Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಖಾಲಿ ಸ್ಟೇಡಿಯಂನಲ್ಲಿ ಆಡೋದು ವಿಲಕ್ಷಣವಾಗಿದೆ: ಕೊಹ್ಲಿಗೆ ಪೆಪ್ ಪ್ರತಿಕ್ರಿಯೆ

Playing in closed doors is weird: Guardiola tells Virat Kohli

ದುಬೈ: ಕದ ಮುಚ್ಚಿದ ಸ್ಟೇಡಿಯಂನಲ್ಲಿ ಆಡೋದು ಒಂಥರಾ ವಿಲಕ್ಷಣವಾಗಿರುತ್ತದೆ. ಅದೊಂಥರಾ ಸೌಹಾರ್ದ ಪಂದ್ಯ ಆಡುವುದಕ್ಕಿಂತಲೂ ನೀರಸ ಅನ್ನಿಸುತ್ತದೆ ಎಂದು ಮ್ಯಾನ್ಚೆಸ್ಟರ್ ಸಿಟಿಯ ಮ್ಯಾನೇಜರ್ ಪೆಪ್ ಗಾರ್ಡಿಯೊಲಾ ಅವರು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜೊತೆ ಹೇಳಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಜೊತೆ ಇನ್‌ಸ್ಟಾಗ್ರಾಮ್ ಸಂವಾದದಲ್ಲಿ ಪಾಲ್ಗೊಂಡ ಸ್ಪೇನ್‌ನ ಮಾಜಿ ಫುಟ್ಬಾಲ್‌ ಆಟಗಾರರಾಗಿರುವ ಪೆಪ್ ಗಾರ್ಡಿಯೊಲಾ, ಖಾಲಿ ಮೈದಾನದಲ್ಲಿ ಆಡುವಾಗಿನ ಅನುಭವದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೊರೊನಾ ಆರಂಭವಾದಾಗಿನಿಂದ ಕ್ರಿಕೆಟ್ ಸೇರಿದಂತೆ ಬಹುತೇಕ ಕ್ರೀಡಾ ಸ್ಪರ್ಧೆಗಳು ಪ್ರೇಕ್ಷಕರಿಲ್ಲದ ಸ್ಟೇಡಿಯಂನಲ್ಲಿ ನಡೆಯುತ್ತಿದೆ.

'ಜನರಿಲ್ಲದ ಸ್ಟೇಡಿಯಂ ಅದು ಸಾಮಾನ್ಯ ಪಂದ್ಯಗಳಂತಲ್ಲ. ಅದು ಒಂದು ಸೌಹಾರ್ದ ಪಂದ್ಯಕ್ಕೂ ಸಮನಾಗಿ ನಿಲ್ಲಲಾರದು. ಆದರೆ ನಮಗೆ ಬೇರೆ ದಾರಿಯಿಲ್ಲ. ಆಟ ಮುಂದುವರೆಯಬೇಕಾದರೆ ನಾವು ಖಾಲಿ ಮೈದಾನದಲ್ಲಿ ಆಡಲೇಬೇಕು. ಆದರೆ ಪ್ರೇಕ್ಷಕರಿಲ್ಲದೆ ಆಡೋದು ಒಂಥದಾ ವಿಭಿನ್ನ ಗೇಮ್' ಎಂದು ಪೆಪ್ ಗಾರ್ಡಿಯೊಲಾ ಕೊಹ್ಲಿ ಜೊತೆ ಅಭಿಪ್ರಾಯಿಸಿದ್ದಾರೆ.

ಗಾರ್ಡಿಯೊಲಾ ಜೊತೆಗಿನ ಸಂವಾದದ ವೇಳೆ ವಿರಾಟ್ ಕೊಹ್ಲಿಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ನಾನು ಉತ್ಸುಕನಾಗಿದ್ದೆ. ಆದರೆ ಮೈದಾನಕ್ಕೆ ಇಳಿದಾಗ ನನಗೆ ಯಾವತ್ತಿನಂತ ಉತ್ಸುಕತೆ ಇರಲಿಲ್ಲ. ಕಾರಣ ಉತ್ಸುಕತೆ ತುಂಬುವ ಅಭಿಮಾನಿಗಳು ಅಲ್ಲಿ ಇರಲಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.

Story first published: Thursday, October 15, 2020, 0:49 [IST]
Other articles published on Oct 15, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+