Ashes Series: ಪರ್ತ್‌ನಲ್ಲಿ ಬೌಲರ್‌ಗಳದ್ದೇ ಅಬ್ಬರ; ಪಂದ್ಯಕ್ಕೆ ಮಳೆ ಕಾಟ
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಬಹು ನಿರೀಕ್ಷಿತ ಆಶಸ್ ಟೆಸ್ಟ್ ಸರಣಿ ನವೆಂಬರ್ 21 ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಜಯ ಸಾಧಿಸಿ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಸಾಧಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಬಾರಿ ಆಸ್ಟ್ರೇಲಿಯಾ ಆಶಸ್ ಸರಣಿಗೆ ಆತಿಥ್ಯವನ್ನು ವಹಿಸಲಿದೆ. ಈ ವೇಳೆ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ತಂಡ ಪರ್ತ್‌ನಲ್ಲಿ ಟೆಸ್ಟ್ ಪಂದ್ಯವನ್ನು ಆಡಲಿದೆ. ಹೀಗಾಗಿ ಈ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿವೆ.
ಆಸ್ಟ್ರೇಲಿಯಾದಲ್ಲಿ ಬೌನ್ಸ್ ಹಾಗೂ ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಪರ್ತ್ ಅಂಗಳ ಸಹ ಇದಕ್ಕೆ ಹೊರತಾಗಿಲ್ಲ. ಈ ಮೈದಾನದಲ್ಲಿ ವೇಗದ ಬೌಲರ್‌ಗಳೇ ಪ್ರಾಭಲ್ಯ ಮೆರೆದಿದ್ದಾರೆ. ಈ ಮೈದಾನದಲ್ಲಿ ಈವರೆಗೆ 5 ಟೆಸ್ಟ್ ಪಂದ್ಯಗಳನ್ನು ಆಡಲಾಗಿದ್ದು. ಅವೆಲ್ಲಾ ಫಲಿತಾಂಶವನ್ನು ಕಂಡಿವೆ. ಈ ಮೈದಾನದಲ್ಲಿ ನಡೆದ ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವು ಹೆಚ್ಚು ಪಂದ್ಯಗಳನ್ನು ಗೆದ್ದಿದೆ. ಈ ಪಂದ್ಯದಲ್ಲಿ ಟಾಸ್ ನಿಶ್ಚಿತವಾಗಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಟಾಸ್ ಗೆದ್ದ ತಂಡ ನಿಶ್ಚಿತವಾಗಿ ಬ್ಯಾಟೊಂಗ್ ಮಾಡಿವ ಸಾಧ್ಯತೆ ಇದೆ.

ಪಂದ್ಯದ ಮೊದಲ ಎರಡು ದಿನ ಮಳೆ ಆಟಕ್ಕೆ ಅಡ್ಡಿ ಪಡಿಸುವ ಸಾಧ್ಯತೆ ಇದೆ. ಹವಾಮಾನ ವರದಿಗಳ ಪ್ರಕಾರ, ಈ ಮೈದಾನದಲ್ಲಿ ಉಳಿದ ಮೂರು ದಿನ ಸ್ಪಷ್ಟ ವಾತಾವರಣವನ್ನು ನಿರೀಕ್ಷಿಸಲಾಗಿದೆ. ಇಲ್ಲಿ ತಾಪಮಾನವು 22 ರಿಂದ 26 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇರಲಿದೆ ಎಂದು ಅಂದಾಜಿಲಸಾಗಿದೆ. ಪರ್ತ್ ಟೆಸ್ಟ್‌ಗೆ ಆಸ್ಟ್ರೇಲಿಯಾ ಈಗಾಗಲೇ ತಮ್ಮ ಪ್ಲೇಯಿಂಗ್ 11 ಅನ್ನು ಘೋಷಿಸಿದೆ. ಪ್ರಕಟಿತ ತಂಡದಲ್ಲಿ ಇಬ್ಬರು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ.
ಈ ಪಂದ್ಯವನ್ನು ಭಾರತದಲ್ಲಿ ವೀಕ್ಷಿಸುವುದು ಯಾವಾಗ?
ಆಶಸ್ ಸರಣಿಯ ಮೊದಲ ಪಂದ್ಯವನ್ನು ಭಾರತದಲ್ಲಿ ಬೆಳಗ್ಗೆ 7:50 ಕ್ಕೆ ವೀಕ್ಷಿಸಬಹುದಾಗಿದೆ. ಪಂದ್ಯ ಆರಂಭಕ್ಕೂ ಅರ್ಧಗಂಟೆ ಮುಂಚಿತವಾಗಿ ಟಾಸ್ ನಡೆಯಲಿದೆ.
ಪಂದ್ಯವನ್ನು ನೇರಪ್ರಸಾರದಲ್ಲಿ ವೀಕ್ಷಿಸುವುದು ಎಲ್ಲಿ?
ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಟೆಸ್ಟ್ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ. ಅಲ್ಲದೆ ಜಿಯೋ ಹಾಟ್‌ಸ್ಟಾರ್‌ನಲ್ಲಿ ನೋಡಬಹುದು.
ಇಂಗ್ಲೆಂಡ್ ತಂಡ: ಬೆನ್ ಡಕೆಟ್, ಜ್ಯಾಕ್ ಕ್ರಾಲಿ, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮೀ ಸ್ಮಿತ್ (ವಿಕೆಟ್ ಕೀಪರ್), ಗಸ್ ಅಟ್ಕಿನ್ಸನ್, ಜೋಫ್ರಾ ಆರ್ಚರ್, ಮಾರ್ಕ್ ವುಡ್, ಬ್ರೈಡನ್ ಕಾರ್ಸೆ, ಶೋಯೆಬ್ ಬಶೀರ್, ಜಾಕೋಬ್ ಬೆಥೆಲ್, ಮ್ಯಾಥ್ಯೂ ಪಾಟ್ಸ್, ಜೋಶ್ ಟಂಗ್, ವಿಲ್ ಜ್ಯಾಕ್ಸ್.
ಆಸ್ಟ್ರೇಲಿಯಾ ತಂಡ: ಉಸ್ಮಾನ್ ಖವಾಜಾ, ಜೇಕ್ ವೆದರಾಲ್ಡ್, ಮಾರ್ನಸ್ ಲಂಬುಶೇನ್, ಸ್ಟೀವ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಬ್ರೆಂಡನ್ ಡಾಗೆಟ್, ಸ್ಕಾಟ್ ಬೋಲ್ಯಾಂಡ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications