Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಹುಕಾಲದ ಗೆಳತಿ ಪ್ರೀತಿರಾಜ್ ರನ್ನು ವರಿಸಿದ ಹನುಮ ವಿಹಾರಿ

Photo: Team India cricketer Hanuma Vihari marries Preeti

ಹೈದರಾಬಾದ್, ಮೇ 22: ಟೀಂ ಇಂಡಿಯಾದ ಕ್ರಿಕೆಟರ್ ಹನುಮ ವಿಹಾರಿ ಅವರು ತಮ್ಮ ಬಹುಕಾಲದ ಗೆಳತಿ ಪ್ರೀತಿ ರಾಜ್ ರನ್ನು ವರಿಸಿದ್ದಾರೆ. ತೆಲುಗು ಸಂಪ್ರದಾಯದಂತೆ ಮದುವೆ ಜರುಗಿದ್ದು, ಮಾಧ್ಯಮಗಳಿಗೆ ತಡವಾಗಿ ಸುದ್ದಿ ಮುಟ್ಟಿದೆ.

ಆಂಧ್ರಪ್ರದೇಶ ರಣಜಿ ತಂಡದ ನಾಯಕರಾಗಿರುವ ಹನುಮ ವಿಹಾರಿ ಹಾಗೂ ಪ್ರೀತಿ ಅವರ ವಿವಾಹವು ಆಂಧ್ರಪ್ರದೇಶದ ವಾರಂಗಲ್‍ನ ಹನುಮಕೊಂಡಾದಲ್ಲಿ ನೆರವೇರಿತು. ಎರಡು ಕಡೆಯ ಕುಟುಂಬಸ್ಥರು, ಬಂಧು ಮಿತ್ರರು ಈ ಶುಭ ಸಂದರ್ಭದಲ್ಲಿ ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದರು.

ಉದ್ಯಮಿ ರಾಜೇಂದರ್ ರೆಡ್ಡಿ ಅವರ ಪುತ್ರಿಯಾಗಿರುವ ಪ್ರೀತಿ ಅವರು ಕಾಂಜೀವರಂ ಸೀರೆಯುಟ್ಟು ಮಿಂಚುತ್ತಿದ್ದರು. 25 ವರ್ಷದ ಹನುಮ ವಿಹಾರಿ ಶೆರ್ವಾನಿ ಧರಿಸಿದ್ದರು. ಹನುಮ ಅವರು ತಮ್ಮ್ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಸಂತಸವನ್ನು ಹಂಚಿಕೊಂಡು, ಶುಭಹಾರೈಸಿದವರಿಗೆ ಧನ್ಯವಾದ ಅರ್ಪಿಸಿದ್ದಾರೆ.. ಕಳೆದ ವರ್ಷ ಅಕ್ಟೋಬರ್ ನಲ್ಲಿ ಇಬ್ಬರ ವಿವಾಹ ನಿಶ್ಚಿತಾರ್ಥ ನೆರವೇರಿತ್ತು

ಭಾರತದ ಪರ 4 ಟೆಸ್ಟ್ ಪಂದ್ಯಗಳನ್ನಾಡಿ 23.85 ರನ್ ಸರಾಸರಿಯಂತೆ, 167 ರನ್ ಗಳಿಸಿದ್ದಾರೆ. 56ರನ್ ಗರಿಷ್ಠ ಮೊತ್ತ. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 5000ಕ್ಕೂ ಅಧಿಕ ರನ್ ಗಳಿಸಿದ್ದು, 17 ಶತಕ ಬಾರಿಸಿದ್ದಾರೆ. 302ರನ್ ವೈಯಕ್ತಿಕ ಗರಿಷ್ಠ ಮೊತ್ತ. ಐಸಿಸಿ ಕ್ರಿಕೆಟ್ ವಿಶ್ವಕಪ್ 2019ಗೆ ಆಯ್ಕೆಯಾಗದ ಹನುಮ ವಿಹಾರಿ ಅವರು ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಆಡುವ ವಿಶ್ವಾಸ ಹೊಂದಿದ್ದಾರೆ.

Story first published: Wednesday, May 22, 2019, 18:55 [IST]
Other articles published on May 22, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+