Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

PBKS vs RCB IPL 2024: ಆರ್‌ಸಿಬಿ ಪ್ಲೇಆಫ್‌ ಕನಸು ಜೀವಂತ; ಪಂಜಾಬ್‌ ಎದುರು ಜಯ

ಮೇ 9 ಶುಕ್ರವಾರ, ಧರ್ಮಶಾಲಾ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನ 58ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್‌) ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ ಗೆಲುವಿನ ಯಾತ್ರೆಯನ್ನು ಮುಂದುವರೆಸಿದೆ.

ಆರ್‌ಸಿಬಿ ಎದುರು ಪಂಜಾಬ್‌ ಆಲೌಟ್‌ ಆಗುವ ಮೂಲಕ ಪಂದ್ಯ ಸೋತು ಪ್ಲೇಆಪ್‌ ರೇಸ್‌ನಿಂದ ಹೊರಗುಳಿದಿದೆ. ಆರ್‌ಸಿಬಿ ಪರ ಬೌಲರ್ಸ್ ಸಂಘಟಿತ ಬೌಲಿಂಗ್‌ ದಾಳಿ ನಡೆಸಿದದರು. ಕೇವಲ 17 ಓವರ್‌ಗಳಲ್ಲಿ ಪಂಜಾಬ್ 181 ರನ್‌ ಗಳಿಸಿ ಆಲೌಟ್‌ ಆಗಿದೆ. ಈ ಮೂಲಕ ಆರ್‌ಸಿಬಿ 60 ರನ್‌ಗಳ ಭರ್ಜರಿ ಜಯ ಕಂಡಿದೆ.‌‌

PKBS vs RCB Royal Challengers Bengaluru win against Punjab Kings

ಆರ್‌ಸಿಬಿ ನೀಡಿದ ಟಫ್‌ ಟಾರ್ಗೆಟ್‌ ಬೆನ್ನಟ್ಟಿದ ಪಂಜಾಬ್‌ ಕಿಂಗ್ಸ್‌ ಉತ್ತಮ ಆರಂಭ ಪಡೆಯಲಿಲ್ಲ. ಶುರುವಿನಿಲ್ಲೇ ಪ್ರಭ್‌ಸಿಮ್ರಾನ್ ಸಿಂಗ್ (6) ವಿಕೆಟ್‌ ಪಡೆದ ಆರ್‌ಸಿಬಿ ಲಕ್ಕಿ ಬಾಯ್‌ ಖ್ಯಾತಿಯ ಸ್ವಪ್ನಿಲ್ ಸಿಂಗ್ ಪಂಜಾಬ್‌ಗೆ ಶಾಕ್‌ ನೀಡಿದರು. ಬಳಿಕ ಮೂರನೇ ಕ್ರಮಾಂಕದಲ್ಲಿ ಬಂದ ರಿಲೀ ರೊಸೊವ್, ಆರಂಭಿಕ ಜಾನಿ ಬೈರ್‌ಸ್ಟೋವ್ ಜೊತೆ ಬಿರುಸಿನ ಬ್ಯಾಟಿಂಗ್‌ ಮಾಡಿದರು.

ಉತ್ತಮ ಲಯದಲ್ಲಿ ಕಾಣಿಸುತ್ತಿದ ಜಾನಿ ಬೈರ್‌ಸ್ಟೋವ್ (27) ಲಾಕಿ ಫರ್ಗುಸನ್ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಂಡರು. ನಂತರ ನಾಲ್ಕನೇ ಕ್ರಮಾಂಕದಲ್ಲಿ ಆಗಮಿಸಿದ ಶಶಾಂಕ್ ಸಿಂಗ್ ಅಬ್ಬರ ಬ್ಯಾಟಿಂಗ್‌ ಮಾಡಿದರು. ಈ ಹಂತದಲ್ಲಿ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ ರಿಲೀ ರೊಸೊವ್ ಅರ್ಧಶತಕ ಬಾರಿಸಿದರು.

ರಿಲೀ ರೊಸೊವ್ ಕೇವಲ 27 ಎಸೆತಗಳಲ್ಲಿ 9 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 61 ರನ್‌ ಹೊಡೆದು ಆರ್‌ಸಿಬಿ ಗೆಲುವಿಗೆ ಅಡ್ಡಿಯಾಗಿದರು. ಆದರೆ ಕರಣ್‌ ಶರ್ಮಾ ಸರಿಯಾದ ಸಮಯಕ್ಕೆ ಬಂದು ರಿಲೀ ರೊಸೊವ್ ಅವರನ್ನು ಔಟ್‌ ಮಾಡಿದರು. ಬಳಿಕ ಬಂದ ಜಿತೇಶ್‌ ಶರ್ಮಾ (5), ಲಿಯಾಮ್ ಲಿವಿಂಗ್‌ಸ್ಟೋನ್ (0) ಸಹಾ ಉತ್ತಮ ಆಟವಾಡಲಿಲ್ಲ.

ಇನ್ನೊಂದೆಡೆ ಕೇವಲ 19 ಎಸೆತಗಳಲ್ಲಿ 4 ಬೌಂಡರಿ ಹಾಗು 2 ಸಿಕ್ಸರ್ ಮೂಲಕ 37 ರನ್‌ ಗಳಿಸಿ ಉತ್ತಮವಾಗಿ ಆಡುತ್ತಿದ ಶಶಾಂಕ್ ಸಿಂಗ್ ದುರದೃಷ್ಟಕರ ರನ್‌ ಔಟ್‌ಗೆ ಬಲಿಯಾದರು. ಈ ಮಧ್ಯೆ ನಾಯಕ ಸ್ಯಾಮ್ ಕರ್ರನ್ 22 ರನ್‌ ಗಳಿಸಿದರು. ಆದರೆ ಲಾಕಿ ಫರ್ಗುಸನ್ ಅವರು ಸ್ಯಾಮ್ ಕರ್ರನ್ ಔಟ್‌ ಮಾಡುವಲ್ಲಿ ಯಶಸ್ವಿಯಾದರು.

ಕೊನೆಯಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್‌ ಅಶುತೋಷ್ ಶರ್ಮಾ (8), ಹರ್ಷಲ್ ಪಟೇಲ್ (0) ಮತ್ತು ರಾಹುಲ್ ಚಹಾರ್ (0) ವಿಕೆಟ್‌ ಕಳೆದುಕೊಂಡು ಪಂಜಾಬ್‌ ಆಲೌಟ್‌ ಆಗಲು ಕಾರಣನಾದರು.

ಆರ್‌ಸಿಬಿ ಬ್ಯಾಟಿಂಗ್‌ ಜೊತೆಗೆ ಬೌಲಿಂಗ್‌ನಲ್ಲೂ ಸುಧಾರಣೆ ಕಂಡಿದ್ದು, ಪಂಜಾಬ್‌ ವಿರುದ್ಧ ಗೆಲುವು ಸಾಧಿಸಿತು. ಆರ್‌ಸಿಬಿ ಪರ ಮೊಹಮ್ಮದ್ ಸಿರಾಜ್ 3 ವಿಕೆಟ್‌ ಕಬಳಿಸಿದರೆ, ಸ್ವಪ್ನಿಲ್ ಸಿಂಗ್, ಕರಣ್‌ ಶರ್ಮಾ ಮತ್ತು ಲಾಕಿ ಫರ್ಗುಸನ್ 2 ವಿಕೆಟ್‌ ಪಡೆದುಕೊಂಡರು.

Story first published: Thursday, May 9, 2024, 23:47 [IST]
Other articles published on May 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+