ಚಿತ್ರಗಳು: ರೋಹಿತ್ ಶರ್ಮ- ರಿತಿಕಾ ಮದುವೆ ಸಂಭ್ರಮ
ಮುಂಬೈ, ಡಿ. 14: ಟೀಂ ಇಂಡಿಯಾದ ಪ್ರಮುಖ ಆಟಗಾರ, ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ ಅವರು ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಗೆಳತಿ ರಿತಿಕಾ ಜೊತೆ ವಿವಾಹ ಬಂಧನಕ್ಕೊಳಪಟ್ಟಿದ್ದಾರೆ. ರೋಹಿತ್ ಹಾಗೂ ರಿತಿಕಾ ಮದುವೆ ಆರತಕ್ಷತೆ ಸೋಮವಾರ ಐಷಾರಾಮಿ ಹೋಟೆಲ್ ನಲ್ಲಿ ನಡೆಯಲಿದೆ.
ಏಕದಿನ ಕ್ರಿಕೆಟ್‌ನಲ್ಲಿ ಎರಡು ಬಾರಿ ದ್ವಿಶತಕ ಬಾರಿಸಿರುವ ಸ್ಟಾರ್ ಕ್ರಿಕೆಟರ್ ರೋಹಿತ್ ಶರ್ಮ ಅವರು ತಮ್ಮ ಪ್ರೇಯಸಿ ರಿತಿಕಾ ಸಾಜ್‌ದೇ ಅವರ ಜೊತೆಗೆ ವಿವಾಹ ಬಂಧನದ ಹೊಸ ಇನ್ನಿಂಗ್ಸ್ ಗೆ ಕಾಲಿಟ್ಟಿದ್ದಾರೆ.[ಡಬ್ಬಲ್ ಸೆಂಚುರಿ ತಾರೆ ರೋಹಿತ್ ಶರ್ಮ ಮದುವೆ]
ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದ ರೋಹಿತ್ ಅವರು ಮುಂಬೈನ ಸ್ಟಾರ್ ಹೊಟೇಲ್‌ನಲ್ಲಿ ಹಮ್ಮಿಕೊಂಡಿರುವ ವೈಭವೋಪೇತ ವಿವಾಹ ಕಾರ್ಯಕ್ರಮದಲ್ಲಿ ರೋಹಿತ್ ರಿತಿಕಾರನ್ನು ವರಿಸಿದ್ದಾರೆ. ವಿವಾಹ ಸಮಾರಂಭದ ವೇಳೆ ಖ್ಯಾತ ಡಿಸೈನರ್ ರಾಘವೇಂದ್ರ ರಾಥೋಡ್ ಅವರು ವಿನ್ಯಾಸಗೊಳಿಸಿರುವ ಟ್ರೋಯ್ ಕೋಸ್ಟ ಸೂಟ್ ಅನ್ನು ರೋಹಿತ್ ಧರಿಸಿದ್ದರು.
ಈ ವಿವಾಹ ಸಮಾರಂಭದಲ್ಲಿ ಕ್ರಿಕೆಟ್‌ನ ಖ್ಯಾತ ಆಟಗಾರರಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹಾಗೂ ಅವರ ಪತ್ನಿ ಅಂಜಲಿ, ಹರ್ಭಜನ್‌ಸಿಂಗ್ ಹಾಗೂ ಅವರ ಪತ್ನಿ ಗೀತಾ ಬಸ್ರಾ, ಸುರೇಶ್‌ರೈನಾ, ದಿನೇಶ್ ಕಾರ್ತಿಕ್, ಯುವರಾಜ್‌ಸಿಂಗ್, ನಟಿ ಹೇಜಲ್ ಕೀಚ್, ಚೇತೇಶ್ವರ್ ಪೂಜರಾ, ರವೀಂದ್ರ ಜಡೇಜ ಸೇರಿದಂತೆ ಹಲವರು ಗಣ್ಯರು ಪಾಲ್ಗೊಂಡಿದ್ದರು.

ಡಿ.13ರಂದೇ ಮದುವೆಯಾದ ರೋಹಿತ್
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಹಾಗೂ ಏಕದಿನ ಸರಣಿ ನಂತರ ಬಿಡುವು ಮಾಡಿಕೊಂಡಿರುವ ರೋಹಿತ್ ಅವರು ಸದ್ಯ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಪಾಲ್ಗೊಂಡಿಲ್ಲ. ಇತ್ತೀಚೆಗೆ ಉತ್ತರಪ್ರದೇಶದ ಕುಸ್ತಿ ತಂಡವನ್ನು ಖರೀದಿಸಿದ್ದಾರೆ. ಡಿ.13 ಎಲ್ಲಾ ರೀತಿಯಿಂದಲೂ ಪ್ರಶಸ್ತವಾದ ದಿನವಾದ್ದರಿಂದ ಈ ದಿನವನ್ನೇ ಆಯ್ಕೆ ಮಾಡಲಾಗಿದೆ.

ಧೋನಿ ಅವರು ವಿವಾಹಕ್ಕೆ ಆಗಮಿಸಿರಲಿಲ್ಲ
ವಿಜಯ್ ಹಜಾರೆ ಟ್ರೋಫಿಯಲ್ಲಿ ಜಾರ್ಖಂಡ್ ಪರ ಆಡುತ್ತಿರುವ ಧೋನಿ ಅವರು ವಿವಾಹಕ್ಕೆ ಆಗಮಿಸಿರಲಿಲ್ಲ, ಅದರೆ, ಅಂಬಾನಿ ಅವರು ನೀಡಿದ ಔತಣ ಕೂಟಕ್ಕೆ ಬಿಡುವು ಮಾಡಿಕೊಂಡು ಬಂದು ಹೋದರು. ಸಚಿನ್ ತೆಂಡೂಲ್ಕರ್ ಸೇರಿದಂತೆ ವಿವಿಧ ಕ್ರಿಕೆಟರ್ ಗಳು ವಿವಾಹಕ್ಕೆ ಹಾಗೂ ಅದಕ್ಕೂ ಮುನ್ನ ಅಂಬಾನಿ ಅವರು ನೀಡಿದ ಪಾರ್ಟಿಗೆ ಬಂದಿದ್ದರು.

ಟ್ರಾಯ್ ಕೋಸ್ಟಾ ವಸ್ತ್ರ ವಿನ್ಯಾಸ
ವಿವಾಹ ಸಮಾರಂಭದ ವೇಳೆ ಖ್ಯಾತ ಡಿಸೈನರ್ ರಾಘವೇಂದ್ರ ರಾಥೋಡ್ ಅವರು ವಿನ್ಯಾಸಗೊಳಿಸಿರುವ ಟ್ರೋಯ್ ಕೋಸ್ಟ ಸೂಟ್ ಅನ್ನು ರೋಹಿತ್ ಧರಿಸಿದ್ದರು.

ಸಂಗೀತ್-ಆರತಕ್ಷತೆ ಎರಡೂ ಒಟ್ಟಿಗೆ
ರಿತಿಕಾ ಅವರ ಸೋದರ ಕುನಾಲ್ ಅವರು ಸೈಂಟ್ ರಿಗೀಸ್ ನಲ್ಲಿ ಸೋಮವಾರ ಸಂಗೀತ್ ಸಮಾರಂಭ ಆಯೋಜಿಸಿದ್ದಾರೆ. ರಿತಿಕಾ ಅವರ ತಾಯಿ ಟೀನಾ ಹಾಗೂ ಬಾಬಿ ಸಜ್ದಾ ಅವರು ವಿವಾಹ ಆರತಕ್ಷತೆಯನ್ನು ತಾಜ್ ಲ್ಯಾಂಡ್ಸ್ ಎಂಡ್ ನಲ್ಲಿ ಆಯೋಜಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications