For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾದಲ್ಲಿ ಪಿಂಕ್ ಬಾಲ್‌ ಟೆಸ್ಟ್ ಸವಾಲೆನಿಸಲಿದೆ : ರೋಹಿತ್ ಶರ್ಮಾ

Pink Ball Test In Australia Will Be Challenging: Rohit Sharma

ಟೀಮ್ ಇಂಡಿಯಾ ತನ್ನ ಮೊದಲ ಹಗಲು-ರಾತ್ರಿ ಕ್ರಿಕೆಟ್ ಆಟವನ್ನು ಕಳೆದ ವರ್ಷ ಬಾಂಗ್ಲಾದೇಶದ ವಿರುದ್ಧ ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಆಡಿತ್ತು. ಈಗ ಮತ್ತೊಂದು ಅಹರ್ನಿಶಿ ಪಂದ್ಯಕ್ಕೆ ಯೋಜನೆ ಸಿದ್ಧವಾಗಿದ್ದು ಅದು ಆಸ್ಟ್ರೇಲಿಯಾ ಪ್ರವಾಸದಲ್ಲಿ ನಡೆಯಲಿದೆ. ಈ ಬಗ್ಗೆ ಟೀಮ್ ಇಂಡಿಯಾದ ಆಟಗಾರ ರೋಹಿತ್ ಶರ್ಮಾ ಪ್ರತಿಕ್ರಿಯಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಅಹರ್ನಿಶಿ ಪಂದ್ಯ ನಿಜಕ್ಕೂ ದೊಡ್ಡ ಸವಾಲೆನಿಸಲಿದೆ ಎಂದು ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಇನ್ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳೊಂದಿಗೆ ಪ್ರಶ್ನೋತ್ತದಲ್ಲಿ ರೋಹಿತ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಭಿಮಾನಿಯೋರ್ವ ಕೇಳಿದ ಪ್ರಶ್ನೆಗೆ ರೋಹಿತ್ ಈ ಉತ್ತರನ್ನು ನೀಡಿದ್ದಾರೆ.

ಈ ವರ್ಷಾಂತ್ಯದಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಇದಕ್ಕೆ ಸ್ಥಳ ಹಾಗೂ ದಿನಾಂಕವನ್ನು ಕೂಡ ಈಗಾಲೇ ಘೋಷಿಸಲಾಗಿದೆ. ಡಿಸೆಂಬರ್ 3ರಿಂದ ಈ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿಗೆ ತಯಾರಿಯ ಬಗ್ಗೆ ಕೇಳಿದ ಪ್ರಶ್ನೆಗೆ ರೋಹಿತ್ ತಮ್ಮ ಉತ್ತರವನ್ನು ನೀಡಿದ್ದಾರೆ.

ಡಿಸೆಂಬರ್ 11 ರಿಂದ ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯವನ್ನು ಡೇ-ನೈಟ್ ಪಂದ್ಯವನ್ನಾಗಿ ಆಡಿಸಲು ತೀರ್ಮಾನಿಸಲಾಗಿದೆ. ನಾಲ್ಕು ಪಂದ್ಯಗಳ ಈ ಸರಣಿ ಬ್ರಿಸ್ಬೇನ್(ಡಿಸೆಂಬರ್ 3-7), ಅಡಿಲೇಡ್(ಡಿಸೆಂಬರ್ 11-15), ಮೆಲ್ಬೋರ್ನ್(ಡಿಸೆಂಬರ್26-30 ) ಮತ್ತು ಸಿಡ್ನಿಯಲ್ಲಿ (ಜನವರಿ3-7)ನಡೆಯಲಿದೆ.

ಅಭಿಮಾನಿಗಳೊಂದಿಗೆ ನಡೆಸಲಾದ ಪ್ರಶ್ನೋತ್ತರದ ಸಂದರ್ಭದಲ್ಲಿ ರೋಹಿತ್ ಮತ್ತೊಂದು ಕುತೂಹಲಕಾರಿ ಸಂಗತಿಯನ್ನು ಹೇಳಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಮತ್ತು ಇಂಗ್ಲೆಂಡ್ ಕ್ರಿಕೆಟರ್ ಜೇಸನ್ ರಾಯ್ ಬ್ಯಾಟಿಂಗ್ ಮಾಡುವುದನ್ನು ಆನಂದಿಸುವುದಾಗಿ ತಿಳಿಸಿದ್ದಾರೆ.

Story first published: Tuesday, June 16, 2020, 21:02 [IST]
Other articles published on Jun 16, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+