ಕಬಡ್ಡಿ: ಹರಿಯಾಣ ಸ್ಟೀಲರ್ಸ್ ಕಟ್ಟಿಹಾಕಿದ ಗುಜರಾತ್ ಫಾರ್ಚೂನ್ ಜೈಂಟ್ಸ್

ಅಹ್ಮದಾಬಾದ್, ನವೆಂಬರ್ 22: ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ಟ್ರಾನ್ಸ್‌ಸ್ಟೇಡಿಯಾ ಇಂಡೋರ್ ಅರೆನಾದಲ್ಲಿ ಗುರುವಾರ (ನವೆಂಬರ್ 22) ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ಎದುರು ಆತಿಥೇಯ ಗುಜರಾತ್ ಫಾರ್ಚೂನ್ ಜೈಂಟ್ಸ್ 40-31ರ ಜಯ ಸಾಧಿಸಿತು.
ಸಚಿನ್ ಚತುರ ಆಟ ಗುಜರಾತ್‌ಗೆ ತವರು ನೆಲದಲ್ಲಿನ ಕೊನೆಯ ಪಂದ್ಯದಲ್ಲಿ ಗೆಲುವನ್ನಾಚರಿಸಲು ನೆರವು ನೀಡಿತು. ಸಚಿನ್ 10 ಪಾಯಿಂಟ್‌ಗಳನ್ನು ತಂಡಕ್ಕೆ ಸೇರಿಸಿದರು. ಜೊತೆಗೆ ಪರ್ವೇಶ್ 6, ಮಹೇಂದರ್ ಗಣೇಶ್ 4 ಪಾಯಿಂಟ್ ಬೆಂಬಲವೂ ತಂಡವನ್ನು ಗೆಲುವಿನ ಹೊಸ್ತಿಲಿಗೆ ಎಳೆದು ತಂದಿತು.
ಹರ್ಯಾಣ ಸ್ಟೀಲರ್ಸ್ ಪರ ಮೋನು ಗೋಯಟ್ 10 ಅಂಕಗಳನ್ನು ಸೇರಿಸಿ ಹೋರಾಟ ನಡೆಸಿದರಾದರೂ ಅಂತಿಮವಾಗಿ ಗುಜರಾತ್ ಮೇಲುಗೈ ಸಾಧಿಸಿತು. ಎ ಝೋನ್‌ನಲ್ಲಿರುವ ಗುಜರಾತ್ ಫಾರ್ಚೂನ್ ಜೈಂಟ್ಸ್ ಈಗ ಮುಂಬೈ ತಂಡವನ್ನು ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದೆ. ಮುಂದಿನ ನವೆಂಬರ್ 23ರಿಂದ ಪಂದ್ಯಗಳು ಪುಣೆಯಲ್ಲಿ ನಡೆಯಲಿವೆ.
Story first published: Thursday, November 22, 2018, 23:07 [IST]
Other articles published on Nov 22, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications