ಐಪಿಎಲ್‌ನಲ್ಲಿ ಕೊನೇ ಎಸೆತಕ್ಕೆ ಸಿಕ್ಸ್ ಚಚ್ಚಿ ಪಂದ್ಯ ಗೆಲ್ಲಿಸಿಕೊಟ್ಟವರ ಪಟ್ಟಿ

ದುಬೈ: ರುತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಗುರುವಾರ (ಅಕ್ಟೋಬರ್ 29) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 49ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 6 ವಿಕೆಟ್ ಗೆಲುವು ದಾಖಲಿಸಿದೆ. ಕೆಕೆಆರ್ ಗೆಲುವಿಗಾಗಿ ಆರಂಭಿಕ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಮಾಡಿದ ಹೋರಾಟ ವ್ಯರ್ಥಗೊಂಡಿದೆ. ಜೊತೆಗೆ ಕೋಲ್ಕತ್ತಾ ಪ್ಲೇ ಆಫ್ ಹಾದಿಯೂ ಕಠಿಣವೆನಿಸಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಪರ ನಿತೀಶ್ ರಾಣಾ ಒಬ್ಬರೇ ಗಮನಾರ್ಹ ಹೋರಾಟ ನಡೆಸಿದ್ದು. ರಾಣಾ 61 ಎಸೆತಗಳಿಗೆ 87 ರನ್ ಬಾರಿಸಿ ತಂಡ ಎದುರಾಳಿಗೆ ಉತ್ತಮ ರನ್ ಗುರಿ ನೀಡಲು ನೆರವಾಗಿದ್ದರು. ಆದರೆ ರುತುರಾಜ್ ಮತ್ತು ರಾಯುಡು ಆಟ ಕೆಕೆಆರ್ ಸೋಲೊಪ್ಪಿಕೊಳ್ಳುವಂತೆ ಮಾಡಿದೆ.
ಇದೇ ಪಂದ್ಯದಲ್ಲಿ ಸಿಎಸ್‌ಕೆ ಆಲ್ ರೌಂಡರ್ ರವೀಂದ್ರ ಜಡೇಜಾ ಕೊನೇ ಎಸೆತಕ್ಕೆ ಸಿಕ್ಸ್ ಚಚ್ಚಿ ವಿಶೇಷ ದಾಖಲೆ ಪಟ್ಟಿ ಸೇರಿಕೊಂಡಿದ್ದಾರೆ. ಐಪಿಎಲ್‌ನಲ್ಲಿ ಸಿಕ್ಸ್ ಬಾರಿಸಿ ಪಂದ್ಯ ಗೆಲ್ಲಿಸಿಕೊಟ್ಟ ಎಲ್ಲಾ ಬ್ಯಾಟ್ಸ್‌ಮನ್‌ಗಳ ಪಟ್ಟಿ ಕೆಳಗಿದೆ.

ಗಾಯಕ್ವಾಡ್ ಸ್ಫೋಟಕ ಬ್ಯಾಟಿಂಗ್
ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ಶೇನ್ ವಾಟ್ಸನ್ 14, ರುತುರಾಜ್ ಗಾಯಕ್ವಾಡ್ 72 (53 ಎಸೆತ), ಅಂಬಾಟಿ ರಾಯುಡು 38 (20 ಎಸೆತ), ಸ್ಯಾಮ್ ಕರನ್ 13, ರವೀಂದ್ರ ಜಡೇಜಾ 31 ರನ್ ಕೊಡುಗೆಯೊಂದಿಗೆ 20 ಓವರ್‌ಗೆ 4 ವಿಕೆಟ್ ಕಳೆದು 178 ರನ್ ಗಳಿಸಿತು.

ನಿತೀಶ್ ರಾಣಾ ಅಬ್ಬರದಾಟ
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕೋಲ್ಕತ್ತಾ ನೈಟ್ ರೈಡರ್ಸ್‌ನಿಂದ ಶುಬ್‌ಮನ್ ಗಿಲ್ 26, ನಿತೀಶ್ ರಾಣಾ 87 (61 ಎಸೆತ), ಸುನಿಲ್ ನರೈನ್ 7, ರಿಂಕು ಸಿಂಗ್ 11, ಇಯಾನ್ ಮಾರ್ಗನ್ 15, ದಿನೇಶ್ ಕಾರ್ತಿಕ್ 21 ರನ್ ಸೇರ್ಪಡೆಯೊಂದಿಗೆ ಕೆಕೆಆರ್ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 172 ರನ್ ಗಳಿಸಿತ್ತು.

ಕಡೇ ಎಸೆತಕ್ಕೆ ಸಿಕ್ಸ್ ಚಚ್ಚಿದ ಜಡೇಜಾ
19.6ನೇ ಓವರ್‌ಗೆ ಪಂದ್ಯ ರೋಚಕ ಹಂತ ತಲುಪಿತ್ತು. ಕೊನೇ ಎಸೆತಕ್ಕೆ ಚೆನ್ನೈ ಗೆಲ್ಲಲು 1 ರನ್ ಬೇಕಿತ್ತು. ಪಂದ್ಯ ಸೂಪರ್ ಓವರ್‌ನತ್ತ ಸಾಗುವ ಸಾಧ್ಯತೆಯಿತ್ತು. ಆದರೆ ರವೀಂದ್ರ ಜಡೇಜಾ, ಕಮಲೇಶ್ ನಗರ್ಕೋಟಿ ಅವರ ಕೊನೇ ಎಸೆತಕ್ಕೆ ಸಿಕ್ಸ್ ಬಾರಿಸಿ ಪಂದ್ಯವನ್ನು ಗೆಲ್ಲಿಸಿಕೊಟ್ಟರು. ವಿಶೇಷ ದಾಖಲೆ ಪಟ್ಟಿಯೂ ಸೇರಿಕೊಂಡರು.

ಸಿಕ್ಸ್ ಚಚ್ಚಿ ಪಂದ್ಯ ಗೆಲ್ಲಿಸಿದವರು
* ರೋಹಿತ್ ಶರ್ಮಾ vs ಕೋಲ್ಕತ್ತಾ ನೈಟ್ ರೈಡರ್ಸ್, 2009
* ರೋಹಿತ್ ಶರ್ಮಾ vs ಪೂಣೆ ವಾರಿಯರ್ಸ್ ಇಂಡಿಯಾ, 2011
* ಅಂಬಾಟಿ ರಾಯುಡು vs ಕೋಲ್ಕತ್ತಾ ನೈಟ್ ರೈಡರ್ಸ್ 2011
* ರೋಹಿತ್ ಶರ್ಮಾ vs ಡೆಲ್ಲಿ ಕ್ಯಾಪಿಟಲ್ಸ್, 2012
* ಸೌರಭ್ ತಿವಾರಿ vs ಪೂಣೆ ವಾರಿಯರ್ಸ್ ಇಂಡಿಯಾ, 2012
* ಡ್ವೇನ್ ಬ್ರಾವೋ vs ಕೋಲ್ಕತ್ತಾ ನೈಟ್ ರೈಡರ್ಸ್, 2012
* ಎಂಎಸ್ ಧೋನಿ vs ಕಿಂಗ್ಸ್ 11 ಪಂಜಾಬ್, 2016
* ಮಿಚೆಲ್ ಸ್ಯಾಂಟ್ನರ್ vs ರಾಜಸ್ಥಾನ್ ರಾಯಲ್ಸ್, 2019
* ನಿಕೋಲಸ್ ಪೂರನ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು, 2020
* ರವೀಂದ್ರ ಜಡೇಜಾ vsಕೋಲ್ಕತ್ತಾ ನೈಟ್ ರೈಡರ್ಸ್, 2020
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications