ಪರ್ತ್ ನೆಲ ಆಸ್ಟ್ರೇಲಿಯಾಕ್ಕೆ ಬಲ, ಭಾರತ ಗೆಲ್ಲಲು ಸಾಧ್ಯವಿಲ್ಲ: ಪಾಂಟಿಂಗ್


ಪರ್ತ್, ಡಿಸೆಂಬರ್ 11: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಗೆದ್ದಿರಬಹುದು. ಆದರೆ ಪರ್ತ್‌ನಲ್ಲಿ ನಡೆಯುವ ದ್ವಿತೀಯ ಟೆಸ್ಟ್ ನಲ್ಲಿ ಭಾರತ ಗೆಲ್ಲಲು ಸಾಧ್ಯವಿಲ್ಲ. ಯಾಕೆಂದರೆ ಆ ನೆಲ ಭಾರತೀಯರಿಗಿಂತ ಆಸ್ಟ್ರೇಲಿಯಾ ಆಟಗಾರರಿಗೆ ಹೆಚ್ಚು ಸೂಕ್ತವಾಗಿದೆ ಎಂದು ಆಸೀಸ್ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಹೇಳಿದ್ದಾರೆ.
ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 31 ರನ್ ಜಯ ಸಾಧಿಸಿತ್ತು. ಈ ಮೂಲಕ ಭಾರತ ಸುಮಾರು 70 ವರ್ಷಗಳ ಬಳಿಕ ಇದೇ ಮೊದಲಬಾರಿಗೆ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 1-0ಯ ಮುನ್ನಡೆ ಸಾಧಿಸಿದೆ.
ಆದರೆ ಆಸೀಸ್ ವಿರುದ್ಧ ದ್ವಿತೀಯ ಪಂದ್ಯ ಗೆಲ್ಲೋದು ಅಷ್ಟು ಸುಲಭವಿಲ್ಲ. ಯಾಕೆಂದರೆ ಪರ್ತ್ ಪಿಚ್ ಭಾರತೀಯ ಆಟಗಾರರಿಗಿಂತ ಆಸೀಸ್ ಆಟಗಾರರಿಗೆ ಹೆಚ್ಚು ನೆರವು ನೀಡುತ್ತದೆ ಎಂದು ಪಾಂಟಿಂಗ್ ಅಭಿಪ್ರಾಯಿಸಿದ್ದಾರೆ. ತವರಿನಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಪಾಂಟಿಂಗ್ ಮಾತುಗಳು ಆಸೀಸ್‌ಗೆ ಇನ್ನಷ್ಟು ಧೈರ್ಯ ತುಂಬಿರುವುದಂತೂ ನಿಜ. ರಿಕಿ ದಿಟ್ಟ ಮಾತುಗಳು ಕೆಳಗಿವೆ.

ಆಸೀಸ್ ತಿರುಗಿ ಬೀಳಬೇಕಿದೆ
ದ್ವಿತೀಯ ಟೆಸ್ಟ್ ಬಗ್ಗೆ ಮಾತನಾಡುತ್ತ ರಿಕಿ, 'ನನಗನ್ನಿಸಿದ ಮಟ್ಟಿಗೆ ಪರ್ತ್ ಮೈದಾನ ಭಾರೀಯರಿಗಿಂತ ನಮ್ಮವರಿಗೆ ಅತೀ ಹೆಚ್ಚು ನೆರವು ನೀಡಲಿದೆ. ಆದರೆ ಆಸೀಸ್ ಆಟಗಾರರು ಎದುರಾಳಿ ವಿರುದ್ಧ ಅಷ್ಟೇ ಚಾಲಾಕಿತನದ ಮೂಲಕ ತಿರುಗಿ ಬಿದ್ದು ಅವಕಾಶವನ್ನು ಬಳಸಿಕೊಳ್ಳಬೇಕಿದೆ' ಎಂದರು.

ಭಾರತ ಮಿನುಗಿಲ್ಲ
ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಕೇವಲ 31 ರನ್‌ನಿಂದ ಸೋಲುವ ಮೂಲಕ ದುರ್ಬಲ ಆಟ ಪ್ರದರ್ಶಿಸಿತು. ಹಾಗಂತ ಭಾರತ ಅತ್ಯತ್ತಮ ಆಟವಾಡಿತು ಅಂತೇನಲ್ಲ. ಒಟ್ಟಿನಲ್ಲಿ ಭಾರತ ಮೇಲುಗೈ ಸಾಧಿಸುವಷ್ಟು ಶಕ್ತವಾಗಿತ್ತು' ಎಂದು ಪಾಂಟಿಂಗ್ ತಿಳಿಸಿದರು.

ಥಿಂಕ್ ಪಾಸಿಟಿವ್ಲಿ
ಮಾತು ಮುಂದುವರೆಸಿದ ಪಾಂಟಿಂಗ್, 'ಮೊದಲ ಸೋಲನ್ನು ನಮ್ಮ ತಂಡ ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕಿದೆ. ಜೊತೆಗೆ ಅಷ್ಟೇ ಪರಿಶ್ರಮದ ಮೂಲಕ ಎದುರಾಳಿ ಭಾರತವನ್ನು ಹಿಮ್ಮೆಟ್ಟಿಸಬೇಕಿದೆ. ಮುಂದಿನ ಪಂದ್ಯದಲ್ಲಿ ಆಸೀಸ್ ಚೇತರಿಸಿಕೊಳ್ಳುತ್ತೆ ಅನ್ನೋ ನಂಬಿಕೆ ನಂಗಂತೂ ಇದೆ' ಎಂದರು.

ಎಚ್ಚರ ವಹಿಸಿ!
ಮೊದಲ ಪಂದ್ಯವನ್ನಾಡಿದ ಆಸೀಸ್ ತಂಡವೇ ದ್ವಿತೀಯ ಟೆಸ್ಟ್‌ಗೂ ಬೇಕು. ಗಾಯಾಳಾಗಿ ಯಾರೂ ತಂಡದಿಂದ ಹೊರಗುಳಿಯದಂತೆ ಎಚ್ಚರ ವಹಿಸಿ. ಜೊತೆಗೆ ಆರಂಭಿಕ ಆಟಗಾರ ಆ್ಯರನ್ ಫಿಂಚ್ ಕೊಂಚ ಸುಧಾರಿಸಿಕೊಳ್ಳಬೇಕು ಎಂದು ಪಾಂಟಿಂಗ್ ಸಲಹೆ ನೀಡಿದ್ದಾರೆ. ಡಿಸೆಂಬರ್ 14ರಿಂದ ದ್ವಿತೀಯ ಪಂದ್ಯ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications