ಪ್ರಿಯಾಂಕಾ ಜತೆ ಸುರೇಶ್ ರೈನಾ ಪ್ಯಾರಿಸ್ ಪ್ರಣಯ
ಬೆಂಗಳೂರು, ಮೇ. 30: ಕೊನೆಗೂ ಪ್ರೇಮ ಪಕ್ಷಿಗಳು ಒಂದಾಗಿವೆ. ಇಷ್ಟು ದಿನ ಐಪಿಎಲ್ ಪಂದ್ಯಾವಳಿ ಎಂದು ಬಿಜಿಯಾಗಿದ್ದ ಕ್ರಿಕೆಟಿಗ ಸುರೇಶ್ ರೈನಾ ತಮ್ಮ ಪತ್ನಿ ಪ್ರಿಯಾಂಕಾ ಚೌಧರಿ ಜತೆ ಪ್ಯಾರಿಸ್ ನಲ್ಲಿ ದಿನ ಕಳೆಯುತ್ತಿದ್ದಾರೆ.
ಏಕದಿನ ವಿಶ್ವಕಪ್ ಮುಗಿದ ತಕ್ಷಣ ಬಾಲ್ಯದ ಗೆಳತಿಯನ್ನು ರೈನಾ ಮದುವೆಯಾಗಿದ್ದರು. ಆದರೆ ತಕ್ಷಣವೇ ಐಪಿಎಲ್ ಆರಂಭವಾಗಿದ್ದರಿಂದ ಪತ್ನಿ ಜತೆ ಹೆಚ್ಚಿನ ಸಮಯ ಕಳಿಯಲು ಸಾಧ್ಯವಾಗಿರಲಿಲ್ಲ.[ಬಾಂಗ್ಲಾ ಪ್ರವಾಸಕ್ಕೆ ಯಾರ್ಯಾರು ಹೋಗ್ತಾ ಇದ್ದಾರೆ?]
ಹೆಂಡತಿಯ ಜತೆ ಇರುವ ಫೋಟೋಗಳನ್ನು ರೈನಾ ಸಾಮಾಜಿಕ ತಾಣ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ. ನಿನ್ನನ್ನು ಕಾಣಲು ಕಾತರದಿಂದ ಇದ್ದೇನೆ ಎಂದು ಸುರೇಶ್ ರೈನಾ ಹೆಂಡತಿಯ ಫೋಟೋ ಹಾಕಿ ಮೇ 20 ರಂದು ಟ್ವೀಟ್ ಮಾಡಿದ್ದರು.

ಜಗ ಮೆಚ್ಚಿದ ಜೋಡಿ
ಹೆಂಡತಿ ಪ್ರಿಯಾಂಕಾ ಚೌಧರಿ ಅವರೊಂದಿಗೆ ಪ್ಯಾರಿಸ್ ನಲ್ಲಿ ಸಂತಸದ ಕ್ಷಣ ಸವಿಯುತ್ತಿರುವ ಸ್ಫೋಟಕ ಆಟಗಾರ ಸುರೇಶ್ ರೈನಾ.

ಬಾಲ್ಯದ ಗೆಳೆಯರು
ರೈನಾ ಮತ್ತು ಪ್ರಿಯಾಂಕಾ ಬಾಲ್ಯ ಸ್ನೇಹಿತರು. ಆದರೆ ಇಬ್ಬರ ನಡುವೆ ಪ್ರೀತಿ ಹುಟ್ಟಿದ್ದು ಇತ್ತೀಚೆಗೆ. ಕಳೆದ ಏಪ್ರಿಲ್ ನಲ್ಲಿ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಅದ್ದೂರಿ ಮದುವೆ ನೆರವೇರಿತ್ತು.

ಒಂದಾದ ದಂಪತಿ
ಮದುವೆಯಾದ ತಕ್ಷಣ ರೈನಾ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೇರಿಕೊಂಡರೆ ಪ್ರಿಯಾಂಕಾ ಕೆಲಸದ ನಿಮಿತ್ತ ನೆದರ್ ಲೆಂಡ್ ಗೆ ತೆರಳಿದ್ದರು.

ಅದ್ದೂರಿ ಮದುವೆಗೆ ಸಾಕ್ಷಿಯಾಗಿದ್ದ ಗಣ್ಯರು
ದೆಹಲಿಯ ಲೀಲಾ ಪ್ಯಾಲೇಸ್ ನಲ್ಲಿ ನಡೆದಿದ್ದ ಟಿ-20 ಸ್ಪೆಷಲಿಸ್ಟ್ ಮದುವೆಗೆ ಟೀಮ್ ಇಂಡಿಯಾ ನಾಯಕ ಎಂ ಎಸ್ ಧೋನಿ ಸೇರಿದಂತೆ ಚೆನ್ನೈ ಸೂಪರ್ ಕಿಂಗ್ಸ್ ಆಟಗಾರರು ಮತ್ತು ಬಾಲಿವುಡ್ ನಟರು ಹಾಜರಿದ್ದರು.
ಬಾಂಗ್ಲಾ ಪ್ರವಾಸದವರೆಗೂ ರೈನಾ ಪ್ರಣಯ
ಟೀಮ್ ಇಂಡಿಯಾ ಬಾಂಗ್ಲಾ ಪ್ರವಾಸ ಕೈಗೊಳ್ಳಲಿದ್ದು ಅಲ್ಲಿವರೆಗೆ ರೈನಾ ಪ್ಯಾರಿಸ್ ನಲ್ಲಿ ಪತ್ನಿ ಜತೆ ದಿನ ಕಳೆಯಲಿದ್ದಾರೆ. ಜೂ.10ರಿಂದ ಬಾಂಗ್ಲಾದೇಶ ಪ್ರವಾಸ ಆರಂಭಗೊಳ್ಳಲಿದ್ದು 1 ಟೆಸ್ಟ್ ಪಂದ್ಯ ಹಾಗೂ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಉಭಯ ದೇಶಗಳ ನಡುವೆ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications