ಪ್ರೊ ಕಬಡ್ಡಿ: ಪುಣೇರಿ ಪಲ್ಟಾನ್‌ಗೆ ಸೋಲುಣಿಸಿದ ಜೈಪುರ್ ಪಿಂಕ್ ಪ್ಯಾಂಥರ್ಸ್

ಪಂಚಕುಲ, ಡಿಸೆಂಬರ್ 14: ಹರ್ಯಾಣದ ಪಂಚಕುಲದಲ್ಲಿರುವ ತೌ ದೇವಿಲಾಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ (ಡಿಸೆಂಬರ್ 14) ನಡೆದ ಪ್ರೊ ಕಬಡ್ಡಿ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ದ ಜೈಪುರ್ ಪಿಂಕ್ ಪ್ಯಾಂಥರ್ಸ್ 36-23ರ ಗೆಲುವು ಸಾಧಿಸಿದೆ.
ಜೈಪುರ್ ಪರ ಮುಂಚೂಣಿ ಆಟಗಾರರಲ್ಲದೆ ಉಳಿದ ಆಟಗಾರರೂ ಅಂಕವನ್ನು ಸೇರಿಸಿದ್ದು ತಂಡದ ಗೆಲುವಿಗೆ ಕಾರಣವಾಯ್ತು. ಅದರಲ್ಲೂ ದೀಪಕ್ ಹೂಡಾ ಮತ್ತು ಸುನಿಲ್ ಸಿದ್ಧಗವಾಲಿ ತಲಾ 8 ಅಂಕ ಸೇರಿಸಿ ತಂಡಕ್ಕೆ ಬಲ ತುಂಬಿದರು. ಪಾಟ್ನಾ ಪರ ಮೋರೆ ಜಿಬಿ ಮತ್ತು ಸಂದೀಪ್ ನರ್ವಾಲ್ ತಲಾ 5 ಅಂಕ ಸೇರಿಸಿ ತಕ್ಕ ಹೋರಾಟ ನಡೆಸಿದರು.
ಈ ಪಂದ್ಯ ಗೆದ್ದರೂ ಪಿಂಕ್ ಪ್ಯಾಂಥರ್ಸ್‌ಗೆ ಅಂಥದ್ದೇನೂ ಲಾಭವಾದಂತೆ ಕಾಣಲಿಲ್ಲ. ಯಾಕೆಂದರೆ ಎ ಝೋನ್‌ನಲ್ಲಿರುವ ಪ್ಯಾಂಥರ್ಸ್ ಈಗಾಗಲೇ ಅಂಕಪಟ್ಟಿಯ ತಳ ಸೆರಿಸಿದೆ. ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ ದುರ್ಬಲ ತಮಿಳ್ ತಲೈವಾಸ್ ವಿರುದ್ಧ ಬೆಂಗಾಲ್ ವಾರಿಯರ್ಸ್ 28-21ರ ಗೆಲುವನ್ನಾಚರಿಸಿತು.
Story first published: Friday, December 14, 2018, 22:53 [IST]
Other articles published on Dec 14, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications