ವಿಡಿಯೋ: ಬೌನ್ಸರ್ ಪೆಟ್ಟು ತಿಂದ ಶತಕ ವೀರ ಕೊಹ್ಲಿ
ಅಡಿಲೇಡ್, ಡಿ.11: ಅತಿಥೇಯ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪರಾಕ್ರಮ ಮೆರೆದಿದ್ದಾರೆ. ಅದರೆ, ಫಿಲ್ ಹ್ಯೂಸ್ ನೆನಪಿನ ಈ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಇನ್ನಿಂಗ್ಸ್ ನಲ್ಲೂ ಬೌನ್ಸರ್ ಬಿಡದಂತೆ ಕಾಡಿತ್ತು. ಕೊಹ್ಲಿ-ಬೌನ್ಸರ್ ಆಟದ ವಿಡಿಯೋ ನಿಮಗಾಗಿ ಇಲ್ಲಿದೆ
ಟೆಸ್ಟ್ ಕ್ರಿಕೆಟ್ ನಲ್ಲಿ ಏಳನೇ ಶತಕ, ಟೆಸ್ಟ್ ಕ್ಯಾಪ್ಟನ್ ಆಗಿ ಮೊದಲ ಇನ್ನಿಂಗ್ಸ್ ನಲ್ಲೇ ಶತಕ ಸಿಡಿಸಿದ ದಾಖಲೆಯನ್ನು ವಿರಾಟ್ ಕೊಹ್ಲಿ ಬರೆದು ಸುನೀಲ್ ಗವಾಸ್ಕರ್ ಮತ್ತು ವಿಜಯ್ ಹಜಾರೆ ಸಾಲಿಗೆ ಸೇರಿದರು. 158ಎಸೆತಗಳಲ್ಲಿ 115ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಅವರು ಅವರು ಮಿಚಲ್ ಜಾನ್ಸನ್ ಅವರ ಬೌನ್ಸರ್ ವೊಂದನ್ನು ಪುಲ್ ಮಾಡಲು ಕ್ಯಾಚಿತ್ತು ಔಟಾದರು.

ಅದರೆ, ಮೂರನೇ ದಿನದ ಆಟದ 31ನೇ ಓವರ್, ಭಾರತದ ಮೊದಲ 53ರನ್ ಗಳಿಸಿದ್ದ ಮುರಳಿ ವಿಜಯ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು. ಕ್ರೀಸ್ ಗೆ ಆಗಮಿಸಿದ ನಾಯಕ ಕೊಹ್ಲಿಗೆ ಮಿಚೆಲ್ ಜಾನ್ಸನ್ ಬೌನ್ಸರ್ ಮೂಲಕ ಸ್ವಾಗತಿಸಿದರು. ಬೌನ್ಸರ್ ಕಂಡು ಬಗ್ಗಲು ಯತ್ನಿಸಿದ ಕೊಹ್ಲಿ ಹೆಲ್ಮೆಟ್ ಗೆ ಚೆಂಡು ಬಡಿಯಿತು. ತಕ್ಷಣವೇ ಹೆಲ್ಮೆಟ್ ತೆಗೆದು ಕೊಹ್ಲಿ ತಲೆಕೆಡವಿಕೊಂಡರು.

ಆತಂಕ ಮೂಡಿಸಿದ ಕ್ಷಣ: ಹ್ಯೂಸ್ ಅಕಾಲಿಕ ಸಾವಿಗೆ ಕಾರಣವಾದ ಬೌನ್ಸರ್ ಎಲ್ಲಾ ಆಟಗಾರರನ್ನು ಕಾಡುವಾಗ ಕೊಹ್ಲಿಗೆ ಪೆಟ್ಟು ತಿಂದ ಕ್ಷಣ ಆಸೀಸ್ ಆಟಗಾರರು ಕೊಹ್ಲಿ ಬಳಿ ತಕ್ಷಣವೇ ತೆರಳಿದರು. ಮೈಕಲ್ ಕ್ಲಾರ್ಕ್, ಜಾನ್ಸನ್ ಅಲ್ಲದೆ ಅಂಪೈರ್ ಗಳು ಕೂಡಾ ಕೊಹ್ಲಿ ಬಳಿ ಬಂದು ವಿಚಾರಿಸಿದರು.
ಟೆಸ್ಟ್ ಕ್ರಿಕೆಟ್ ನಲ್ಲಿ ಬೌನ್ಸರ್ ಇರಬೇಕೆ? ಬೇಡವೇ? ಎಂಬ ಚರ್ಚೆ ನಡುವೆ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಬೌನ್ಸರ್ ಗಳು ಬಳಕೆಯಾಗುತ್ತಲೇ ಇವೆ. ಟೀಂ ಇಂಡಿಯಾ ಬೌಲರ್ ಗಳು ಕೂಡಾ ಧೈರ್ಯವಾಗಿ ಬೌನ್ಸರ್ ಎಸೆದಿದ್ದರು. ಅದರೆ, ಆಸೀಸ್ ಬೌಲರ್ ಎಸೆದ ಚೆಂಡು ಹೆಲ್ಮೆಟ್ ಗೆ ಬಡಿದಿದ್ದು ಕೆಲಕಾಲ ಆತಂಕದ ವಾತಾವರಣ ಸೃಷ್ಟಿಸಿತ್ತು.
ವಿರಾಟ್ ಕೊಹ್ಲಿ -ಮಿಚೆಲ್ ಜಾನ್ಸನ್- ಬೌನ್ಸರ್ ಬಾಲ್ ಕುರಿತಂತೆ ಕ್ರಿಕೆಟ್ ಆಸ್ಟ್ರೇಲಿಯಾ ಸರಣಿ ಟ್ವೀಟ್ ಮಾಡಿ ವಿಡಿಯೋ ಕೂಡಾ ಬಿಟ್ಟಿದೆ. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications