ಇಂಗ್ಲೆಂಡ್, ಐಪಿಎಲ್‌ನಲ್ಲಿ ಆಡಿದ್ದು ನನ್ನ ಕನಸು ಹೆಚ್ಚಿಸಿತು: ಗರ್ನಿ

ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ವೇಗಿ ಹ್ಯಾರಿ ಗರ್ನಿ ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಮಾಜಿ ಆಟಗಾರರೂ ಆಗಿರುವ ಗರ್ನಿ ಎಲ್ಲಾ ಕ್ರಿಕೆಟ್ ಮಾದರಿಗಳಲ್ಲಿ ಒಟ್ಟಾರೆ 614 ವಿಕೆಟ್ ದಾಖಲೆ ಹೊಂದಿದ್ದಾರೆ. ಶುಕ್ರವಾರ (ಮೇ 14) ನಿವೃತ್ತಿ ನೀಡಿರುವ ಗರ್ನಿ ಐಪಿಎಲ್ ಬಗ್ಗೆಯೂ ಒಳ್ಳೆಯ ಮಾತುಗಳನ್ನಾಡಿದ್ದಾರೆ.
'ಇಂಗ್ಲೆಂಡ್ ಪರ ಆಡಿದ್ದು, ಐಪಿಎಲ್‌ನಲ್ಲಿ ಆಡಿದ್ದು, ತವರಿನಲ್ಲಿ ಮತ್ತು ವಿದೇಶದಲ್ಲಿ ಬ್ಲಾಸ್ಟ್, ಕೆರಿಬಿಯನ್ ಪ್ರೀಮಿಯರ್ ಲೀಗ್, ಬಿಗ್ ಬ್ಯಾಷ್ ಲೀಗ್ ಇವುಗಳೆಲ್ಲ ಸೇರಿ ಒಟ್ಟು 8 ಟ್ರೋಫಿಗಳನ್ನು ಗೆದ್ದಿದ್ದು ನನ್ನ ಕನಸುಗಳನ್ನು ಹೆಚ್ಚಿಸಿತು,' ಎಂದು ನಿವೃತ್ತಿ ನೀಡಿ ಮಾತನಾಡುವಾಗ ಗರ್ನಿ ಹೇಳಿದ್ದಾರೆ.
ಇಂಗ್ಲೆಂಡ್ ತಂಡದ ಪ್ರತಿಭಾವಂತ ಟಿ20 ಬೌಲರ್‌ಗಳಲ್ಲಿ ಒಬ್ಬರಾಗಿದ್ದ ಹ್ಯಾರಿ ಗರ್ನಿ, 10 ಟೆಸ್ಟ್ ಪಂದ್ಯಗಳಲ್ಲಿ 11 ವಿಕೆಟ್, 2 ಟಿ20ಐ ಪಂದ್ಯಗಳಲ್ಲಿ 3 ವಿಕೆಟ್, 8 ಐಪಿಎಲ್ ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದರು. ಇಂಗ್ಲೆಂಡ್ ರಾಷ್ಟ್ರೀಯ ತಂಡದಲ್ಲಿ ಹ್ಯಾರಿಗೆ ಹೆಚ್ಚು ಅವಕಾಶಗಳು ಸಿಕ್ಕಿರಲಿಲ್ಲ. ಆದರೆ ಸಿಕ್ಕ ಅವಕಾಶಗಳಲ್ಲಿ ಗರ್ನಿ ಉತ್ತಮ ಪ್ರದರ್ಶನ ನೀಡಿದ್ದರು.
ಈಗ 34ರ ಹರೆಯದ ಗರ್ನಿ, 2014ರಲ್ಲಿ ಸ್ಕಾಟ್ಲೆಂಡ್ ವಿರುದ್ಧದ ಏಕದಿನ ಪಂದ್ಯದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 2019 ಮೇ 5ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಹ್ಯಾರಿ ಕಡೇಯ ಐಪಿಎಲ್ ಪಂದ್ಯ ಆಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications