ಪಿಕೆಎಲ್ ಅಂಕಪಟ್ಟಿ: ಬೆಂಗಳೂರು ಬೆನ್ನಲ್ಲೇಯಿದೆ ಬೆಂಗಾಲ್ ವಾರಿಯರ್ಸ್!

ಕೋಲ್ಕತ್ತಾ, ಡಿಸೆಂಬರ್ 26: ಪ್ರೊ ಕಬಡ್ಡಿ ಲೀಗ್ 'ಬಿ' ಝೋನ್ ನಲ್ಲಿರುವ ಬೆಂಗಳೂರು ಬುಲ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ತಂಡಗಳು ಅಂಕಪಟ್ಟಿಯಲ್ಲಿ ಭರ್ಜರಿ ಜಿದ್ದಾಜಿದ್ದಿಗಿಳಿದಿವೆ. ಸದ್ಯದ ಮಟ್ಟಿಗೆ ಬೆಂಗಳೂರು ಅಗ್ರ ಸ್ಥಾನದಲ್ಲಿ, ಬೆಂಗಾಲ್ ದ್ವಿತೀಯ ಸ್ಥಾನದಲ್ಲಿದೆ. ಆದರೆ ಬೆಂಗಾಲ್ ಇನ್ನೊಂದು ಪಂದ್ಯ ಗೆದ್ದರೂ, ಬೆಂಗಳೂರು ಒಂದು ಪಂದ್ಯ ಸೋತರೂ ಅಂಕ ಪಟ್ಟಿಯ ಏರುಪೇರಿಗೆ ದಾರಿಯಾಗಲಿದೆ.
ಮಂಗಳವಾರ (ಡಿಸೆಂಬರ್ 25) ವೆಸ್ಟ್ ಬೆಂಗಾಲ್‌ನ ಕೋಲ್ಕತ್ತಾದಲ್ಲಿರುವ ನೇತಾಜಿ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಬೆಂಗಾಲ್ ತಂಡ ತೆಲುಗು ಟೈಟಾನ್ಸ್ ಅನ್ನು 39-34ರ ಅಂತರದಿಂದ ಸೋಲಿಸಿತು. ಹೀಗಾಗಿ ಬಿ ಝೋನ್ ಅಂಕಪಟ್ಟಿಯಲ್ಲಿ ಬೆಂಗಾಲ್ ಹೆಚ್ಚು ಅಂಕ ಕದಿಯುವಲ್ಲಿ ಯಶಸ್ವಿಯಾಗಿದೆ.
ಬಿ ಝೋನ್‌ನಲ್ಲಿ ಬೆಂಗಳೂರು ಆಡಿರುವ 20 ಪಂದ್ಯಗಳಲ್ಲಿ 12 ಗೆಲುವುಗಳೊಂದಿಗೆ 72 ಅಂಕ ಕಲೆ ಹಾಕಿದ್ದರೆ, ಬೆಂಗಾಲ್ 20ರಲ್ಲಿ 11 ಪಂದ್ಯಗಳನ್ನು ಗೆದ್ದು 64 ಪಾಯಿಂಟ್ಸ್ ಜಯಿಸಿದೆ. 55 ಅಂಕ ಗಳಿಸಿರುವ ಪಾಟ್ನಾ ತೃತೀಯ ಸ್ಥಾನದಲ್ಲಿದೆ. ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ ಬುಧವಾರ (ಡಿ.26) ಬೆಂಗಾಲ್ ಮತ್ತು ಬೆಂಗಳೂರು ತಂಡಗಳೇ ಮುಖಾಮುಖಿಯಾಗುತ್ತಿವೆ!
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications