ಕ್ರಿಕೆಟಿಗರಿಂದ ತುಂಬಿ ತುಳುಕಿದ ರೋಹಿತ್ ಪಾರ್ಟಿ
ಮುಂಬೈ, ನ. 23 : ಏಕದಿನ ಪಂದ್ಯದಲ್ಲಿ ದ್ವಿಶತಕ ಸಾಧನೆ ಮಾಡಿ ವಿಶ್ವದಾಖಲೆ ಬರೆದ ರೋಹಿತ್ ಶರ್ಮಾ ಇಡಿ ದೇಶದ ಆಕರ್ಷಣೆ ಕೇಂದ್ರವಾಗಿದ್ದಾರೆ. ಈ ಸಂಭ್ರಮ ಹಂಚಿಕೊಳ್ಳಲು ಇತ್ತೀಚೆಗೆ ಔತಣಕೂಟವೊಂದನ್ನು ಏರ್ಪಡಿಸಲಾಗಿತ್ತು.
ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್ ಪತ್ನಿ ಅಂಜಲಿ ಸಮೇತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಟೀಮ್ ಇಂಡಿಯಾದ ಆಟಗಾರರು, ಬಾಲಿವುಡ್ ನಟರು ಆಗಮಿಸಿ ಮತ್ತಷ್ಟು ಮೆರುಗು ಹೆಚ್ಚಿಸಿದರು.[ರೋಹಿತ್ ಶರ್ಮ ಭರ್ಜರಿ ದ್ವಿಶತಕ, ಲಂಕಾ ತತ್ತರ]
ಮುಂಬೈ ಇಂಡಿಯನ್ಸ್ ತಂಡದ ಒಡತಿ ನೀತಾ ಅಂಬಾನಿ, ಶಿಖರ್ ಧವನ್, ಧವಳ ಕುಲಕರ್ಣಿ, ಜಹೀರ್ ಖಾನ್, ಆಶಿಶ್ ನೆಹ್ರಾ, ಅಜಿತ್ ಅಗರ್ ಕರ್ ಹಾಜರಿದ್ದರು. ಈ ಪಾರ್ಟಿಯ ಕೆಲ ಚಿತ್ರಗಳು....

ಮುಖ್ಯ ಆಕರ್ಷಣೆ
ತಮ್ಮದೇ ಪಾರ್ಟಿಯಲ್ಲಿ ಕಂಗೊಳಿಸಿದ ರೋಹಿತ್ ಶರ್ಮಾ

ವೇಗಿಯ ಹಾಜರಿ
ವೇಗದ ಬೌಲರ್ ಇಶಾಂತ್ ಶರ್ಮಾ ಹಾಜರಿ.

ಧವಳ್ ಕುಲಕರ್ಣಿ
ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಧವಳ್ ಕುಲಕರ್ಣಿ

ವೇಗಿಗಳ ಮಿಲನ
ಅಜಿತ್ ಅಗರ್ ಕರ್, ಜಹೀರ್ ಮತ್ತು ಆಶಿಶ್ ನೆಹ್ರಾ

ಕ್ರಿಕೆಟ್ ದೇವರು
ಪತ್ನಿ ಅಂಜಲಿಯೊಂದಿಗೆ ಆಗಮಿಸಿದ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡುಲ್ಕರ್

ಶಿಖರ್ ಧವನ್
ಭಾರತದ ಆರಂಭಿಕ ಆಟಗಾರ ಶಿಖರ್ ಧವನ್

ಸುನೀಲ್ ಶೆಟ್ಟಿ
ಬಾಲಿವುಡ್ ಸ್ಟಾರ್ ಸುನೀಲ್ ಶೆಟ್ಟಿ

ತಾಯಿ ಮಗ
ಮಗನ ಜತೆ ಆಗಮಿಸಿದ ಮುಂಬೈ ಇಂಡಿಯನ್ಸ್ ತಂಡದ ಒಡತಿ ನೀತಾ ಅಂಬಾನಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications