ಐಪಿಎಲ್ 2021: ಉಳಿದ ಪಂದ್ಯಗಳಲ್ಲಿ ಈ ದೇಶದ ಆಟಗಾರರು ಆಡುವುದು ಖಚಿತ

ಕೊರೊನಾವೈರಸ್‌ನ ಕಾರಣದಿಂದಾಗಿ ಈ ಬಾರಿಯ ಐಪಿಎಲ್‌ನ ಅರ್ಧಕ್ಕೆ ಸ್ಥಗಿತವಾಗಿದೆ. ಎರಡನೇ ಹಂತದಲ್ಲಿ ಪಂದ್ಯವನ್ನು ಯುಎಇನಲ್ಲಿ ನಡೆಸಲು ಅಗತ್ಯ ತಯಾರಿಗಳನ್ನು ಬಿಸಿಸಿಐ ಮಾಡಿಕೊಳ್ಳುತ್ತಿದೆ. ಆದರೆ ಬಾಕಿ ಇರುವ ಪಂದ್ಯಗಳಲ್ಲಿ ಭಾಗವಹಿಸಲು ವಿದೇಶಿ ಆಟಗಾರರಿಗೆ ಅಂತಾರಾಷ್ಟ್ರೀಯ ವೇಳಾಪಟ್ಟಿ ಅಡ್ಡಿಯಾಗುತ್ತಿವೆ. ಈ ಮಧ್ಯೆ ನ್ಯೂಜಿಲೆಂಡ್‌ನಿಂದ ಸಕಾರಾತ್ಮಕ ಸುದ್ದಿಯೊಂದು ಬಂದಿದೆ.

ಈ ಬಾರಿಯ ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ಭಾಗವಹಿಸಲು ನ್ಯೂಜಿಲೆಂಡ್ ಆಟಗಾರರಿಗೆ ಗ್ರೀನ್‌ ಸಿಗ್ನಲ್ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಈ ಬಾರಿಯ ಉಳಿದ ಐಪಿಎಲ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡದ ಆಟಗಾರರು ಭಾಗಿಯಾಗುವುದು ಖಚಿತವಾಗಿದೆ.

ಅತ್ಯುತ್ತಮ ಟೆಸ್ಟ್ ತಂಡವನ್ನು ಕನಿಷ್ಠ 3 ಪಂದ್ಯಗಳಿಂದ ನಿರ್ಧರಿಸಬೇಕು: ಕೊಹ್ಲಿಅತ್ಯುತ್ತಮ ಟೆಸ್ಟ್ ತಂಡವನ್ನು ಕನಿಷ್ಠ 3 ಪಂದ್ಯಗಳಿಂದ ನಿರ್ಧರಿಸಬೇಕು: ಕೊಹ್ಲಿ

ನ್ಯೂಜಿಲೆಂಡ್ ಕ್ರಿಕೆಟ್ ತಂಡದ 7 ಆಟಗಾರರು ಐಪಿಎಲ್‌ನಲ್ಲಿ ಒಪ್ಪಂದವನ್ನು ಹೊಂದಿದ್ದಾರೆ. ಕೈಲ್ ಜಾಮಿಸನ್, ಟ್ರೆಂಟ್ ಬೌಲ್ಟ್, ಕೇನ್ ವಿಲಿಯಮ್ಸನ್, ಲಾಕಿ ಫರ್ಗುಸನ್, ಜಿಮ್ಮಿ ನೀಶಮ್, ಟಿಮ್ ಸೀಫರ್ಟ್ ಮತ್ತು ಫಿನ್ ಅಲೆನ್ ಐಪಿಎಲ್‌ನಲ್ಲಿ ವಿವಿಧ ತಂಡಗಳನ್ನು ಪ್ರತಿನಿಧಿಸುವ ಕಿವೀಸ್ ಆಟಗಾರರಾಗಿದ್ದಾರೆ.

ಕ್ರಿಕೆಟ್.ಕಾಮ್ ಈ ಬಗ್ಗೆ ಐಪಿಎಲ್ ಫ್ರಾಂಚೈಸಿಯ ಅಧಿಕಾರಿಯೊಬ್ಬರ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. ಅದರಲ್ಲಿ ಅವರು "ನಾವೀಗ ತುಂಬಾ ನಿರಾಳರಾಗಿದ್ದೇವೆ. ಇದೇ ವಿಚಾರವಾಗಿ ಒಮ್ಮತಕ್ಕೆ ಬರಲು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಗಳ ಜೊತೆಗೆ ಬಿಸಿಸಿಐ ಮಾತುಕತೆಯನ್ನು ನಡೆಸುತ್ತಿದೆ. ಈಗ ನಾವು ನ್ಯೂಜಿಲೆಂಡ್ ಆಟಗಾರರು ಐಪಿಎಲ್‌ನಲ್ಲಿ ಭಾಗಿಯಾಗುವುದನ್ನು ಖಚಿತಪಡಿಸಿಕೊಂಡಿದ್ದೇವೆ" ಎಂದಿದ್ದಾರೆ.

ಈ ಮಧ್ಯೆ ವೆಸ್ಟ್ ಇಂಡೀಸ್ ಆಟಗಾರರು ಕೂಡ ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ಭಾಗಿಯಾಗುವುದು ಖಚಿತವಾಗಿದೆ. ಆದರೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಆಟಗಾರರು ಭಾಗುಯಾಗುವ ಬಗ್ಗೆ ಅನುಮಾನಗಳು ಮುಂದುವರಿದಿದೆ. ಸೆಪ್ಟೆಂಬರ್ ಅಕ್ಟೋಬರ್ ತಿಂಗಳಿನಲ್ಲಿ ಯುಎಇನಲ್ಲಿ ಐಪಿಎಲ್‌ನ ಉಳಿದ ಪಂದ್ಯಗಳು ಆಯೋಜನೆಯಾಗಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, June 25, 2021, 17:49 [IST]
Other articles published on Jun 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X