Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಗ್ಲೆಂಡ್‌ ವಿರುದ್ಧ ಸೆಮಿಫೈನಲ್‌ಗೆ ಆಸೀಸ್‌ನ ಪ್ರಮುಖ ಬ್ಯಾಟ್ಸ್‌ಮನ್‌ ಕಣಕ್ಕೆ!

Peter Handscomb to make WC debut against England

ಬರ್ಮಿಂಗ್‌ಹ್ಯಾಮ್‌, ಜುಲೈ 11: ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ವಿರುದ್ಧ ಆಸ್ಟ್ರೇಲಿಯಾ ತಂಡ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಪೀಟರ್‌ ಹ್ಯಾಂಡ್ಸ್‌ಕಂಬ್‌ ಅವರನ್ನು ಕಣಕ್ಕಿಳಿಸುವುದು ಖಚಿತವಾಗಿದೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಎಡಗೈ ಬ್ಯಾಟ್ಸ್‌ಮನ್‌ ಶಾನ್‌ ಮಾರ್ಷ್‌ ಅವರ ಸ್ಥಾನದಲ್ಲಿ ಬದಲಿ ಆಟಗಾರನಾಗಿ ಕಾಂಗರೂ ಪಡೆ ಸೇರಿಕೊಂಡಿರುವ ಹ್ಯಾಂಡ್ಸ್‌ಕಂಬ್‌, ಗುರುವಾರ ಎಡ್ಜ್‌ಬಾಸ್ಟನ್‌ ಅಂಗಣದಲ್ಲಿ ತಮ್ಮ ಚೊಚ್ಚಲ ವಿಶ್ವಕಪ್‌ ಪಂದ್ಯವನ್ನಾಡಲಿದ್ದಾರೆ ಎಂದು ಆಸ್ಟ್ರೇಲಿಯಾದ ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಬುಧವಾರ ಖಚಿತ ಪಡಿಸಿದ್ದಾರೆ.

ವಿಶ್ವಕಪ್‌ಗೂ ಮುನ್ನ ನಡೆದ ಪಾಕಿಸ್ತಾನ ಮತ್ತು ಭಾರತ ವಿರುದ್ಧದ ಸರಣಿ ಗೆಲುವಿನಲ್ಲಿ ಆಸ್ಟ್ರೇಲಿಯಾ ತಂಡದ ಪರ ಭರ್ಜರಿ ಪ್ರದರ್ಶನ ನೀಡಿದ್ದ ಹ್ಯಾಂಡ್ಸ್‌ಕಂಬ್‌ ಅವರನ್ನು ವಿಶ್ವಕಪ್‌ಗೆ ಪ್ರಕಟಿಸಲಾದ ಪ್ರಥಮಿಕ ತಂಡದಿಂದ ಕೈಬಿಡಲಾಗಿತ್ತು. ವಿಶ್ವಕಪ್‌ಗೂ ಮುನ್ನ ಸತತ 13 ಪಂದ್ಯಗಳನ್ನು ಆಡಿದ್ದ ಹ್ಯಾಂಡ್ಸ್ಕಂಬ್‌, ಮಾಜಿ ನಾಯಕ ಸ್ಟೀವ್‌ ಸ್ಮಿತ್‌ ಅವರಿಗೆ ಸ್ಥಾನ ಬಿಟ್ಟುಕೊಡುವಂತಾಗಿತ್ತು.

"ನಿಜ ಹೇಳುತ್ತೇನೆ. ಸೆಮಿಫೈನಲ್‌ ಪಂದ್ಯದಲ್ಲಿ ಪೀಟರ್‌ ಹ್ಯಾಂಡ್ಸ್‌ಕಂಬ್‌ ಆಡುವುದು ಶೇ.100 ರಷ್ಟು ಖಚಿತ. ಇದಕ್ಕೆ ಅವರು ಅರ್ಹರು ಕೂಡ. ಪ್ರಥಮಿಕ ತಂಡದಿಂದ ಅವರನ್ನು ಹೊರಗಿಟ್ಟಿದ್ದು ದುರದೃಷ್ಟವೇ ಸರಿ. ಅವರು ಉತ್ತಮ ಲಯದಲ್ಲಿದ್ದು, ಆಸ್ಟ್ರೇಲಿಯಾ 'ಎ' ಪರ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಇದೀಗ ತಂಡದ ಮಧ್ಯಮ ಕ್ರಮಾಂಕದಲ್ಲಿ ಸಮತೋಲನ ತಂದುಕೊಡಲಿದ್ದಾರೆ. ಹೀಗಾಗಿ ಅವರು ಆಡುವುದು ಖಚಿತ,'' ಎಂದು ಜಸ್ಟಿನ್‌ ಲ್ಯಾಂಗರ್‌ ತಿಳಿಸಿದ್ದಾರೆ.

ಇದೇ ವೇಳೆ ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಲೀಗ್‌ ಪಂದ್ಯದ ವೇಳೆ ಗಾಯದ ಸಮ್ಯೆಗೆ ತುತ್ತಾಗಿದ್ದ ಆಲ್‌ರೌಂಡರ್‌ ಮಾರ್ಕಸ್‌ ಸ್ಟೋಯ್ನಿಸ್‌ ಇದೀಗ ಚೇತರಿಸಿದ್ದು ಸೆಮಿಫೈನಲ್‌ ಪಂದ್ಯವನ್ನಾಡಲು ಸಂಪೂರ್ಣ ಫಿಟ್‌ ಆಗಿದ್ದಾರೆ.

"ಮಾರ್ಕಸ್‌ ಉತ್ತಮ ಸ್ಥಿತಿಯಲ್ಲಿದ್ದಾರೆ. ನೆಟ್ಸ್‌ನಲ್ಲೂ ಉತ್ತಮವಾಗಿ ಆಡಿದ್ದಾರೆ. ಪಂದ್ಯ ಆಡಲು ಅವರು ಸಂಪೂರ್ಣ ಫಿಟ್‌ ಆಗಿದ್ದಾರೆ,'' ಎಂದು ಲ್ಯಾಂಗರ್‌ ತಿಳಿಸಿದ್ದಾರೆ. ಒಂದು ವೇಳೆ ಸ್ಟೋಯ್ನಿಸ್‌ ಗಾಯಗೊಂಡು ನಿರ್ಗಮಿಸಿದ್ದರೆ ಅವರ ಸ್ಥಾನದಲ್ಲಿ ಮ್ಯಾಥ್ಯೂ ವೇಡ್‌ ಅಥವಾ ಮಿಚೆಲ್‌ ಮಾರ್ಷ್‌ ತಂಡ ಸೇರಿಕೊಳ್ಳುತ್ತಿದ್ದರು.

Story first published: Wednesday, July 10, 2019, 16:59 [IST]
Other articles published on Jul 10, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+