ಹರ್ಭಜನ್ ಸಿಂಗ್- ಗೀತಾ ಮದುವೆ ಮೆಹಂದಿ ಸಂಭ್ರಮ
ಚಂದೀಗಢ, ಅ.27: ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಬಾಲಿವುಡ್ ನಟಿ ಗೀತಾ ಬಾಸ್ರಾ ಅವರ ಮದುವೆ ಸಂಭ್ರಮ ಆರಂಭವಾಗಿದೆ. ಸುಮಾರು ಐದು ದಿನಗಳ ಕಾಲ ಸಾಂಪ್ರದಾಯಿಕ ಪಂಜಾಬಿ ಶೈಲಿ ಮದುವೆ ನಡೆಯಲಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಹರ್ಭಜನ್ ಲಗ್ನಪತ್ರಿಕೆ ನೀಡಿ ಆಹ್ವಾನಿಸಿದ್ದ ಹರ್ಭಜನ್ ಸಿಂಗ್ ಅವರು ತೊಟ್ಟಿದ್ದ ಉಡುಪಿನ ಬಗ್ಗೆ ಹೆಚ್ಚಿನ ಚರ್ಚೆಯಾಗಿತ್ತು. ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ನೀಲಿ ಬಣ್ಣ ಜೀನ್ಸ್ ಧರಿಸಿದ್ದ ಹರ್ಭಜನ್ ಅವರು ಎಲ್ಲರಿಗೂ ಅಚ್ಚರಿಯಾಗುವಂತೆ ಮದುವೆಯ ಮೆಹಂದಿ ಕಾರ್ಯಕ್ರಮಕ್ಕೂ ಜೀನ್ಸ್ ಹಾಗೂ ಟೀಶರ್ಟ್ ಹಾಕಿಕೊಂಡು ಬಂದಿದ್ದಾರೆ.
ಅಕ್ಟೋಬರ್ 29ರಂದು ಜಲಂಧರ್ ನಿಂದ 20 ಕಿಲೋಮೀಟರ್ ದೂರದಲ್ಲಿರುವ ಹೊಟೇಲೊಂದರಲ್ಲಿ ಭಜ್ಜಿ ಮದುವೆ ನಡೆಯಲಿದೆ. ಅನೇಕ ಹಾಲಿ, ಮಾಜಿ ಕ್ರಿಕೆಟರ್ಸ್, ಉದ್ಯಮಿಗಳು, ಸಿನಿಮಾ ರಂಗದ ತಾರೆಯರು ಈ ಮದುವೆಗೆ ಆಗಮಿಸುತ್ತಿದ್ದಾರೆ. ಮದುವೆ ಆರತಕ್ಷತೆ ನವದೆಹಲಿಯಲ್ಲಿ ನಡೆಯಲಿದೆ.[ಮೋದಿಗೆ 'ಮದುವೆ ಆಮಂತ್ರಣ' ಪತ್ರಿಕೆ ಕೊಟ್ಟ ಹರ್ಭಜನ್]
ಇತ್ತೀಚೆಗೆ ಹರ್ಭಜನ್ ಹಾಗೂ ಗೀತಾ ಅವರ ಮದುವೆ ಆಮಂತ್ರಣ ಪತ್ರಿಕೆಯ ವಿನ್ಯಾಸ ಪ್ರಕಟವಾಗಿತ್ತು.ವಿವಾಹ ಮಹೋತ್ಸವದಲ್ಲಿ ಸಂಗೀತ್, ಮೆಹಂದಿ, ಮದುವೆ, ಆರತಕ್ಷತೆ ಸೇರಿದಂತೆ ಐದು ದಿನಗಳ ಸಂಭ್ರಮ ಇರುತ್ತದೆ. [ಸಂಗೀತ್ ಪೋಗ್ರಾಂಗೆ ಸೈಕಲೇರಿ ಬಂದ ಗೀತಾ -ಹರ್ಭಜನ್]
ಅಕ್ಟೋಬರ್ 27ರಿಂದ ನವೆಂಬರ್ 1 ರ ತನಕ ದೇಶದ ಅನೇಕ ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಮೆಹಂದಿ ಕಾರ್ಯಕ್ರಮದ ಕೆಲ ಚಿತ್ರಗಳು ಇಲ್ಲಿವೆ...

ಹರ್ಭಜನ್ ಜೊತೆ ಗೀತಾ
ಹರ್ಭಜನ್ ಜೊತೆ ಪಿಂಕ್ ಹಾಗೂ ಹಳದಿ ಬಣ್ಣ ಮಿಶ್ರಿತ ಉಡುಪಿನಲ್ಲಿ ವಧು ಗೀತಾ

ಆಕರ್ಷಕವಾಗಿ ಮದುವೆ ಕರೆಯೋಲೆ
ಆಕರ್ಷಕವಾಗಿ ಮದುವೆ ಕರೆಯೋಲೆ ಯಲ್ಲಿ ಆರ್ ಹಾಗೂ ಜಿ ಎಂದು ಇಂಗ್ಲೀಷ್ ವರ್ಣಗಳನ್ನು ಹಾಕಲಾಗಿದ್ದು, ರಾಜ ಪರಿವಾರದ ಮನೆ ಕರೆಯೋಲೆಯಂತೆ ವಿನ್ಯಾಸಗೊಳಿಸಲಾಗಿದೆ.

ಹಾಡು ಕುಣಿತ ಸಂಭ್ರಮವೋ ಸಂಭ್ರಮ
ಹಾಡು ಕುಣಿತ ಸಂಭ್ರಮವೋ ಸಂಭ್ರಮ ಕಂಡು ಬಂದಿದೆ. ಮದುವೆ ಆರತಕ್ಷತೆಯಲ್ಲಿ ಮಿಕಾ ಸಿಂಗ್ ಗಾಯನ ಇರುವ ಸಾಧ್ಯತೆಯಿದೆ.

ಬಂಧು ಮಿತ್ರರೊಡನೆ ಹರ್ಭಜನ್ ಸಿಂಗ್
ಬಂಧು ಮಿತ್ರರೊಡನೆ ಹರ್ಭಜನ್ ಸಿಂಗ್ ಸಮಾಲೋಚನೆಯಲ್ಲಿ ತೊಡಗಿದ್ದಾರೆ. ರಾಘವೇಂದ್ರ ರಾಥೋಡ್ ಹಾಗೂ ಅರ್ಚನಾ ಕೋಚಾರ್ ಅವರು ವಸ್ತ್ರ ವಿನ್ಯಾಸ ಮಾಡಿದ್ದಾರೆ ಎಂಬ ಸುದ್ದಿಯಿದೆ.

ಹೋಟೆಲ್ ಕ್ಲಬ್ ಕಬಾನಾದಲ್ಲಿ
ಗೀತಾ ಹಾಗೂ ಹರ್ಭಜನ್ ಅವರು ಜಲಂಧರ್ ನಿಂದ 20 ಕಿ.ಮೀ ದೂರದಲ್ಲಿರುವ ಫಗ್ವಾರ ರಸ್ತೆಯಲ್ಲಿನ ಹೋಟೆಲ್ ಕ್ಲಬ್ ಕಬಾನಾದಲ್ಲಿ ಇಬ್ಬರು ವಿವಾಹ ಬಂಧನಕ್ಕೊಳಪಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications