ಹರ್ಭಜನ್ ಸಿಂಗ್ -ಗೀತಾ ಮದುವೆ ಕರೆಯೋಲೆ
ಚಂದೀಗಢ, ಅ. 05: ಟೀಂ ಇಂಡಿಯಾದ ಹಿರಿಯ ಆಟಗಾರ ಹರ್ಭಜನ್ ಸಿಂಗ್ ಅವರು ತಮ್ಮ ದೀರ್ಘಕಾಲದ ಗೆಳತಿ, ಬಾಲಿವುಡ್ ನಟಿ ಗೀತಾ ಬಸ್ರಾ ಜೊತೆ ಮದುವೆಯಾಗಲು ಸಿದ್ಧರಾಗುತ್ತಿದ್ದಾರೆ. ಮದುವೆ ಸಿದ್ಧತೆ ಭರದಿಂದ ಸಾಗಿದೆ. ಈ ನಡುವೆ ಮದುವೆ ಕರೆಯೋಲೆ ವಿನ್ಯಾಸ ಟ್ವಿಟ್ಟರ್ ನಲ್ಲಿ ಬಹಿರಂಗವಾಗಿದೆ.
ಹರ್ಭಜನ್ ಸಿಂಗ್ ಹಾಗೂ ಗೀತಾ ಅವರ ಮದುವೆ 2015ರ ಭರ್ಜರಿ ಮದುವೆಗಳಲ್ಲಿ ಒಂದೆನಿಸಬೇಕು ಎಂಬುದು ಆಯೋಜಕ ಸಂಸ್ಥೆಯ ಗುರಿಯಾಗಿದೆ. ರಾಜ ಪರಿವಾರದ ಕರೆಯೋಲೆಗಳ ಮಾದರಿಯಲ್ಲಿ ಆಹ್ವಾನ ಪತ್ರಿಕೆ ವಿನ್ಯಾಸ ಮಾಡಲಾಗಿದೆ. ಕೆಂಪು ಹಾಗೂ ಚಿನ್ನದ ಬಣ್ಣದ ಮೆರಗಿನ ಈ ಪತ್ರಿಕೆಯಲ್ಲಿ ಇಬ್ಬರ ಹೆಸರಿನ ಮೊದಲ ಅಕ್ಷರಗಳನ್ನು ಮುದ್ರಿಸಲಾಗಿದೆ.

ಡಿಸೈನರ್ ಎಡಿ ಸಿಂಗ್ ಅವರು ಆಹ್ವಾನ ಪತ್ರಿಕೆಯ ಚಿತ್ರಗಳನ್ನು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಹೊರಬಿಟ್ಟಿದ್ದಾರೆ.
ವಿವಾಹ ಮಹೋತ್ಸವದಲ್ಲಿ ಸಂಗೀತ್, ಮೆಹಂದಿ, ಮದುವೆ, ಆರತಕ್ಷತೆ ಸೇರಿದಂತೆ ಐದು ದಿನಗಳ ಸಂಭ್ರಮ ಇರುತ್ತದೆ. ಅಕ್ಟೋಬರ್ 27ರಿಂದ ನವೆಂಬರ್ 1 ರ ತನಕ ದೇಶದ ಅನೇಕ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ ಗೀತಾ ಹಾಗೂ ಹರ್ಭಜನ್ ಅವರು ಜಲಂಧರ್ ನಿಂದ 20 ಕಿ.ಮೀ ದೂರದಲ್ಲಿರುವ ಫಗ್ವಾರ ರಸ್ತೆಯಲ್ಲಿನ ಹೋಟೆಲ್ ಕ್ಲಬ್ ಕಬಾನಾದಲ್ಲಿ ಇಬ್ಬರು ವಿವಾಹ ಬಂಧನಕ್ಕೊಳಪಡಲಿದ್ದಾರೆ. ಸದ್ಯ ಹರ್ಭಜನ್ ಆವರು ಟೀಂ ಇಂಡಿಯಾ ಜೊತೆ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಟಕ್ಕೆ ಮುಂದಾಗಿದ್ದಾರೆ. (ಒನ್ ಇಂಡಿಯಾ ಸುದ್ದಿ)
Story first published: Wednesday, January 3, 2018, 10:03 [IST]
Other articles published on Jan 3, 2018
Read in English: Pic: Harbhajan's wedding invitation card
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications