Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತೀಯ ಕ್ರಿಕೆಟಿಗರು ತಂಗಿದ್ದ ಹೋಟೆಲ್‌ಗಿಂತ 30 ಕಿ.ಮಿ ದೂರದಲ್ಲಿ ವಿಮಾನ ಪತನ

Plane crashes near Indian cricket team hotel in Sydney

ಸಿಡ್ನಿ ಒಲಿಂಪಿಕ್ ಪಾರ್ಕ್‌ನ ಕೆಲವೇ ಕಿಲೋಮೀಟರ್‌ಗಳ ಅಂತರದಲ್ಲಿ ಲಘು ವಿಮಾನವೊಂದು ಪತನವಾದ ಘಟನೆ ನಡೆದಿದೆ. ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ಟೀಮ್ ಇಂಡಿಯಾ ಆಟಗಾರರು ತಮ್ಮ ಅಭ್ಯಾಸವನ್ನು ನಡೆಸುತ್ತಿದ್ದು ಅಲ್ಲಿಗೆ ಸಮೀಪವಿರುವ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಭಾರತಿಯ ಕ್ರಿಕೆಟಿಗರು ಉಳಿದುಕೊಂಡಿದ್ದ ಹೋಟೆಲ್‌ಗಿಂತ 30 ಕಿಲೋಮೀಟರ್ ದೂರದಲ್ಲಿ ಈ ವಿಮಾನ ಪತನವಾಗಿರುವ ಘಟನೆ ನಡೆದಿದೆ. ಸ್ಥಳೀಯ ಕಾಲಮಾನ 4:30ಕ್ಕೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ದುರಂತದಲ್ಲಿ ಅದೃಷ್ಟವಶಾತ್ ಯಾವುದೇ ಸಾವುನೋವುಗಳು ಸಂಭವಿಸಿಲ್ಲ.

ಈ ವಿಮಾನ ಸ್ಥಳೀಯ ಕ್ರಿಕೆಟಿಗರು ಹಾಗೂ ಫುಟ್ಬಾಲ್ ಆಟಗಾರರು ಆಡುತ್ತಿದ್ದ ಕ್ರೋಮರ್ ಪಾರ್ಕ್ ಎಂಬಲ್ಲಿ ಪತನವಾಗಿದೆ. ವಿಮಾನ ಪತನವಾಗುತ್ತಿರುವುದನ್ನು ಗಮನಿಸಿದ ಸ್ಥಳೀಯ ಆಟಗಾರರು ಸ್ಥಳದಿಂದ ಓಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಹಾರಾಟವನ್ನು ನಡೆಸುತ್ತಿದ್ದಾಗ ವಿಮಾನದ ಇಂಜಿನ್ ಸ್ಥಗಿತಗೊಂಡು ಈ ದುರಂತ ನಡೆದಿದೆ ಎಂದು ವರದಿಯಾಗಿದೆ.

"ವಿಮಾನ ಹೊಗೆಯುಗುಳಲು ಆರಂಭಿಸಿತ್ತು. ತಕ್ಷಣವೇ ಆಟಗಾರರನ್ನು ಹೊರಗೆಕಳುಹಿಸಿದೆವು. ವಿಮಾನ ಸ್ಪೋಟಗೊಳ್ಳುವಂತೆ ಕಾಣಿಸಿತ್ತು. ಸದ್ಯ ವಿಮಾನದಲ್ಲಿದ್ದ ಎಲ್ಲರೂ ಬದುಕುಳಿದಿದ್ದಾರೆ. ಕೆಲವರಿಗೆ ಗಾಯಗಳಾಗಿದ್ದು ಓರ್ವನ ಮುಖಕ್ಕೆ ಗಂಭೀರ ಗಾಯವಾಗಿದೆ. ಎಲ್ಲರೂ ಪ್ರಜ್ಷೆಯನ್ನು ಹೊಂದಿದ್ದಾರೆ ಎಂದು ಕ್ರೊಮರ್ ಕ್ರಿಕೆಟ್‌ಕ್ಲಬ್‌ನ ಉಪಾಧ್ಯಕ್ಷ ಗ್ರೇಗ್ ರೂಲಿನ್ ಎಂಬವರು ವಿವರಿಸಿದ್ದಾರೆ.

ಇನ್ನು ಟೀಮ್ ಇಂಡಿಯಾ ಆಟಗಾರರು ಸಿಡ್ನಿಗೆ ಎರಡು ದಿನಗಳ ಹಿಂದೆಯಷ್ಟೇ ತಲುಪಿದ್ದು ಎರಡು ದಿನಗಳ ಕ್ವಾರಂಟೈನ್ ಬಳಿಕ ಶನಿವಾರದಿಂದ ಅಭ್ಯಾಸವನ್ನು ಆರಂಭಿಸಿದ್ದಾರೆ. ನವೆಂಬರ್ 27ರಿಂದ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆರಂಭವಾಗಲಿದೆ.

Story first published: Friday, November 20, 2020, 15:01 [IST]
Other articles published on Nov 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+