For Quick Alerts
ALLOW NOTIFICATIONS  
For Daily Alerts
 

IPL 2025 RCB: ಆರ್‌ಸಿಬಿ ಕಪ್‌ ಗೆಲುವಿನ ಆಸೆಗೆ ಪೆಟ್ಟು: ನೀರಿನಲ್ಲಿ ಉಪ್ಪಿನಂತೆ ಕರಗಿ ಹೋಯ್ತಾ 11.50 ಕೋಟಿ?

ರಾಜ್‌ಕೋಟ್‌ನಲ್ಲಿ ಮಂಗಳವಾರ ನಡೆದ ಭಾರತ ವಿರುದ್ಧ ಮೂರನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಇಂಗ್ಲೆಂಡ್ ಸರಣಿಯಲ್ಲಿ ಪುನರಾಗಮನ ಮಾಡಿದೆ. ಇಂಗ್ಲೆಂಡ್ ತಂಡವು ಸರಣಿಯಲ್ಲಿ 1-2 ಅಂತರದಲ್ಲಿ ಹಿನ್ನಡೆ ಅನುಭವಿಸಿದೆ. ಸತತ ಎರಡು ಸೋಲಿನ ಬಳಿಕ ಇಂಗ್ಲೆಂಡ್ ಮೊದಲ ಜಯ ಗಳಿಸಿದೆ. ಇಷ್ಟಾದರೂ ತಂಡದ ಚಿಂತೆ ಮಾತ್ರ ಕಡಿಮೆಯಾಗಿಲ್ಲ. ಇಂಗ್ಲೆಂಡ್ ತಂಡದ ಸ್ಫೋಟಕ ಆರಂಭಿಕ ಬ್ಯಾಟರ್ ಫಿಲಿಪ್ ಸಾಲ್ಟ್ ರನ್ ಗಳಿಸುತ್ತಿಲ್ಲ. ಸತತ ಮೂರು ಪಂದ್ಯಗಳಲ್ಲಿ ಸಾಲ್ಟ್ ಬ್ಯಾಟಿಂಗ್ ವೈಫಲ್ಯ ಕಂಡಿದ್ದಾರೆ. ಇದು ಇಂಗ್ಲೆಂಡ್‌ಗೆ ಮಾತ್ರವಲ್ಲದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ತಂಡಕ್ಕೆ ಟೆಕ್ಷನ್ ಹೆಚ್ಚಿಸಿದೆ.

ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ ಸಾಲ್ಟ್ 0, 4 ಮತ್ತು 5 ರನ್ ಗಳಿಸಿದ್ದಾರೆ. ಅವರಿಗೆ ಇನ್ನೂ ಎರಡಂಕಿ ತಲುಪಲು ಸಾಧ್ಯವಾಗಿಲ್ಲ. ಸಾಲ್ಟ್ ಅವರನ್ನು ಆರ್‌ಸಿಬಿ ಐಪಿಎಲ್ 2024ರ ಮೆಗಾ ಹರಾಜಿನಲ್ಲಿ 11.50 ಕೋಟಿ ರೂ. ನೀಡಿ ಖರೀದಿಸಿದೆ.

Phil Salt batting form problem has not only worried England but also Royal Challengers Bengaluru

ಐಪಿಎಲ್ 2025ರಲ್ಲಿ ಆರ್‌ಸಿಬಿ ಫ್ರಾಂಚೈಸಿ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಅವರೊಂದಿಗೆ ಇನ್ನಿಂಗ್ಸ್ ತೆರೆಯಲು ಸಾಲ್ಟ್ ಅವರನ್ನು ಬಿಡ್ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಸಾಲ್ಟ್ ಸತತ ಮೂರು ಪಂದ್ಯಗಳಿಂದ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದು, ಆರ್‌ಸಿಬಿಯ ಕಪ್ ಗೆಲ್ಲುವ ಕನಸಿಗೆ ಹೊಡೆತ ನೀಡಿದೆ. ಕಳೆದ 6 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಮ್ಮೆ ಮಾತ್ರ ಸಾಲ್ಟ್ ಅರ್ಧಶತಕ ಬಾರಿಸಿದ್ದಾರೆ. ಉಳಿದ ಐದು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.

ಕಳೆದ 6 ಟಿ20ಗಳಲ್ಲಿ ಸಾಲ್ಟ್ ರನ್

ವೆಸ್ಟ್ ಇಂಡೀಸ್ ವಿರುದ್ಧ 55 ರನ್, 35 ಎಸೆತಗಳು
ವೆಸ್ಟ್ ಇಂಡೀಸ್ ವಿರುದ್ಧ- 4 ರನ್, 12 ಎಸೆತಗಳು
ವೆಸ್ಟ್ ಇಂಡೀಸ್ ವಿರುದ್ಧ - 0 ರನ್, 1 ಎಸೆತ
ಭಾರತ ವಿರುದ್ಧ- 0 ರನ್, 2 ಎಸೆತಗಳು
ಭಾರತ ವಿರುದ್ಧ - 5 ರನ್, 7 ಎಸೆತಗಳು
ಭಾರತದ ವಿರುದ್ಧ - 4 ರನ್, 3 ಎಸೆತಗಳು

ನವೆಂಬರ್ 24, 2024 ರಂದು ನಡೆದ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿ ಫಿಲ್ ಸಾಲ್ಟ್ ಅವರನ್ನು 11.50 ಕೋಟಿ ರೂ. ಗೆ ಬಿಡ್ ಮಾಡಿತ್ತು. ಇದಕ್ಕೂ ಮೊದಲು ಅಕ್ಟೋಬರ್ 31, 2024 ರಂದು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದಿಂದ ಅವರನ್ನು ಬಿಡುಗಡೆ ಮಾಡಿತ್ತು. ಕೆಕೆಆರ್ ಪರ ಐಪಿಎಲ್ 2024ರಲ್ಲಿ 12 ಪಂದ್ಯಗಳಲ್ಲಿ ಸಾಲ್ಟ್ 39.55 ಸರಾಸರಿಯಲ್ಲಿ 653 ರನ್ ಗಳಿಸಿದ್ದರು. 175.54 ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದ ಸಾಲ್ಟ್ 6 ಅರ್ಧ ಶತಕಗಳನ್ನು ಸಿಡಿಸಿದ್ದರು. ಕೋಲ್ಕತ್ತಾ ಕಪ್ ಗೆಲ್ಲುವಲ್ಲಿ ಸಾಲ್ಟ್ ದೊಡ್ಡ ಕೊಡುಗೆ ನೀಡಿದ್ದರು.

ಫಿಲ್ ಸಾಲ್ಟ್ 2023 ರಲ್ಲಿ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಕಾಣಿಸಿಕೊಂಡರು. ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತ್ತು. ಆಗ ಸಾಲ್ಟ್ 9 ಪಂದ್ಯಗಳಲ್ಲಿ 27.25ರ ಸರಾಸರಿಯಲ್ಲಿ 218 ರನ್ ಗಳಿಸಿದ್ದರು. ಅವರ ಸ್ಟ್ರೈಕ್ ರೇಟ್ 163.91 ಆಗಿತ್ತು. ಬಳಿಕ ಡೆಲ್ಲಿ ತಂಡ ಅವರನ್ನು ಬಿಡುಗಡೆ ಮಾಡಿತು. ಐಪಿಎಲ್ 2024ರ ಆವೃತ್ತಿಗಾಗಿನಡೆದ ಹರಾಜಿನಲ್ಲಿ ಯಾರೂ ಅವರನ್ನು ಖರೀದಿಸಲಿಲ್ಲ. ಜೇಸನ್ ರಾಯ್ ಔಟಾದಾಗ ಕೆಕೆಆರ್ ಸಾಲ್ಟ್ ಅನ್ನು ಸೇರಿಸಿಕೊಂಡಿತ್ತು. ಇದೀಗ ಕಳಪೆ ಫಾರ್ಮ್‌ನಲ್ಲಿರುವ ಸಾಲ್ಟ್ಆರ್‌ಸಿಬಿ ಪರ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Story first published: Wednesday, January 29, 2025, 13:07 [IST]
Other articles published on Jan 29, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+