RCB ಪ್ಲೇಯರ್ ಸೂಪರ್ ಮ್ಯಾಚ್ ಕ್ಯಾಚ್: ವಿಡಿಯೋ ವೈರಲ್
ಫಿಲ್ ಸಾಲ್ಟ್.. ಆರ್‌ಸಿಬಿ ತಂಡದ ಸ್ಟಾರ್ ಆರಂಭಿಕ ಆಟಗಾರ. ಇವರು ವಿಶ್ವದ ಬೇರೆ ಬೇರೆ ಲೀಗ್‌ಗಳಲ್ಲಿ ಭಾಗವಹಿಸಿ ಅಭಿಮಾನಿಗಳ ಮನ ಗೆಲ್ಲುತ್ತಾರೆ. ಇವರು ಈಗ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಟೂರ್ನಿಯಲ್ಲಿ ಮ್ಯಾಂಚೆಸ್ಟರ್ ಓರಿಜನಲ್ಸ್ ತಂಡವನ್ನು ಫಿಲ್ ಸಾಲ್ಟ್ ಮುನ್ನಡೆಸುತ್ತಿದ್ದಾರೆ. ಇವರು ಬ್ಯಾಟಿಂಗ್ ಅಷ್ಟೇ ಅಲ್ಲ, ತಮ್ಮ ಕಮಾಲ್ ಫಿಲ್ಡೀಂಗ್‌ನಿಂದಲೂ ಹೆಸರುವಾಸಿ. ಟ್ರೆಂಟ್ ರಾಕೆಟ್ಸ್ ತಂಡದ ವಿರುದ್ಧ ಫಿಲ್ ಸಾಲ್ಟ್ ಹಿಡಿದ ಅಮೋಘ ಕ್ಯಾಚ್ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಮ್ಯಾಂಚೆಸ್ಟರ್ ಓರಿಜನಲ್ಸ್ 8 ವಿಕೆಟ್‌ಗೆ 98 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಟ್ರೆಂಟ್ ರಾಕೆಟ್ಸ್ ತಂಡದ ಮ್ಯಾಕ್ಸ್ ಹೋಲ್ಡನ್ ಅವರು ಜೋಶ್ ಟಂಗ್ ಅವರ ಎಸೆತವನ್ನು ಮಿಡ್ ಆಫ್ ಮೇಲಿನಿಂದ ಬೌಂಡರಿ ಬಾರಿಸುವ ಪ್ಲ್ಯಾನ್ ಹಾಕಿಕೊಂಡಿದ್ದರು. ಆದರೆ ಇವರ ಪ್ಲ್ಯಾನ್ ಎಲ್ಲ ಉಲ್ಟಾ ಆಯಿತು.

ಜೋಶ್ ಟಂಗ್ ಎಸೆದ ಇನಿಂಗ್ಸ್‌ನ 48 ನೇ ಎಸೆತದಲ್ಲಿ ಈ ದೃಷ್ಯ ಕಂಡು ಬಂದಿತು. ಟಂಗ್ ಎಸೆದ ನಿಧಾನಗತಿಯ ಚೆಂಡನ್ನು, ಜಸ್ಟ್ ಟಚ್ ನೀಡುವ ಮೂಲಕ ಬೌಂಡರಿ ಗಳಿಸುವ ಇರಾದೆಯನ್ನು ಹೊಂದಿದ್ದರು. ಆದರೆ ಚೆಂಡು ಅವರ ಬ್ಯಾಟ್‌ಗೆ ಬಡಿದ ನಂತರ ಗಾಳಿಯಲ್ಲಿ ಹೋಯಿತು. ಆ ಸಮಯದಲ್ಲಿ ಫಿಲ್ ಸಾಲ್ಟ್ 30 ಯಾರ್ಡ್ ಸರ್ಕಲ್‌ನಲ್ಲಿ ಫೀಲ್ಡ್ ಮಾಡುತ್ತಾ ಇದ್ದರು. ಇವರು ಚೆಂಡು ತಮ್ಮ ಬಳಿ ಬರುತ್ತಿರುವುದನ್ನು ಗಮನಿಸಿ ಗಾಳಿಯಲ್ಲಿ ನೆಗೆದು ಅಮೋಘ ಕ್ಯಾಚ್ ಹಿಡಿದರು. ಈ ಕ್ಯಾಚ್‌ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗುತ್ತಿತ್ತು.
ಗುರಿಯನ್ನು ಬೆನ್ನಟ್ಟಿದ ಟ್ರೆಂಟ್ ರಾಕೆಟ್ಸ್ ಇನ್ನು 26 ಎಸೆತ ಬಾಕಿ ಇರುವಂತೆ 3 ವಿಕೆಟ್ ಕಳೆದುಕೊಂಡು ಅರ್ಹ ಜಯ ದಾಖಲಿಸಿತು. ಈ ಪಂದ್ಯದಲ್ಲಿ ಟ್ರೆಂಟ್ ತಂಡದ ಪರ ರೆಹಾನ್ ಅಹ್ಮದ್ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 45 ರನ್ ಬಾರಿಸಿ ಜಯದಲ್ಲಿ ಮಿಂಚಿದರು. ಇದಕ್ಕೂ ಮೊದಲು ಬ್ಯಾಟ್ ಮಾಡಿದ ಮ್ಯಾಂಚೆಸ್ಟರ್ ತಂಡದ ಬ್ಯಾಟರ್‌ಗಳಿಗೆ ಡೇವಿಡ್ ವಿಲ್ಲಿ ಕಾಟ ನೀಡಿದರು. ಇವರು 11 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ರೆಹಾನ್ ಅಹ್ಮದ್ ಹಾಗೂ ಸ್ಯಾಮ್ ಕೂಕ್ ತಲಾ 2 ವಿಕೆಟ್ ಪಡೆದರು.
ಟ್ರೆಂಟ್‌ಗೆ ಎರಡನೇ ಸ್ಥಾನ
ಓವಲ್ ಇನ್ವಿನ್ಸಿಬಲ್ಸ್ ಆಡಿದ 5 ಪಂದ್ಯಗಳಲ್ಲಿ 4 ಜಯ, 1 ಸೋಲು ಕಂಡಿದ್ದು 16 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇನ್ನು ಟ್ರೆಂಟ್ ರಾಕೆಟ್ಸ್ ತಂಡ 5 ಪಂದ್ಯಗಳಲ್ಲಿ 4 ಸೋಲು ಕಂಡಿದ್ದು, 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಓವಲ್ ತಂಡದ ರನ್ ರೇಟ್, ಟ್ರೆಂಟ್ ತಂಡಕ್ಕಿಂತ ಉತ್ತಮವಾಗಿದ್ದರಿಂದ ಮೊದಲ ಸ್ಥಾನದಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications