ಸಾಕ್ಷಿ-ಧೋನಿ ದಂಪತಿ ಮಗಳು 'ಝೀವಾ' ಹೇಗಿದ್ದಾಳೆ?
ಬೆಂಗಳೂರು, ಮಾ. 3 : ಭಾರತ ಕ್ರಿಕೆಟ್ ತಂಡದ ನಾಯಕ ಎಂಎಸ್ ಧೋನಿ, ಸಾಕ್ಷಿ ದಂಪತಿಯ ಮಗಳು ಝೀವಾ ಚಿತ್ರ ಮೊದಲ ಬಾರಿಗೆ ಮಾಧ್ಯಮಗಳಿಗೆ ಲಭ್ಯವಾಗಿದೆ.
ಮಗಳ ಕೈಯಿರುವ ಚಿತ್ರವನ್ನು ತಾಯಿ ಸಾಕ್ಷಿ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಳೆದ ಫೆಬ್ರವರಿ 6 ರಂದು ಭಾರತ ತಂಡದ ನಾಯಕ ತಂದೆಯಾಗಿದ್ದರು. ಆದರೆ ಎಂಎಸ್ ಆ ಸಮಯದಲ್ಲಿ ಆಸ್ಟ್ರೇಲಿಯಾದಲ್ಲಿದ್ದರು.[ಮಹೇಂದ್ರ ಸಿಂಗ್ ಧೋನಿ-ಸಾಕ್ಷಿ ದಂಪತಿಗೆ ಹೆಣ್ಣು ಮಗು]

ಮಾರ್ಚ್ 2ರಂದು ರಾತ್ರಿ ಸಾಕ್ಷಿ ಸಿಂಗ್ ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ತಮ್ಮ ಮಗಳ ಪುಟ್ಟ ಕೈ ಇರುವ ಫೋಟೋ ಹಾಕಿದ್ದಾರೆ. ಚಿತ್ರದಲ್ಲಿ ಮಗು ತನ್ನ ಎಡಗೈನಿಂದ ತಾಯಿ ಸಾಕ್ಷಿಯ ಕೈ ಹಿಡಿದುಕೊಂಡಿದೆ. ಅಲ್ಲದೇ ಸಾಕ್ಷಿ ಇದಕ್ಕೆ 'Bundle of Joy !! ಎಂದು ಹೆಸರು ನೀಡಿದ್ದಾರೆ.
ಫೆಬ್ರವರಿ 9 ರಂದು ಸಾಕ್ಷಿ ತಮ್ಮ ಮಗಳ ಹೆಸರಿನ ಬಗೆಗೂ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು. ಮಗಳ ಬಗ್ಗೆ ನಾಯಕ ಧೋನಿ ಅವರನ್ನು ಪ್ರಶ್ನಿಸಿದ್ದಾಗ, 'ಮಗಳನ್ನು ನೋಡುವುದು ಇದ್ದೇ ಇರುತ್ತದೆ, ಅದಕ್ಕಿಂತ ದೇಶ ಸೇವೆ ಮುಖ್ಯ(ವಿಶ್ವ ಕಪ್ ಆಡುವುದು) ಎಂದು ಹೇಳಿದ್ದರು.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಸೋತು ಸುಣ್ಣವಾಗಿದ್ದ ಭಾರತ ಕ್ರಿಕೆಟ್ ತಂಡ ಅದೇ ಧೋನಿ ನಾಯಕತ್ವದಲ್ಲಿ ವಿಶ್ವಕಪ್ ಅಭಿಯಾನವನ್ನು ಯಶಸ್ವಿಯಾಗಿ ನಡೆಸುತ್ತಿದೆ. ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ಯುಎಇಗೆ ಮಣ್ಣು ಮುಕ್ಕಿಸಿರುವ ತಂಡ ವೆಸ್ಟ್ ಇಂಡೀಸ್ ನ್ನು ಎದುರಿಸಲಿದೆ. ಧೋನಿಗೆ ಮಗಳು ಹೊಸ ಅದೃಷ್ಟ ತಂದಿದ್ದಾಳೆ ಎಂದು ಪಾಕ್ ಕ್ರಿಕೆಟ್ ಅಭಿಮಾನಿ ಬಷೀರ್ ಹೇಳಿದ್ದು ನಿಜವಾದಂತೆ ಕಾಣುತ್ತಿದೆ.[ಧೋನಿಗೆ ಹೊಸ ಅದೃಷ್ಟ ತಂದ ಮಗಳು]
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications