ಎಲ್ಲರೂ ತದೇಕ ಚಿತ್ತದಿಂದ ಕಾಯುತ್ತಿದ್ದ ಐಪಿಎಲ್ ರಿಟೇನ್ಷನ್ ಲೀಸ್ಟ್ ಬಂದಿದೆ. ಮಾಲೀಕರು ಆಟಗಾರರ ಆಟದ ಗುಣಮಟ್ಟವನ್ನು ನೋಡಿಕೊಂಡು ಅವರಿಗೆ ಮಣೆ ಹಾಕಿದ್ದಾರೆ. ಆಟಗಾರರು ಕಳೆದ ಆವೃತ್ತಿಯ ನೀಡಿದ ಭರವಸೆಯ ಆಟಕ್ಕೆ ಮಾಲೀಕರು ಮನಸೋತಿದ್ದಾರೆ. ಬಿಸಿಸಿಗೆ ಅಕ್ಟೋಬರ್ 31 ರಂದು ಎಲ್ಲ ತಂಡಗಳು ತಾವು ಉಳಿಸಿಕೊಂಡ ಹಾಗೂ ಕೈ ಬಿಟ್ಟ ಆಟಗಾರರ ಪಟ್ಟಿಯನ್ನು ನೀಡಿವೆ.
ಬಿಸಿಸಿಐ ರಿಟೇನ್ಷನ್ ಲೀಸ್ಟ್ ನೀಡಲು ಕೆಲವು ನಿಯಮಗಳನ್ನು ಪಾಲನೆ ಮಾಡುವಂತೆ ಸೂಚಿಸಿತ್ತು. ಅದರಂತೆ ನಾಲ್ವರು ಕ್ಯಾಪ್ಡ್ ಪ್ಲೇಯರ್ ಹಾಗೂ ಇಬ್ಬರು ಅನ್ ಕ್ಯಾಪ್ಡ್ ಪ್ಲೇಯರ್‌ಗಳನ್ನು ಉಳಿಸಿಕೊಳ್ಳುವ ಅವಕಾಶವನ್ನು ನೀಡಿತ್ತು. ಅಲ್ಲದೆ ಒಂದು ತಂಡ ಅತಿ ಹೆಚ್ಚು ಅಂದರೆ ಇಬ್ಬರು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂದು ಸಹ ಸೂಚಿಸಿತ್ತು. ಬಿಸಿಸಿಐ ನೀಡಿರುವ ನಿಯಮಗಳನ್ನು ಅರಿತು ಮಾಲೀಕರು ತಮ್ಮ ಲೀಸ್ಟ್ ನೀಡಿದ್ದಾರೆ.

ಬಿಸಿಸಿಐ ಗರಿಷ್ಠ ಆರು ಜನರನ್ನು ಉಳಿಸಿಕೊಳ್ಳುವ ಅವಕಾಶವನ್ನು ಸಹ ನೀಡಿತ್ತು. ಅಲ್ಲದೆ ರೈಟ್ ಟು ಮ್ಯಾಚ್ ಕಾರ್ಡ್ ಬಳಕೆ ಮಾಡಬಹುದಾಗಿ ಸಹ ತಿಳಿಸಿತ್ತು. ಆದರೆ ಎಷ್ಟು ಆರ್‌ಟಿಎಂಗಳು ಲಭ್ಯ ಇರಲಿವೆ ಎಂಬ ಬಗ್ಗೆ ಮಾತ್ರ ಮಾಹಿತಿ ನೀಡಿರಲಿಲ್ಲ. ಆದರೆ ಈಗ ತಿಳಿದು ಬಂದಿರುವುದೇನೆಂದರೆ ತಂಡಗಳು ತಾವು ಗರಿಷ್ಠ ಆರು ಜನರನ್ನು ಉಳಿಸಿಕೊಳ್ಳುವ ಅವಕಾಶ ನೀಡಲಾಗಿತ್ತು. ಅದರಲ್ಲಿ ತಂಡಗಳ ಆಯ್ಕೆಯ ಮೇರೆಗೆ ಆಟಗಾರರಿಗೆ ಮಣೆ ಹಾಕಲಾಗಿದ್ದು, ಉಳಿದ ಆಟಗಾರರ ಸ್ಥಾನವನ್ನು ಆರ್‌ಟಿಎಂ ತುಂಬಲಿದೆ.
ಉದಾಹರಣೆಗೆ ಆರ್‌ಸಿಬಿ ಗರಿಷ್ಠ ಆರು ಜನ ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶವನ್ನು ಹೊಂದಿತ್ತು. ಆದರೆ ಆರ್‌ಸಿಬಿ ಕೇವಲ ಮೂವರು ಆಟಗಾರರಿಗೆ ಮಾತ್ರ ಮಣೆ ಹಾಕಿದೆ. ಅಂದರೆ ಐಪಿಎಲ್ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಮೂರು ರೈಟ್ ಟು ಮ್ಯಾಚ್ ಕಾರ್ಡ್ ಬಳಸುವ ಅವಕಾಶವನ್ನು ಹೊಂದಿರಲಿದೆ. ಹಾಗಿದ್ದರೆ ಯಾವ ತಂಡದ ಬಳಿ ಅತಿ ಹೆಚ್ಚು ಆರ್‌ಟಿಎಂಗಳು ಇವೆ ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
10 ತಂಡಗಳಲ್ಲಿ ಐದು ತಂಡಗಳು ಐವರು ಆಟಗಾರರನ್ನು ಉಳಿಸಿಕೊಂಡಿದ್ದು, ಕೇವಲ 1 ಆರ್‌ಟಿಎಂ ಕಾರ್ಡ್ ಅವಕಾಶದ ಲಾಭವನ್ನು ಪಡೆಯಬಹುದು. ಸನ್‌ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ಗುಜರಾತ್ ಟೈಟಾನ್ಸ್, ಲಖ್ನೋ ಸೂಪರ್ ಜೈಂಟ್ಸ್ ತಂಡಗಳು ತಲಾ ಒಬ್ಬರು ಆಟಗಾರರಿಗೆ ಆರ್‌ಟಿಎಂ ಕಾರ್ಡ್ ಬಳಿಸಬಹುದು.
ಡೆಲ್ಲಿ ಕ್ಯಾಪಿಟಲ್ಸ್ ಬಳಿ ಎರಡು, ಆರ್‌ಸಿಬಿ ಬಳಿ 3, ಪಂಜಾಬ್ ಕಿಂಗ್ಸ್ ಬಳಿ 4 ಆರ್‌ಟಿಎಂ ಕಾರ್ಡ್‌ಗಳು ಇವೆ. ಇವುಗಳ ಲಾಭವನ್ನು ಫ್ರಾಂಚೈಸಿಗಳು ಐಪಿಎಲ್ ಹರಾಜಿನ ವೇಳೆ ಪಡೆಯಬಹುದಾಗಿದೆ.
ಇನ್ನು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡ ಯಾವುದೇ ಆರ್‌ಟಿಎಂ ಹೊಂದಿಲ್ಲ ಎಂಬುದೇ ವಿಶೇಷ.