕ್ಸರ್ ಮೂಲಕ ಶತಕ ಪೂರೈಸಿದ ವಿರಾಟ್ ಕೊಹ್ಲಿ ನಿವೃತ್ತಿ ಸಾರಿದ ಸ್ಫೋಟಕ ಆರಂಭಿಕ ವೀರೇಂದ್ರ ಸೆಹ್ವಾಗ್ ಅವರಿಗೆ ಗೌರವ ಸೂಚಿಸಿದ್ದಾರೆ.
ಸಿಕ್ಸರ್ ಮೂಲಕವೇ ಶತಕ ದಾಖಲು ಮಾಡುತ್ತಿದ್ದ ಸೆಹ್ವಾಗ್ ಅವರ ಆಟವನ್ನು ಕೊಹ್ಲಿ ಮತ್ತೊಮ್ಮೆ ನೆನಪಿಸಿದರು. ದಕ್ಷಿಣಾ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಕೊಹ್ಲಿ ಸಿಕ್ಸರ್ ಬಾರಿಸಿಯೇ ಶತಕ ದಾಖಲಿಸಿದ್ದು ವಿಶೇಷ.[ವಿರಾಟ್ ಕೊಹ್ಲಿ ಶತಕ, ಸೌರವ್ ಗಂಗೂಲಿ ದಾಖಲೆ ಧ್ವಂಸ]

ಹರ್ಯಾಣ ತಂಡದ ಪರ ನಾಯಕರಾಗಿ ಆಟಕ್ಕಿಳಿದ ಸೆಹ್ವಾಗ್ ರಣಜಿ ಟ್ರೋಫಿಯಲ್ಲಿ ಕರ್ನಾಟಕದ ವಿರುದ್ಧ ಶತಕ ದಾಖಲಿಸಿ ಮಿಂಚಿದರು. ಅತ್ತ ವಿರಾಟ್ ಸಹ ಶತಕ ದಾಖಲಿಸಿ 4ನೇ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಜಯ ತಂದುಕೊಟ್ಟರು.[ಅಂಕಿ ಸಂಖ್ಯೆಗಳಲ್ಲಿ ಸೆಹ್ವಾಗ್ ಸೂಪರ್ ವೃತ್ತಿ ಬದುಕು]
ಭಾರತ ಕ್ರಿಕೆಟ್ ದಿಗ್ಗಜ ಸೌರವ್ ಗಂಗೂಲಿ ಅವರ ಶತಕದ ದಾಖಲೆಯನ್ನು 26 ವರ್ಷದ ವಿರಾಟ್ ಮುರಿದು ಹಾಕಿದರು. 95 ರನ್ ಗಳಿಕೆ ಮಾಡಿದ್ದ ವೇಳೆ ಮುಂದಕ್ಕೆ ಬಂದು ಸಿಕ್ಸರ್ ಎತ್ತಿದ ಕೊಹ್ಲಿ ಸೆಂಚುರಿ ದಾಖಲಿಸಿ ಸೆಹ್ವಾಗ್ ಗೆ ತಮ್ಮ ಆಟದ ಮೂಲಕವೇ ಗೌರವ ಸೂಚಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications