Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಿತ್ರಗಳಲ್ಲಿ : ಹಿಮಾಚಲದ ತಪ್ಪಲಿನಲ್ಲಿ ಕ್ರಿಕೆಟ್ ಕಾದಾಟಕ್ಕೆ ಸಜ್ಜು

ಧರ್ಮಶಾಲ, ಮಾರ್ಚ್ 24: ಹಿಮಾಚಲ ಪ್ರದೇಶದಲ್ಲಿ ಮಾರ್ಚ್ 25ರಿಂದ ಅಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಅಂತಿಮ ಹಣಾಹಣಿ ನಡೆಯಲಿದ್ದು, ತಂಪಾದ ವಾತಾವರಣದಲ್ಲಿ ಆಟಗಾರರ ಅಭ್ಯಾಸ ಶಿಬಿರದ ಚಿತ್ರಗಳು ಇಲ್ಲಿವೆ.. ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ 1-1ರಲ್ಲಿ ಸಮಗೊಂಡಿದೆ. ರಾಂಚಿಯಲ್ಲಿ ನಡೆದ ಕಳೆದ ಟೆಸ್ಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯ ಕಂಡಿತ್ತು.

ಭಾರತದ ಕ್ರಿಕೆಟ್ ಸ್ಟೇಡಿಯಂಗಳ ಪೈಕಿ ವಿಶಿಷ್ಟವಾದ ಸ್ಟೇಡಿಯಂ ಎನಿಸಿಕೊಂಡಿರುವ ಧರ್ಮಶಾಲದಲ್ಲಿರುವ ಹಿಮಾಚಲಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಮೈದಾನವು ಸಮುದ್ರಮಟ್ಟದಿಂದ 1,457 ಮೀಟರ್ ಎತ್ತರದಲ್ಲಿದೆ.[ಭಾರತೀಯ ಕ್ರಿಕೆಟ್ ಆಟಗಾರರ ಸಂಭಾವನೆ ದ್ವಿಗುಣ]

ಹಿಮಚ್ಛಾದಿತ ಪರ್ವತಗಳಿಂದ ಆವರಿಸಿದ ಮೈದಾನದಲ್ಲಿ ಆಡುವುದೇ ವಿಶೇಷ ಅನುಭವ ಎಂದು ಹಲವು ಕ್ರಿಕೆಟರ್ಸ್ ಹೇಳಿದ್ದಾರೆ. ಈ ಮೈದಾನದಲ್ಲಿ ಆಡಲು ಕಾತುರರಾಗಿ ಕಾಯುತ್ತಾರೆ.[ಕೋಹ್ಲಿ ಅವರನ್ನು ಟಾರ್ಗೆಟ್ ಮಾಡಬೇಡಿ: ಅನುರಾಗ್ ಠಾಕೂರ್]

ಇಂಥ ವಿಶಿಷ್ಟ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದ ಟೆಸ್ಟ್ ಪಂದ್ಯ ಆಯೋಜನೆಗೊಂಡಿದೆ. ಮಾರ್ಚ್ 25ರಂದು ಆರಂಭಗೊಳ್ಳುವ ಬಾರ್ಡರ್- ಗವಾಸ್ಕರ್ ಟ್ರೋಫಿಯ ನಾಲ್ಕನೇ ಪಂದ್ಯಕ್ಕೂ ಮುನ್ನ ಉಭಯ ತಂಡಗಳು ನಡೆಸಿದ ತಾಲೀಮಿನ ಚಿತ್ರಗಳು ಇಲ್ಲಿವೆ....[ಟೀಂ ಇಂಡಿಯಾದಿಂದ ಶ್ರೇಯಸ್ ಗೆ ದಿಢೀರ್ ಬುಲಾವ್]

ಕುಂಬ್ಳೆ ಹಾಗೂ ಕೊಹ್ಲಿ

ಕುಂಬ್ಳೆ ಹಾಗೂ ಕೊಹ್ಲಿ

ಕೋಚ್ ಕುಂಬ್ಳೆ ಜತೆ ನಾಯಕ ವಿರಾಟ್ ಕೊಹ್ಲಿ ಚರ್ಚೆ

ನೆಟ್ ಅಭ್ಯಾಸದ ವೇಳೆ

ನೆಟ್ ಅಭ್ಯಾಸದ ವೇಳೆ

ನೆಟ್ ಅಭ್ಯಾಸದ ವೇಳೆ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್

ಕೊಹ್ಲಿ ಹೇಳುತ್ತಿರುವ ಗುಟ್ಟೇನು?

ಕೊಹ್ಲಿ ಹೇಳುತ್ತಿರುವ ಗುಟ್ಟೇನು?

ಅಭ್ಯಾಸದ ವೇಳೆ ತಂಡದ ಸದಸ್ಯರಿಗೆ ನಾಯಕ ಕೊಹ್ಲಿ ಹೇಳಿದ ಗುಟ್ಟೇನು?

ಆಟಗಾರರ ಮೆಚ್ಚುಗೆ

ಆಟಗಾರರ ಮೆಚ್ಚುಗೆ

ಹಿಮಾಚಲ ಪ್ರದೇಶದ ಧರ್ಮಶಾಲ ಕ್ರಿಕೆಟ್ ಮೈದಾನದಲ್ಲಿ ಆಟಗಾರರ ತಾಲೀಮು

ಸ್ಟೇಡಿಯಂ ವಿಹಂಗಮ ನೋಟ

ಸ್ಟೇಡಿಯಂ ವಿಹಂಗಮ ನೋಟ

ಧರ್ಮಶಾಲ ಮೈದಾನದ ವಿಹಂಗಮ ನೋಟ

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+