For Quick Alerts
ALLOW NOTIFICATIONS  
For Daily Alerts
 

Ipl auction 2024: ಮೀಸೆ ಚಿಗುರುವ ಮುನ್ನವೇ ಆರ್‌ಸಿಬಿ ಎಷ್ಟು ಯುವಕರಿಗೆ ಅವಕಾಶ ನೀಡಿದೆ ಗೊತ್ತಾ?

ವಿಶ್ವದ ಶ್ರೀಮಂತ ಲೀಗ್‌ ಗಳಲ್ಲಿ ಒಂದು ಇಂಡಿಯನ್ ಪ್ರೀಮಿಯರ್ ಲೀಗ್. ಈ ಲೀಗ್ ನಲ್ಲಿ ಆಡಲೇ ಬೇಕು ಎಂಬುದೇ ಆಟಗಾರರ ಕನಸು. ಈ ಕನಸಿನ ಕುದುರೆಯ ಬೆನ್ನು ಏರಿ ಅದೆಷ್ಟೋ ಆಟಗಾರರು ಮೈದಾನದಲ್ಲಿ ಶ್ರಮಿಸುತ್ತಾರೆ. ಇನ್ನು ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಅದೃಷ್ಟ ಅವರ ಮನೆಯ ಬಾಗಿಲನ್ನು ಹುಡುಕಿಕೊಂಡು ಬಂದಿರುತ್ತದೆ.

ಐಪಿಎಲ್ 2024 ರ ಹರಾಜು ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿದೆ. ಇದರಲ್ಲಿ ಅನೇಕ ಆಟಗಾರರು ತಮ್ಮ ಹೆಸರನ್ನು ನಮೂದಿಸಿಕೊಂಡಿದ್ದಾರೆ. ಸ್ಟಾರ್ ಆಟಗಾರರನ್ನು ಪಡೆಯಲು ಫ್ರಾಂಚೈಸಿಗಳ ನಡುವೆ ಜಿದ್ದಾಜಿದ್ದಿನ ಕಾಳಗ ನಡೆಯುತ್ತದೆ. ಈ ಬಾರಿಯೂ ಯುವ ಆಟಗಾರರ ಮೇಲೆ ಫ್ರಾಂಚೈಸಿಗಳು ಹಣದ ಸುರಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಐಪಿಎಲ್ ಹರಾಜಿನ ಇತಿಹಾಸದಲ್ಲಿ, ತಮ್ಮ ಆಟದ ಮೂಲಕವೇ ಮಾಲೀಕರ ಮನಗೆಲ್ಲುವಲ್ಲಿ ಯಶಸ್ವಿಯಾದ ಯುವ ಆಟಗಾರರ ಬಗ್ಗೆ ಇಲ್ಲಿದೆ ಮಾಹಿತಿ.

Players who joined the IPL team at a young age

ಮುಜೀಬ್ ಉರ್ ರೆಹಮಾನ್

ಐಪಿಎಲ್ 2018 ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ 4 ಕೋಟಿ ರೂಪಾಯಿಯನ್ನು ನೀಡಿ ಅಫ್ಘಾನಿಸ್ತಾನದ ಸ್ಪಿನ್ ಬೌಲರ್‌, ಮುಜೀಬ್ ಉರ್ ರೆಹಮಾನ್ ರನ್ನು ಖರೀದಿಸಿತು. ಹೀಗಾಗಿಯೇ ಚಿಕ್ಕವಯಸ್ಸಿನಲ್ಲೆ ಜಾಕ್‌ ಪಾಟ್‌ ಹೊಡೆದ ಆಟಗಾರರ ಪಟ್ಟಿಯಲ್ಲಿ ಇವರಿಗೆ ಮೊದಲ ಸ್ಥಾನ. ಪಾಂಜಬ್ ಕಿಂಗ್ಸ್ ಜೆರ್ಸಿ ತೊಟ್ಟಾಗ ಮುಜೀಬ್‌ ಗೆ ಕೇವಲ 16 ವರ್ಷ, 9 ತಿಂಗಳು ಮತ್ತು 30 ದಿನಗಳು.

ಪ್ರರಸ್ ರೈ ಬರ್ಮನ್

2019 ರ ಐಪಿಎಲ್ ಹರಾಜಿನಲ್ಲಿ ಬೆಂಗಾಲ್ ತಂಡದ ಯುವ ಆಟಗಾರನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಣೆ ಹಾಕಿತು. ಈ ವೇಳೆ ಆರ್‌ಸಿಬಿ 1.5 ಕೋಟಿ ನೀಡಿ ಪ್ರರಾಸ್ ರೈ ಬರ್ಮನ್ ಅವರಿಗೆ ತಮ್ಮ ತಂಡದಲ್ಲಿ ಸ್ಥಾನ ನೀಡಿತು. ಐಪಿಎಲ್ ಗೆ ಎಂಟ್ರಿ ನೀಡಿದಾಗ ಪ್ರರಾಸ್‌ಗೆ 17 ವರ್ಷ 1 ತಿಂಗಳು 24 ದಿನಗಳು.

ಸರ್ಫರಾಜ್ ಖಾನ್

2015 ರ ಐಪಿಎಲ್ ಹರಾಜಿನಲ್ಲಿ 50 ಲಕ್ಷ ರೂಪಾಯಿ ನೀಡಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಶಿಬಿರದಲ್ಲಿ ಸರ್ಫರಾಜ್ ಖಾನ್ ಅವರಿಗೆ ಸ್ಥಾನ ನೀಡಿತು. ಈ ಮೂಲಕ ಕಿರಿಯ ವಯಸ್ಸಿನಲ್ಲಿ ಐಪಿಎಲ್ ಜೆರ್ಸಿ ತೊಟ್ಟ ಮೂರನೇ ಆಟಗಾರ ಎಂಬ ಖ್ಯಾತಿ ಇವರಿಗೆ ಸಲ್ಲುತ್ತದೆ. ಸರ್ಫರಾಜ್‌ ಬೆಂಗಳೂರು ಕ್ಯಾಂಪ್ ಸೇರಿದಾಗ 17 ವರ್ಷ 3 ತಿಂಗಳು 25 ದಿನ.

Players who joined the IPL team at a young age

ಅಭಿಷೇಕ್ ಶರ್ಮಾ

2018 ರ ಐಪಿಎಲ್ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 55 ಲಕ್ಷ ರೂ. ನೀಡಿ ಅಭಿಷೇಕ್ ಶರ್ಮಾ ಅವರನ್ನು ಖರೀದಿಸಿತು. 17 ವರ್ಷ, 4 ತಿಂಗಳು ಮತ್ತು 23 ದಿನಗಳಲ್ಲಿ ಇವರು ಐಪಿಎಲ್‌ನಲ್ಲಿ ಆಡುವ ಅವಕಾಶವನ್ನು ಪಡೆದರು.

ರಿಯಾನ್ ಪರಾಗ್

2019 ರ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ರಿಯಾನ್ ಪರಾಗ್‌ ಅವರನ್ನು ಬೇಸ್ ಪ್ರೈಸ್ ನೀಡಿ ತಂಡಕ್ಕೆ ಸೇರಿಸಿಕೊಂಡಿತು. ರಾಯಲ್ಸ್‌ ತಂಡದ ಅನುಭವಿ ಆಟಗಾರರ ನಡುವೆ ಮಿಸೆ ಚಿಗುರುವ ಮುನ್ನವೆ ಪರಾಗ್ ಸ್ಥಾನ ಪಡೆದರು. ಆಗ ಅವರಿಗೆ 18 ವರ್ಷ 1 ತಿಂಗಳು ಮತ್ತು 8 ದಿನಗಳು.

Story first published: Tuesday, December 5, 2023, 17:47 [IST]
Other articles published on Dec 5, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+