IPL 2026: ಅತಿ ಹೆಚ್ಚು ಫ್ರಾಂಚೈಸಿ ಪರ ಆಡಿದ ಟಾಪ್ 5 ಆಟಗಾರರು: ಕರ್ನಾಟಕದ ಆಟಗಾರನಿಗೂ ಸ್ಥಾನ
ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಲೀಗ್ ಆರಂಭಕ್ಕೂ ಮುನ್ನ ಎಲ್ಲ ತಂಡಗಳು ಭರದ ತಯಾರಿಯನ್ನು ನಡೆಸಿವೆ. ಈ ಲೀಗ್‌ನಲ್ಲಿ ಮಾಲೀಕರು ತಮ್ಮ ತಂಡದ ಸಂಯೋಜನೆಗೆ ತಕ್ಕಂತೆ ತಂಡವನ್ನು ಬದಲಿಸುತ್ತಾ ಇರುತ್ತಾರೆ. ಐಪಿಎಲ್ ಹರಾಜಿನಲ್ಲಿ ಸ್ಟಾರ್ ಆಟಗಾರರಿಗೆ ಮಣೆ ಹಾಕುವ ಮಾಲೀಕರು ತಂಡವನ್ನು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಾರೆ. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ತಂಡಗಳ ಪರ ಆಡಿದ ಆಟಗಾರರ ಪಟ್ಟಿ ಇಲ್ಲಿದೆ.
ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ತಂಡಗಳನ್ನು ಬದಲಾಯಿಸಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಆರನ್ ಫಿಂಚ್‌ಗೆ ಮೊದಲ ಸ್ಥಾನ. ಫಿಂಚ್ ಈವರೆಗೆ ಒಟ್ಟು ಒಂಬತ್ತು ಫ್ರಾಂಚೈಸಿಗಳನ್ನು ಪ್ರತಿನಿಧಿಸಿದ್ದಾರೆ. ಇವರು ರಾಜಸ್ಥಾನ ರಾಯಲ್ಸ್, ದೆಹಲಿ ಡೇರ್‌ಡೆವಿಲ್ಸ್, ಪುಣೆ ವಾರಿಯರ್ಸ್ ಇಂಡಿಯಾ, ಸನ್‌ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್, ಗುಜರಾತ್ ಲಯನ್ಸ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಕಣಕ್ಕೆ ಇಳಿದಿದ್ದಾರೆ.

ಜಯದೇವ್ ಉನಾದ್ಕಟ್
ಭಾರತದ ವೇಗದ ಬೌಲರ್ ಜಯದೇವ್ ಉನಾದ್ಕಟ್ ಕೂಡ ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಎರಡನೇ ಆಟಗಾರ. ಇವರು ಸಹ ಒಟ್ಟು 8 ಐಪಿಎಲ್ ತಂಡಗಳನ್ನು ಬದಲಿಸಿದ್ದಾರೆ. ಇವರು ಕೋಲ್ಕತ್ತಾ ನೈಟ್ ರೈಡರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ದೆಹಲಿ ಕ್ಯಾಪಿಟಲ್ಸ್, ರೈಸಿಂಗ್ ಪುಣೆ ಸೂಪರ್‌ಜೈಂಟ್, ರಾಜಸ್ಥಾನ್ ರಾಯಲ್ಸ್, ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಜೆರ್ಸಿ ತೊಟ್ಟು ಕಣಕ್ಕೆ ಇಳಿದಿದ್ದಾರೆ.
ಮನೀಷ್ ಪಾಂಡೆ
ಈ ಪಟ್ಟಿಯಲ್ಲಿ ಕರ್ನಾಟಕದ ಸ್ಟಾರ್ ಆಟಗಾರ ಮನೀಷ್ ಪಾಂಡೆಗೂ ಸ್ಥಾನ. ಇವರು ಸಹ ಐಪಿಎಲ್‌ನ ಮೊದಲ ಆವೃತ್ತಿಯಿಂದಲೇ ಆಡುತ್ತಿರುವ ಪ್ರತಿಭೆ. ಇವರು ಈಗಾಗಲೇ ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪುಣೆ ವಾರಿಯರ್ಸ್ ಇಂಡಿಯಾ, ಕೋಲ್ಕತ್ತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್‌ಜೈಂಟ್ಸ್, ದೆಹಲಿ ಕ್ಯಾಪಿಟಲ್ಸ್ ತಂಡದ ಪರ ಆಡಿದ್ದಾರೆ.
ದಿನೇಶ್ ಕಾರ್ತಿಕ್
ಆರ್‌ಸಿಬಿ ತಂಡದ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ ಅವರಿಗೂ ಸ್ಥಾನ. ಇವರು ಈಗಾಗಲೇ ಐಪಿಎಲ್‌ಗೆ ನಿವೃತ್ತಿ ಹೇಳಿದ್ದಾರೆ. ದಿನೇಶ್ ಈ ವರೆಗೆ ಐಪಿಎಲ್‌ನಲ್ಲಿ ಆರು ಫ್ರಾಂಚೈಸಿ ಪರ ಆಡಿದ ಹೆಗ್ಗಳಿಕೆ ಹೊಂದಿದ್ದಾರೆ. ಹಲವಾರು ಸಂದರ್ಭಗಳಲ್ಲಿ ಕಷ್ಟಕರ ಸಂದರ್ಭಗಳಿಂದ ತಂಡವನ್ನು ಪಾರು ಮಾಡಿದ ಹೆಗ್ಗಳಿಕೆ ಇವರದ್ದಾಗಿದೆ. ಇವರು ಐಪಿಎಲ್‌ನಿಂದ ನಿವೃತ್ತರಾದ ಬಳಿಕ ಆರ್‌ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಯುವರಾಜ್ ಸಿಂಗ್
ಭಾರತದ ದಂತಕಥೆ ಯುವರಾಜ್ ಸಿಂಗ್ ಅವರು ಸಹ ಅತಿ ಹೆಚ್ಚು ಫ್ರಾಂಚೈಸಿಗಳ ಪರ ಆಡಿದ ಆಟಗಾರ. ಇವರು ಆರ್‌ಸಿಬಿ ಸೇರಿದಂತೆ ಆರು ತಂಡದ ಪರ ಆಡಿದ್ದಾರೆ. ಇವರು ಲೀಗ್‌ನಲ್ಲಿ ಬಿಗ್ ಹಿಟ್ ಸಿಕ್ಸರ್ ಬಾರಿಸುವಲ್ಲಿ ಹೆಸರುವಾಸಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications