Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಧ್ಯದ ಓವರ್‌ಗಳಲ್ಲಿ ರನ್‌ ಕಲೆ ಹಾಕಲು ಆರ್‌ಸಿಬಿ ಬ್ಯಾಟರ್ ಪರದಾಟ

ಭರವಸೆಯ ಆಟಗಾರ ಫಿಲ್ ಸಾಲ್ಟ್‌ (63) ಬಾರಿಸಿದ ಅರ್ಧಶತಕದ ಬಲದಿಂದ ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) 20 ಓವರ್‌ಗಳಲ್ಲಿ 8 ವಿಕೆಟ್‌ಗೆ 175 ರನ್‌ ಸೇರಿಸಿ, ಡೆಲ್ಲಿ ಕ್ಯಾಪಿಟಲ್ಸ್‌ಗೆ ಸ್ಪರ್ಧಾತ್ಮಕ ರನ್‌ ಗುರಿ ನೀಡಿದೆ.

ಡೆಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡುವ ಆಯ್ಕೆ ಮಾಡಿಕೊಂಡಿತು. ಈ ವೇಳೆ ತಂಡದ ಆರಂಭಿಕರಾದ ವಿರಾಟ್‌ ಕೊಹ್ಲಿ ಹಾಗೂ ಫಿಲ್ ಸಾಲ್ಟ್‌ ಜೊಡಿ ಮೊದಲ ವಿಕೆಟ್‌ಗೆ 5.1 ಓವರ್‌ಗಳಲ್ಲಿ 52 ರನ್‌ ಸೇರಿಸಿತು. ಈ ಹಂತದಲ್ಲಿ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿ 1 ಬೌಂಡರಿ, 1 ಸಿಕ್ಸರ್ ಸಹಾಯದಿಂದ 18 ರನ್‌ ಬಾರಿಸಿದ್ದಾಗ ಲುಂಗಿ ಎನ್‌ಗಿಡಿ ಅವರ ಎಸೆತದಲ್ಲಿ ದೊಡ್ಡ ಹೊಡೆತ ಬಾರಿಸಲು ಹೋಗಿ ಪಾತು ಮ್ ನಿಸ್ಸಂಕಾಗೆ ಕ್ಯಾಚ್ ನೀಡಿದರು.

Phil Salt

ಭರವಸೆಯ ಆಟಗಾರ ದೇವದತ್ ಪಡಿಕ್ಕಲ್‌ ಸ್ಥಿರ ಪ್ರದರ್ಶನ ನೀಡಲಿಲ್ಲ. ಇವರು 18 ರನ್‌ ಬಾರಿಸಿದ್ದಾಗ ಅಕ್ಷರ್ ಪಟೇಲ್‌ ಎಸೆತದಲ್ಲಿ ಸಿಕ್ಸರ್ ಬಾರಿಸಲು ಮುಂದಾಗ ಡೇವಿಡ್ ಮಿಲ್ಲರ್ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು.

ಫಿಲ್ ಸಾಲ್ಟ್‌ ಅಬ್ಬರ

ಆರಂಭಿಕ ಸ್ಫೋಟಕ ಆಟಗಾರ ಫಿಲ್ ಸಾಲ್ಟ್‌ ಅಬ್ಬರಿಸಿದರು. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಫಿಲ್ ಸಾಲ್ಟ್‌ 165ರ ಸ್ಟ್ರೈಕ್‌ ರೇಟ್‌ನಲ್ಲಿ 63 ರನ್‌ ಬಾರಿಸಿದರು. ಇನ್ನು ಇವರ ಅಮೋಘ ಇನಿಂಗ್ಸ್‌ನಲ್ಲಿ 4 ಬೌಂಡರಿ, 3 ಸಿಕ್ಸರ್ ಬಾರಿಸಿದರು. ಇವರ ಆಟಕ್ಕೆ ಕುಲ್‌ದೀಪ್ ಯಾದವ್ ಖೆಡ್ಡಾ ತೋಡಿದರು.

ಟೀಮ್ ಡೇವಿಡ್ ದಾಖಲೆ

ಈ ಪಂದ್ಯದಲ್ಲಿ ಟಿಮ್ ಡೇವಿಡ್ 17 ಎಸೆತಗಳಲ್ಲಿ 26 ರನ್ ಗಳಿಸಿದರು. ಈ ಚಿಕ್ಕ ಇನ್ನಿಂಗ್ಸ್‌ ಮೂಲಕ ಐಪಿಎಲ್ ವೃತ್ತಿಜೀವನದಲ್ಲಿ 1000 ರನ್‌ಗಳನ್ನು ಪೂರ್ಣಗೊಳಿಸಿದರು. ಇವರು ಕಡಿಮೆ ಎಸೆತದಲ್ಲಿ 1000 ರನ್‌ ಪೂರ್ಣಗೊಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರು 560 ಎಸೆತಗಳಲ್ಲಿ 1000 ರನ್‌ಗಳನ್ನು ತಲುಪಿದರೆ, ಆಂಡ್ರೆ ರಸೆಲ್ 545 ಎಸೆತಗಳಲ್ಲಿ 1000 ರನ್‌ ಪೂರೈಸಿದರು.

ಒಂದು ಹಂತದಲ್ಲಿ ಆರ್‌ಸಿಬಿ 13 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 132 ರನ್ ಸೇರಿಸಿ ಉತ್ತಮ ಹಂತದಲ್ಲಿತ್ತು. ಆದರೆ ಇಲ್ಲಿಂದ ಡೆಲ್ಲಿ ತಂಡ ತಂಡದ ಮೇಲೆ ಪೂರ್ಣ ಹಿಡಿತ ಸಾಧಿಸಿತು. ಕೊನೆಯ 7 ಓವರ್‌ಗಳಲ್ಲಿ ಬೆಂಗಳೂರು ಕೇವಲ 45 ರನ್ ಗಳಿಸಿ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಬೆಂಗಳೂರು 200 ರನ್‌ ಸೇರಿಸುವ ಆಸೆಗೆ ಡೆಲ್ಲಿ ಬೌಲರ್‌ಗಳು ಪೆಟ್ಟು ನೀಡಿದರು.

ಡೆಲ್ಲಿ ಕ್ಯಾಪಿಟಲ್ಸ್ ಪರ ಲುಂಗಿ ಎನ್‌ಗಿಡಿ, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್ ತಲಾ 2 ವಿಕೆಟ್‌ ಪಡೆದರು. ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಪಂದ್ಯವನ್ನು ಗೆಲ್ಲಲು 176 ರನ್‌ಗಳ ಗುರಿಯನ್ನು ಆರ್‌ಸಿಬಿ ನೀಡಿದೆ.

Story first published: Saturday, April 18, 2026, 18:02 [IST]
Other articles published on Apr 18, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+