ಬೆಂಗಳೂರು, ನವೆಂಬರ್ 23: ಪ್ರವಾಸಿ ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಸಿದ್ಧವಾಗುತ್ತಿದೆ. ಇತ್ತ ತಂಡದ ಪ್ರಮುಖ ವೇಗಿ ಭುವನೇಶ್ವರ್ ಕುಮಾರ್ ಅವರು ಹಸೆಮಣೆ ಏರಿದ್ದಾರೆ.
27 ವರ್ಷ ವಯಸ್ಸಿನ ವೇಗಿ ಭುವನೇಶ್ವರ್ ಕುಮಾರ್ ಅವರು ನವೆಂಬರ್ 23ರಂದು ಮೀರತ್ ನಲ್ಲಿ ನೂಪುರ್ ನಾಗರ್ ಅವರನ್ನು ವರಿಸಿದ್ದಾರೆ. ಭುವನೇಶ್ವರ್ ಕುಮಾರ್ ಗೆ ಶುಭಹಾರೈಸಿ ಚಿತ್ರಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವು ನಾಗ್ಪುರ್ ನಲ್ಲಿ ನವೆಂಬರ್ 24ರಂದು ಆರಂಭವಾಗಲಿದೆ. ಆಟಗಾರರಿಗಾಗಿ ಪ್ರತ್ಯೇಕವಾಗಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.