ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಐಪಿಎಲ್ ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆದಿದೆ. ಈ ವೇಳೆ ಆರ್‌ಸಿಬಿ ಮೊದಲು ಬ್ಯಾಟ್ ಮಾಡಿ 191 ರನ್‌ಗಳ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡದ ಆರಂಭಿಕ ಪ್ರಿಯಾಂಶ್ ಆರ್ಯ ಹಾಗೂ ಪ್ರಭಸಿಮ್ರನ್ ಸಿಂಗ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಆರ್‌ಸಿಬಿ ಪವರ್ ಪ್ಲೇನಲ್ಲಿ ವಿಕೆಟ್ ಪಡೆಯಲು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿತು.
ಮೊದಲ ವಿಕೆಟ್‌ಗೆ ಪ್ರಿಯಾಂಶ್ ಆರ್ಯ ಹಾಗೂ ಪ್ರಭಸಿಮ್ರನ್ ಸಿಂಗ್ ಜೋಡಿ 5 ಓವರ್‌ಗಳಲ್ಲಿ 43 ರನ್ ಜೊತೆಯಾಟದ ಕಾಣಿಕೆ ನೀಡಿತು. ಈ ವೇಳೆ ಪ್ರಿಯಾಂಶ್ ಆರ್ಯ ಇಲ್ಲದ ಬಿಗ್ ಹಿಟ್ ಬಾರಿಸಲು ಹೋಗಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ಫಿಲ್ ಸಾಲ್ಟ್ ಹಿಡಿದ ಅಮೋಘ ಕ್ಯಾಚ್‌ಗೆ ಬಲಿಯಾದರು. ಫೈನಲ್ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ 4 ಬೌಂಡರಿ ನೆರವಿನಿಂದ 24 ರನ್ ಸಿಡಿಸಿದ್ದರು. ಈ ವೇಳೆ ಇಲ್ಲದ ಶಾಟ್ ಹೊಡೆಯಲು ಹೋಗಿ ಔಟ್ ಆದರು.

ಆರ್‌ಸಿಬಿಗೆ ಪವರ್ ಪ್ಲೇನಲ್ಲಿ ವಿಕೆಟ್ ಪಡೆಯುವುದು ಅವಶ್ಯಕತೆ ಇತ್ತು. ಈ ವೇಳೆ ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ಜೋಶ್ ಹ್ಯಾಜಲ್‌ವುಡ್ ಭರ್ಜರಿ ಪ್ಲ್ಯಾನ್ ಮಾಡಿದರು. ಪಂಜಾಬ್ ಕಿಂಗ್ಸ್ ತಂಡದ ಎಡಗೈ ಆಟಗಾರ ಪ್ರಿಯಾಂಶ್ ಆರ್ಯಗೆ ಜೋಶ್ ಅಮೋಘ ಪ್ಲ್ಯಾನ್ ಮಾಡಿಕೊಂಡಿದ್ದರು. ಜೋಶ್ ಹ್ಯಾಜಲ್‌ವುಡ್ ಎಸೆದ ಬ್ಯಾಕ್ ಆಫ್ ಲೆಂಥ್ ಎಸೆತವನ್ನು ಗಂಟೆಗೆ 141 ಕಿಲೋ ಮೀಟರ್ ವೇಗದಲ್ಲಿ ಎಸೆದರು. ಈ ವೇಳೆ ಆರ್ಯ ಸ್ಕ್ವೇರ್ ಲೇಗ್ ಮೇಲೆ ಸಿಕ್ಸರ್ ಬಾರಿಸಲು ಮುಂದಾದರು.
ಸ್ಕ್ವೇರ್ ಲೆಗ್‌ನಲ್ಲಿ ಫೀಲ್ಡ್ ಮಾಡುತ್ತಿದ್ದ ಫಿಲ್ ಸಾಲ್ಟ್ ತಮ್ಮ ಎಡಗಡೆಗೆ ಓಡಿ ಕ್ಯಾಚ್ ಪಡೆದರು. ಆದರೆ ಆಗ ಅವರ ಬ್ಯಾಲೆನ್ಸ್ ಮಿಸ್ ಆಗಿ ಬೌಂಡರಿ ಗೆರೆ ದಾಟಬೇಕಿತ್ತು. ಇದನ್ನು ಅರಿತ ಫಿಲ್ ಸಾಲ್ಟ್ ಚೆಂಡನ್ನು ಗಾಳಿಯಲ್ಲಿ ತೂರಿ ಮತ್ತೆ ಮೈದಾನದೊಳಗೆ ಬಂದು ಅಮೋಘ ಕ್ಯಾಚ್ ಪಡೆದರು. ಈ ಮೂಲಕ ಆರ್‌ಸಿಬಿ ಅಬ್ಬರಿಸಿತು. ಅಲ್ಲದೆ ಆರ್‌ಸಿಬಿ ಮೊದಲ ವಿಕೆಟ್ ಪಡೆಯುವಲ್ಲಿ ಸಫಲವಾಯಿತು. ಈ ಕ್ಯಾಚ್ ಪಡೆದ ಫಿಲ್ ಸಾಲ್ಟ್ ಎಲ್ಲರ ಚಿತ್ತ ಕದ್ದರು.