For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸೊನ್ನೆ ಸುತ್ತದ ಕರ್ನಾಟಕದ ಬ್ಯಾಟರ್

By ನಾಗೇಶ್

ಮನೆಯಲ್ಲಿ ಇದ್ದ ಕ್ರಿಕೆಟ್ ವಾತಾವರಣದಲ್ಲಿ ಬೆಳೆದ ಬಾಲಕ ದೇಶದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಹಿಡಿದ ಆಟಗಾರ. ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಬ್ರಿಜೇಶ್ ಪಟೇಲ್. ಬ್ರಿಜೇಶ್ ಪಟೇಲ್ ಮಧ್ಯಮ ಕುಟಂಬದಿಂದ ಬಂದ ಆಟಗಾರ. ಮನೆಯಲ್ಲಿ ಇದ್ದ ಕ್ರಿಕೆಟ್ ವಾತಾವರಣವನ್ನೇ ಪ್ರೀತಿಸಿದ ಪ್ಲೇಯರ್. ವಡೋದಾರದಲ್ಲಿ ಹುಟ್ಟಿದ ಬ್ರಿಜೇಶ್ ಪಟೇಲ್ ವ್ಯಾಸಂಗಕ್ಕಾಗಿ ಉದ್ಯಾನ ನಗರಿ ಬೆಂಗಳೂರಿನತ್ತ ಮುಖ ಮಾಡುತ್ತಾರೆ.

ಇಲ್ಲಿಯ ಬಿಷಪ್ ಕಾಟನ್ ಸ್ಕೂಲ್ ನಲ್ಲಿ ಓದು ಆರಂಭವಾಗುತ್ತದೆ. ಮೊದಲೇ ಬ್ರಿಜೇಶ್ ಮನೆಯಲ್ಲಿ ಕ್ರಿಕೆಟ್ ಆಟಗಾರರು ಇದ್ದಿದ್ದರಿಂದ ಕ್ರಿಕೆಟ್ ಇವರ ನೆಚ್ಚಿನ ಕ್ರೀಡೆ. ಶಾಲೆಯ ಪರ ಕ್ರಿಕೆಟ್ ಆಡಲು ಆರಂಭಿಸಿದ ಬ್ರಿಜೇಶ್ ಅಮೋಘ ಪ್ರದರ್ಶನ ನೀಡುತ್ತಾರೆ. ಇವರು ಆಸ್ಟ್ರೇಲಿಯಾಕ್ಕೆ ಪ್ರವಾಸ ಬೆಳೆಸಿದ ಭಾರತದ ಶಾಲಾ ತಂಡದ ಸದಸ್ಯರಾಗಿದ್ದರು. ಬ್ರಿಜೇಶ್ ಪಟೇಲ್ ಮನೆಯಲ್ಲಿ ಕ್ರಿಕೆಟ್ ವಾತಾವರಣ.

Players From Karnataka Represented Team India - Series. Brijesh Patel Never Outed For Duck


ಬ್ರಿಜೇಶ್ ಪಟೇಲ್ ಅವರ ಮೂವರು ಚಿಕ್ಕಪ್ಪಂದಿರು ಸಹ ಕ್ರಿಕೆಟ್ ಅಂಗಳದಲ್ಲಿ ಹೆಸರು ಮಾಡಿದ್ದರು. ಮೈದಾನದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದ ಬ್ರಿಜೇಶ್ ಅವರಿಗೆ ರಣಜಿಯಲ್ಲಿ ಅವಕಾಶ 1969-70ರಲ್ಲಿ ಲಭಿಸಿತು. ಅಲ್ಲಿಂದ ಬ್ರಿಜೇಶ್ ಸೊಗಸಾದ ಪ್ರದರ್ಶನ ನೀಡುತ್ತಾ ಸಾಗಿದರು. ಇವರಲ್ಲಿನ ಕ್ಷಮತೆ ಎಲ್ಲರಿಗೂ ಗೊತ್ತಾಗಿದ್ದೇ ಮುಂಬೈ ವಿರುದ್ಧದ ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದ ವೇಳೆ.

ಈ ಪಂದ್ಯದಲ್ಲಿ ಕರ್ನಾಟಕ 171 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಅಂಗಳಕ್ಕೆ ಬಂದ ಬ್ರಿಜೇಶ್ ತಂಡವನ್ನು ಸಂಕಷ್ಟದಿಂದ ಮೇಲೆತ್ತಿ ಅಬ್ಬರಿಸಿದರು. ಅಲ್ಲದೆ ಅಜೇಯ ಶತಕ ಬಾರಿಸಿದರು. ಇದೇ ರೀತಿ ಬ್ರಿಜೇಶ್ ಹಲವು ಬಾರಿ ಸಂಕಷ್ಟದಲ್ಲಿದ್ದ ತಂಡಕ್ಕೆ ಆಧಾರವಾಗಿದ್ದರು. ಬ್ರಿಜೇಶ್ ಪಟೇಲ್ ರಣಜಿಯಲ್ಲಿ ನೀಡಿದ ಭರ್ಜರಿ ಪ್ರದರ್ಶನದ ಫಲವಾಗಿ ಇವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡುವ ಅವಕಾಶ ಲಭಿಸಿತು.

Players From Karnataka Represented Team India - Series. Brijesh Patel Never Outed For Duck

ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಬ್ರಿಜೇಶ್

ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡ ಬ್ರಿಜೇಶ್ ಆರ್ಭಟಿಸಿದ್ದರು, ಬ್ರಿಜೇಶ್ ಪಟೇಲ್ ಉತ್ತಮ ಕ್ರಿಕೆಟಿಗ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಸಾಧನೆಯ ಶಿಖರ ಏರಿದವರಲ್ಲಿ ಇವರೂ ಒಬ್ಬರು. ಬ್ರಿಜೇಶ್ ಭಾರತದ ಪರ ಒಟ್ಟು 21 ಟೆಸ್ಟ್ ಪಂದ್ಯಗಳನ್ನು ಆಡಿದ್ದು 972 ರನ್ ಗಳನ್ನು ಕಲೆ ಹಾಕಿದ್ದು, ಸರಾಸರಿ 29.45 ಆಗಿದೆ. ಇನ್ನು 10 ಏಕದಿನ ಪಂದ್ಯಗಳನ್ನು ಆಡಿರುವ ಬ್ರಿಜೇಶ್ ಪಟೇಲ್ 30.37ರ ಸರಾಸರಿಯಲ್ಲಿ 243 ರನ್ ಸಿಡಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಅವಕಾಶ

ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಇವರ ರನ್ ಮಹಲ್ ಕಟ್ಟಿದ್ದರಿಂದಲೇ ಇವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವ ಅವಕಾಶ ಲಭಿಸಿತು. ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ ಬ್ರಿಜೇಶ್ 11,911 ರನ್ ಸೇರಿಸಿ ಮೆರೆದಿದ್ದಾರೆ. ಇದರಲ್ಲಿ 37 ಶತಕ ಹಾಗೂ 55 ಅರ್ಧಶತಗಳು ಸೇರಿವೆ. ಈ ವೇಳೆ ಬ್ರಿಜೇಶ್ ಸರಾಸರಿ 45.63 ಆಗಿದೆ. ಇನ್ನು ರಣಜಿ ಟೂರ್ನಿಯಲ್ಲಿ ಬ್ರಿಜೇಶ್ ಅಬ್ಬರ ಪ್ರದರ್ಶಿಸಿದ್ದಾರೆ. ಒಟ್ಟಾರೆ ರಣಜಿ ಋತುವಿನಲ್ಲಿ 7,126 ರನ್ ಸಿಡಿಸಿರುವ ಬ್ರಿಜೇಶ್ 26 ಶತಕಗಳನ್ನು ಸಿಡಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಿಇಓ

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಮ್ಮೆಯೂ ಬ್ರಿಜೇಶ್ ಪಟೇಲ್ ಸೊನ್ನೆಗೆ ಔಟ್ ಆಗೇ ಇಲ್ಲ. ಈ ದಾಖಲೆಯನ್ನು ಬ್ರಿಜೇಶ್ ಹೊಂದಿದ್ದಾರೆ. ಇನ್ನು ತಮ್ಮ ಕ್ರಿಕೆಟ್ ಜೀವನದಿಂದ ದೂರ ಸರಿದ ಬಳಿಕ ಬ್ರಿಜೇಶ್, ಕ್ರಿಕೆಟ್ ಮ್ಯಾನೇಜ್ಮೆಂಟ್ ನತ್ತ ದೃಷ್ಟಿ ನೆಟ್ಟರು. KSCA ಕಾರ್ಯದರ್ಶಿಯಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.

ಐಪಿಎಲ್ ಮಾದರಿಯಲ್ಲಿ ಕರ್ನಾಟಕ ಪ್ರಿಮೀಯರ್ ಲೀಗ್ ಆರಂಭಕ್ಕೂ ಇವರ ಕೊಡುಗೆ ಅಪಾರ. ಪಟೇಲ್ ಎನ್ಸಿಎ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. 2008ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಿಇಓ ಆಗಿ ಸಹ ಕಾರ್ಯವನ್ನು ನಿರ್ವಹಿಸಿದ್ದಾರೆ.

Story first published: Monday, August 28, 2023, 11:43 [IST]
Other articles published on Aug 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+