IPL 2025: ಕೆಕೆಆರ್‌ಗೆ ಶಾಕ್; ಆರ್‌ಸಿಬಿಗೆ ಬಂಪರ್!
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಟೂರ್ನಿ ಕ್ರಿಕೆಟ್ ಅಭಿಮಾನಿಗಳಿ ಭಾರೀ ಕುತೂಹಲ ಮೂಡಿಸಿದೆ. ಐಪಿಎಲ್ 2025ರ ಆವೃತ್ತಿ ಆರಂಭಕ್ಕೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ಐಪಿಎಲ್‌ನ ಎಲ್ಲಾ 10 ತಂಡಗಳು ಉಳಿಸಿಕೊಂಡಿರುವ ಮತ್ತು ಬಿಟ್ಟಿರುವ ಆಟಗಾರರ ಪಟ್ಟಿಯನ್ನು ಅಕ್ಟೋಬರ್ 31 ರಂದು ಬಿಸಿಸಿಐಗೆ ಸಲ್ಲಿಸಿವೆ. ಆದರೆ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ರಿಟೈನ್ ಪಟ್ಟಿ ಮಾತ್ರ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ. ಕೆಕೆಆರ್ ತಂಡವನ್ನು ಚಾಂಪಿಯನ್ ಮಾಡಿದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಉಳಿಸಿಕೊಳ್ಳುವಲ್ಲಿ ಫ್ರಾಂಚೈಸಿ ವಿಫಲವಾಗಿದೆ. ಇದಲ್ಲದೆ, ಕಳೆದ ಬಾರಿ ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಇಂಗ್ಲೆಂಡ್ ಸ್ಟಾರ್ ಬ್ಯಾಟರ್ ಫಿಲಿಪ್ ಸಾಲ್ಟ್ ಅವರನ್ನು ಕೈ ಬಿಡಲಾಗಿದೆ.
ಐಪಿಎಲ್ 2024ರಲ್ಲಿ ಕೆಕೆಆರ್ ಪರ ಫಿಲಿಪ್ ಸಾಲ್ಟ್ ಆರಂಭಿಕ ಬ್ಯಾಟರ್ ಆಗಿ ಮಿಂಚಿದರು. ಜೊತೆಗೆ ತಂಡಕ್ಕೆ ಉತ್ತಮ ರನ್ ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೆ ಅವರನ್ನು ಕೆಕೆಆರ್ ಫ್ರಾಂಚೈಸಿ ಐಪಿಎಲ್ 2025ರ ಟೂರ್ನಿಗೆ ಉಳಿಸಿಕೊಂಡಿಲ್ಲ. ಇದೀಗ ಕೆಕೆಆರ್ ಫ್ರಾಂಚೈಸಿ ಪಶ್ಚಾತ್ತಾಪ ಪಡುವಂತೆ ಫಿಲಿಪ್ ಸಾಲ್ಟ್ ಮಾಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಬಿರುಸಿನ ಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಕೆಕೆಆರ್ ತಂಡಕ್ಕೆ ತನ್ನ ಶಕ್ತಿಯನ್ನು ತೋರಿಸಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್ ಮುನ್ನಡೆ ಸಾಧಿಸಿದೆ. ಬಾರ್ಬಡೋಸ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ 8 ವಿಕೆಟ್‌ಗಳಿಂದ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಸ್ಫೋಟಕ ಆರಂಭಿಕ ಬ್ಯಾಟರ್ ಫಿಲಿಪ್ ಸಾಲ್ಟ್ ಶತಕ ಬಾರಿಸಿದ್ದಾರೆ. ಫಿಲಿಪ್ ಸಾಲ್ಟ್ 54 ಎಸೆತಗಳಲ್ಲಿ 9 ಬೌಂಡರಿ ಮತ್ತು 6 ಸಿಕ್ಸರ್‌ಗಳ ನೆರವಿನಿಂದ ಅಜೇಯ 103 ರನ್ ಹೊಡೆದ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಇದು ಅವರ ಮೂರನೇ ಶತಕವಾಗಿದೆ.
ಆರ್‌ಸಿಬಿಗೆ ಬಂಪರ್
ಐಪಿಎಲ್ 2025ರ ಟೂರ್ನಿಗೆ ಮುನ್ನ ಫಿಲಿಪ್ ಸಾಲ್ಟ್ ಅವರ ಅದ್ಭುತ ಪ್ರದರ್ಶನ ಕೆಕೆಆರ್‌ಗೆ ಬೇಸರ ತರಿಸಿದೆ. ಫಿಲಿಪ್ ಸಾಲ್ಟ್ ಉಳಿಸಿಕೊಳ್ಳದಿರುವುದು ಕೆಕೆಆರ್‌ಗೆ ಪೆಟ್ಟು ಬಿದ್ದಂತಾಗಿದೆ. ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಪೋಟಕ ಆರಂಭಿಕ ಬ್ಯಾಟರ್ ಹುಡುಕಾಟದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಅದ್ಭುತ ಶತಕ ಬಾರಿಸಿರುವ ಫಿಲಿಪ್ ಸಾಲ್ಟ್ ಮೇಲೆ ಕಣ್ಣಿಟ್ಟಿದೆ. ಫಿಲಿಪ್ ಸಾಲ್ಟ್ ಆರ್‌ಸಿಬಿಗೆ ಬರುವುದರಿಂದ ಬ್ಯಾಟಿಂಗ್ ಬಲ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ ಫಿಲಿಪ್ ಸಾಲ್ಟ್ ಆರ್‌ಸಿಬಿಗೆ ಉತ್ತಮ ಆಯ್ಕೆಯಾಗಿದ್ದಾರೆ.
ಪಂದ್ಯ ಫಲಿತಾಂಶ
ಮೊದಲ ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು. ನಾಯಕ ನಿಕೋಲಸ್ ಪೂರನ್ 29 ಎಸೆತಗಳಲ್ಲಿ 38 ರನ್, ರೊಮಾರಿಯೊ ಶೆಫರ್ಡ್ 22 ಎಸೆತಗಳಲ್ಲಿ ಅಜೇಯ 35 ರನ್, ಮೋತಿ 14 ಎಸೆತಗಳಲ್ಲಿ ಅಜೇಯ 33 ಮತ್ತು ಆಂಡ್ರೆ ರಸೆಲ್ 17 ಎಸೆತಗಳಲ್ಲಿ 30 ರನ್ ಗಳಿಸಿದರು.
ವೆಸ್ಟ್ ಇಂಡೀಸ್ ನೀಡಿದ 183 ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಪರ ಸಾಲ್ಟ್ ಕೇವಲ 54 ಎಸೆತಗಳಲ್ಲಿ ಶತಕ ಸಿಡಿಸಿದರು. ಜಾಕ್ ಬೆತೆಲ್ ಕೂಡ ಅರ್ಧಶತಕ ಗಳಿಸಿದರು. ಈ ಇಬ್ಬರೂ ಒಟ್ಟಾಗಿ ವೇಗವಾಗಿ ರನ್‌ಗಳನ್ನು ಗಳಿಸಿದರು. ಪರಿಣಾಮ ಇಂಗ್ಲೆಂಡ್ 16.5 ಓವರ್‌ಗಳಲ್ಲಿ 2 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ನಗೆ ಬೀರಿತು. ಬೆತೆಲ್ 36 ಎಸೆತಗಳಲ್ಲಿ ಅಜೇಯ 58 ರನ್ ಗಳಿಸಿದರು. ವಿಲ್ ಜ್ಯಾಕ್ 17 ರನ್ ಗಳಿಸಿ ಔಟಾದರೆ, ನಾಯಕ ಜೋಸ್ ಬಟ್ಲರ್ ಖಾತೆ ತೆರೆಯದೆ ವಿಕೆಟ್ ಕಳೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications