Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಂಬಂಧಿಗಳು ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹವಾದ ಹಾರ್ದಿಕ್ ಪಾಂಡ್ಯ-ನತಾಶಾ

Photos Of Hardik Pandya and Natasa Stankovic Marriage Celebration At Udaipur

ಭಾರತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಪತ್ನಿ ನತಾಶಾ ಸ್ಟಂಕೋವಿಕ್ ಮಂಗಳವಾರ ಪ್ರೇಮಿಗಳ ದಿನಾಚರಣೆಯಂದು ಮತ್ತೆ ಮದುವೆಯಾಗಿದ್ದಾರೆ. ಕಾನೂನುಬದ್ದವಾಗಿ ಮದುವೆಯಾದ ಮೂರು ವರ್ಷಗಳ ಬಳಿಕ ಜೋಡಿ ಅದ್ದೂರಿಯಾಗಿ ಮತ್ತೆ ಮದುವೆ ಮಾಡಿಕೊಂಡಿದೆ.

ಹಾರ್ದಿಕ್ ಪಾಂಡ್ಯ ಮದುವೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಮೂರು ವರ್ಷಗಳ ಹಿಂದೆ ನಾವು ತೆಗೆದುಕೊಂಡ ಪ್ರತಿಜ್ಞೆಯನ್ನು ನವೀಕರಿಸುವ ಮೂಲಕ ನಾವು ಈ ಪ್ರೀತಿಯ ದ್ವೀಪದಲ್ಲಿ ಪ್ರೇಮಿಗಳ ದಿನವನ್ನು ಖುಷಿಯಿಂದ ಆಚರಿಸಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಕುಟುಂಬ ಮತ್ತು ಸ್ನೇಹಿತರು ನಮ್ಮ ಜೊತೆ ಇದ್ದು ಆಶೀರ್ವದಿಸಿದ್ದಾರೆ" ಎಂದು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಮದುವೆಯ ಫೋಟೊ ಮತ್ತು ವಿಡಿಯೋಗಳು ಸಾಮಾಜಿ ಮಾಧ್ಯಮದಲ್ಲಿ ವೈರಲ್ ಆಗಿದೆ. ಪಾಂಡ್ಯ ವೇದಿಕೆಯಲ್ಲಿ ಅದ್ಭುತವಾಗಿ ಡ್ಯಾನ್ಸ್ ಮಾಡುವ ಮೂಲಕ ಸಂತಸದ ಕ್ಷಣಗಳನ್ನು ಅನುಭವಿಸಿದ್ದಾರೆ.

ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೊವಿಕ್ 2020ರ ಮೇ 31ರಂದು ಕಾನೂನುಬದ್ದವಾಗಿ ಮದುವೆಯಾಗಿದ್ದರು. ಅದೇ ವರ್ಷ ಜುಲೈನಲ್ಲಿ ದಂಪತಿಗೆ ಗಂಡು ಮಗು ಜನಿಸಿತ್ತು. ಮಗನಿಗೆ ಅಗಸ್ತ್ಯ ಎಂದು ನಾಮಕರಣ ಮಾಡಲಾಗಿತ್ತು.

Photos Of Hardik Pandya and Natasa Stankovic Marriage Celebration At Udaipur

ಫೋಟೊಗಳು ವೈರಲ್

ಸರಳವಾಗಿ ವಿವಾಹವಾಗಿದ್ದ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್‌ಗೆ ಅದ್ಧೂರಿಯಾಗಿ ಮದುವೆಯಾಗಬೇಕು ಎನ್ನುವ ಕನಸಿತ್ತಂತೆ. ತಮ್ಮ ಕನಸನ್ನು ಈ ವರ್ಷದ ಪ್ರೇಮಿಗಳ ದಿನಾಚರಣೆಯಂದು ತಾರಾ ಜೋಡಿ ಈಡೇರಿಸಿಕೊಂಡಿದೆ.

ಉದಯಪುರದಲ್ಲಿ ನಡೆದ ಈ ಮದುವೆ ಸಮಾರಂಭದಲ್ಲಿ ದಂಪತಿಗಳ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಕಾಣಿಸಿಕೊಂಡಿದ್ದರು. ವೈಟ್ ವೆಡ್ಡಿಂಗ್‌ನಲ್ಲಿ ಕುಟುಂಬದವರು ಮತ್ತು ಆಪ್ತ ಸ್ನೇಹಿತರ ಜೊತೆಯಲ್ಲಿ ಇಬ್ಬರೂ ತಮ್ಮ ಪ್ರತಿಜ್ಞೆಯನ್ನು ನವೀಕರಿಸಿದರು. ಕ್ರಿಶ್ಚಿಯನ್ ಸಂಪ್ರದಾಯದಂತೆ ಜೋಡಿ ಮದುವೆಯಾಗಿದೆ.

Photos Of Hardik Pandya and Natasa Stankovic Marriage Celebration At Udaipur

ಬಿಳಿ ಗೌನ್‌ನಲ್ಲಿ ಮಿಂಚಿದ ನತಾಶಾ

ಮದುವೆಯ ಸಂಭ್ರಮದಲ್ಲಿ ನತಾಶಾ ಸ್ಟಾಂಕೋವಿಕ್ ಬಿಳಿ ಬಣ್ಣದ ಗೌನ್‌ನಲ್ಲಿ ಮಿಂಚಿದ್ದಾರೆ. ಹಾರ್ದಿಕ್ ಪಾಂಡ್ಯ ಕಪ್ಪು ಬಣ್ಣದ ಸೂಟ್‌ನಲ್ಲಿ ಮಿಂಚಿದರು. ಹೂವಿನ ಗುಚ್ಛವನ್ನು ಹಿಡಿದ ನತಾಶಾ ಸ್ಟಾಂಕೋವಿಕ್ ಜೊತೆ ಹೆಜ್ಜೆ ಹಾಕಿದ ಹಾರ್ದಿಕ್ ಪಾಂಡ್ಯ, ನೃತ್ಯವನ್ನು ಮಾಡುವ ಮೂಲಕ ನೆರೆದಿದ್ದವರ ಖುಷಿಯನ್ನು ಹೆಚ್ಚಿಸಿದರು. ಮೂಲಗಳ ಪ್ರಕಾರ ಈ ಮದುವೆಗಾಗಿ ಕಳೆದ ವರ್ಷ ನವೆಂಬರ್‍ ನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿತ್ತಂತೆ. ಮದುವೆಯಲ್ಲಿ ಪಾಂಡ್ಯ ದಂಪತಿಗಳ ಪುತ್ರ ಅಗಸ್ತ್ಯ ಕೂಡ ಕಪ್ಪು ಬಣ್ಣದ ಸೂಟ್‌ನಲ್ಲಿ ಮಿಂಚಿದ್ದಾನೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಮುಕ್ತಾಯವಾದ ಬಳಿಕ ಹಾರ್ದಿಕ್ ಪಾಂಡ್ಯ ವಿಶ್ರಾಂತಿಯಲ್ಲಿದ್ದಾರೆ. ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ ಮುಗಿಯುವವರೆಗೆ ಅವರು ಕುಟುಂಬದ ಜೊತೆ ಕಾಲ ಕಳೆಯಲಿದ್ದಾರೆ.

ಟೆಸ್ಟ್ ಸರಣಿಯ ಬಳಿಕ ನಡೆಯಲಿರುವ ಏಕದಿನ ಸರಣಿಗೆ ಪಾಂಡ್ಯ ತಂಡಕ್ಕೆ ವಾಪಸಾಗಲಿದ್ದು, ನಂತರ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ.

Story first published: Wednesday, February 15, 2023, 16:12 [IST]
Other articles published on Feb 15, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+