ಆಸ್ಟ್ರೇಲಿಯಾದ ಮಾಜಿ ನಾಯಕನಿಗೆ ತೀಕ್ಷ್ಣ ಉತ್ತರ ನೀಡಿದ ಹಾಲಿ ನಾಯಕ ಪೈನ್

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಎಲ್ಲ ಕ್ರಿಕೆಟಿಗರು ತಮ್ಮ ತಮ್ಮ ಮನೆಗಳಲ್ಲೇ ವಾಸವಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವಿಚಾರಗಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾ ಸುದ್ದಿಯಲ್ಲಿದ್ದಾರೆ ಕ್ರಿಕೆಟಿಗರು. ಹಾಗೆಯೇ ವಿರಾಟ್ ಕೊಹ್ಲಿ ವಿಚಾರವಾಗಿ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಹೇಳಿಕೆಯನ್ನು ನೀಡಿ ಸಂಚಲನವನ್ನುಂಟು ಮಾಡಿದ್ದರು.
ಆಸ್ಟ್ರೇಲಿಯಾ ಆಟಗಾರರ ವರ್ತನೆ ಮತ್ತು ಅದರ ಮೇಲೆ ಐಪಿಎಲ್ ಬಿದ್ದಿರುವ ಪರಿಣಾಮವನ್ನು ಆಸ್ಟ್ರೇಲಿಯಾದ ನಾಯಕ ಹೇಳಿಕೊಂಡಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೂ ಕಾರಣವಾಗಿತ್ತು. ಈ ವಿಚಾರವಾಗಿ ಆಸ್ಟ್ರೇಲಿಯಾದ ಟೆಸ್ಟ್ ತಂಡದ ಆಟಗಾರ ಟಿಮ್ ಪೈನ್ ಖಡಕ್ಕಾಗಿ ಪ್ರತ್ಯುತ್ತರವನ್ನು ನೀಡಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕನ ಹೇಳಿಕೆಯೇನು? ಅದಕ್ಕೆ ಟಿಮ್ ಪೈನೆ ಉತ್ತರವೇನು ಮುಂದೆ ಓದಿ..

ಕ್ಲಾರ್ಕ್ ಹೇಳಿದ್ದೇನು?
ಕೊಹ್ಲಿ ಸೇರಿ ಟೀಮ್ ಇಂಡಿಯಾ ಆಟಗಾರರನ್ನು ಸ್ಲಡ್ಜ್ ಮಾಡಲು ಭಯ ಆಸ್ಟ್ರೇಲಿಯಾ ಕ್ರಿಕೆಟಿಗರು ವಿರಾಟ್ ಕೊಹ್ಲಿಯನ್ನು ಸ್ಲಡ್ಜ್ ಮಾಡಲು ಭಯಪಡುತ್ತಿದ್ದಾರೆ. ಜೊತೆಗೆ ಟೀಮ್ ಇಂಡಿಯಾದ ಯಾವ ಆಟಗಾರನನ್ನು ಸ್ಜಡ್ಜ್ ಮಾಡಲು ಆಸ್ಟ್ರೇಲಿಯಾ ಆಟಗಾರರು ಹಿಂದೇಟುಹಾಕುತ್ತಿದ್ದಾರೆ ಎಂದು ಮೈಕಲ್ ಕ್ಲಾರ್ಕ್ ಹೇಳಿದ್ದರು.

ಮೃದು ಸ್ವಭಾವಿಗಳಾಗಿದ್ದಾರೆ ಎಂದಿದ್ದ ಕ್ಲಾರ್ಕ್
ಆಸಿಸ್ ಕ್ರಿಕೆಟಿಗರು ಮೃದುಸ್ವಭಾವಿಗಳಾಗಿದ್ದಾರೆ ಆಸ್ಟ್ರೆಲಿಯಾದ ಕ್ರಿಕೆಟಿಗರು ಹಿಂದಿಗಿಂತ ಮೃದುಸ್ವಾಭಾವಿಗಳಾಗಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಹೇಳಿದ್ದರು. ಸಾಮ್ಯಾನ್ಯಕ್ಕಿಂತ ಹೆಚ್ಚಿ ಮೃದುಸ್ವಾಭಾವವನ್ನು ಹೊಂದಿದ್ದಾರೆ ಎಂದು ಮೈಕಲ್ ಕ್ಲಾರ್ಕ್ ಹೇಳಿದ್ದು ಅದಕ್ಕೆ ಕಾರಣವನ್ನೂ ನೀಡಿದ್ದರು.

ಐಪಿಎಲ್ ಒಪ್ಪಂದದ ಭಯ
ಆಸ್ಟ್ರೇಲಿಯನ್ನರ ಭಯಕ್ಕೆ ಕಾರಣ ಐಪಿಎಲ್ ಕಾರಣ ಆಸ್ಟ್ರೇಲಿಯನ್ ಆಟಗಾರರು ಟೀಮ್ ಇಂಡಿಯಾ ಆಟಗಾರರನ್ನು ಸ್ಲಡ್ಜ್ ಮಾಡಲು ಯಾಕೆ ಭಯಪಡುತ್ತಿದ್ದಾರೆ ಎನ್ನಲು ಮಾಜಿ ನಾಯಕ ಕ್ಲಾರ್ಕ್ ಕೊಟ್ಟ ಕಾರಣ ಐಪಿಎಲ್. ಐಪಿಎಲ್‌ನಲ್ಲಿ ದೊಡ್ಡ ಮೊತ್ತದ ಒಪ್ಪಂದವನ್ನು ಮಾಡಿಕೊಂಡಿರುವ ಆಸ್ಟ್ರೇಲಿಯಾದ ಅನೇಕ ಕ್ರಿಕೆಟಿಗರಿಗೆ ಸ್ಲೆಡ್ಜಿಂಗ್ ಐಪಿಎಲ್ ಭವಿಷ್ಯಕ್ಕೆ ಕುತ್ತು ತರಬಹುದು ಎಂಬ ಭಯವಿದೆ ಎಂದು ಮೈಕಲ್ ಕ್ಲಾರ್ಕ್ ಹೇಳಿದ್ದರು.

ಹಾಲಿ ಟೆಸ್ಟ್ ನಾಯಕ ಪೈನ್ ಹೇಳಿಕೆ
ಆಸಿಸ್ ಮಾಜಿ ನಾಯಕನ ಈ ಹೇಳಿಯನ್ನು ಹಾಲಿ ಟೆಸ್ಟ್ ತಂಡದ ನಾಯಕ ಟಿಮ್ ಪೈನ್ ಕಡ್ಡಿಮುರಿದಂತೆ ಅಲ್ಲಗಳೆದಿದ್ದಾರೆ. ನಾವ್ಯಾರೂ ವಿರಾಟ್ ಕೊಹ್ಲಿಗೆ ಬಾಲ್ ಮಾಡುವಾಗ ಐಪಿಎಲ್ ಕಾಂಟ್ರಾಕ್ಟ್ ಬಗ್ಗೆ ಯೋಚನೆಯೇ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಔಟ್ ಮಾಡುವುದೊಂದೇ ಗುರಿ
ಯಾವೊಬ್ಬ ಆಟಗಾರನೂ ಸರಣಿಯ ಸಂದರ್ಭದಲ್ಲಿ ಐಪಿಎಲ್ ಬಗ್ಗೆ ಚಿಂತಿಸಲಾರ. ಟೀಮ್ ಇಂಡಯಾ ನಾಯಕ ಬ್ಯಾಟಿಂಗ್ ಮಾಡುತ್ತಿದ್ದರೆ ಅಂತಾ ಸಂದರ್ಭದಲ್ಲಿ ಆತನನ್ನು ಔಟ್ ಮಾಡುವುದೊಂದೇ ಬೌಲರ್‌ನ ಯೋಚನೆಯಾಗಿರುತ್ತದೆ ಎಂದು ಕ್ಲಾರ್ಕ್ ಆರೋಪವನ್ನು ಅಲ್ಲಗಳೆದಿದ್ದಾರೆ.

ಆತನನ್ನು ಕೆಣಕಿದಷ್ಟು ಕಠಿಣ
ಆಸ್ಟ್ರೇಲಿಯಾದ ಯಾವ ಬೌಲರ್ ಕೂಡ ವಿರಾಟ್ ಕೊಹ್ಲಿಯನ್ನು ಕೆಣಕಲು ಬಯಸುವುದಿಲ್ಲ. ಯಾಕೆಂದರೆ ಆತನನ್ನು ಕೆಣಕಿದಷ್ಟು ಆತ ವಿಕೆಟ್ ಪಡೆಯಲು ಕಠಿಣವಾಗುತ್ತಾರೆ ಎಂದು ಟಿಮ್ ಪೈನ್ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ನಾಯಕನನ್ನು ಕೆಣಕದಿರುವ ಕಾರಣವನ್ನು ಪೈನ್ ಸ್ಪಷ್ಟಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications