ಟೀಮ್‌ಮೇಟ್ಸ್ ಜೊತೆಗೆ ಲೂಡೋ, ಕುಟುಂಬಸ್ಥರ ಜೊತೆ ಕಾರ್ಡ್ಸ್, ಇದು ಸ್ಮೃತಿ ಮಂಧಾನ ದಿನಚರಿ

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಇಡೀ ಭಾರತ ಲಾಕ್‌ಡೌನ್ ಆಗಿದೆ. ಈ ಹಿನ್ನೆಲೆಯಲ್ಲಿ ತಮ್ಮ ಮನೆಗಳಲ್ಲೇ ಕ್ರೀಡಾಪಟುಗಳು ಸಮಯವನ್ನು ಕಳೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಸಮಯವನ್ನು ಕಳೆಯಲು ಏನೆಲ್ಲಾ ಮಾಡುತ್ತಾರೆ ಎಂಬುದುನ್ನು ಅನೇಕ ಕ್ರಿಕೆಟಿಗರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಟೀಮ್ ಇಂಡಿಯಾ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಮನೆಯಲ್ಲಿ ಹೇಗೆ ಕಾಲ ಕಳೆಯುತ್ತಾರೆ ಎಂದು ಬಿಸಿಸಿಐ ಮಾಡಿದ ಟ್ವೀಟ್‌ನಲ್ಲಿ ಹೇಳಿಕೊಂಡಿದ್ದಾರೆ. ಕುಟುಂಬದ ಸದಸ್ಯರ ಜೊತೆಗೆ ಕಾಲ ಕಳೆಯುತ್ತಾ ಸ್ಮೃತಿ ಮಂಧಾನ ಟೀಮ್ ಮೇಟ್ಸ್ ಜೊತೆಗೆ ವಿಶಿಷ್ಠ ರೀತಿಯಲ್ಲಿ ಸಂಪರ್ಕದಲ್ಲಿದ್ದಾರಂತೆ.
ಸ್ಮೃತಿ ಮಂಧಾನ ಲಾಕ್‌ಡೌನ್‌ನ ಈ ಸಂದರ್ಭಲ್ಲಿ ತಂಡದ ಇತರ ಸದಸ್ಯರ ಜೊತೆಗೆ ಆನ್‌ಲೈನ್‌ನಲ್ಲಿ ಲೂಡೋ ಆಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇದು ತಂಡದ ಸದಸ್ಯರ ಜೊತೆಗೆ ಸಂಪರ್ಕದಲ್ಲಿದ್ದು ಉತ್ತಮ ಬಾಂಧವ್ಯ ಮುಂದುವರಿಯಲು ಸಹಕಾರಿಗುತ್ತದೆ ಎಂದು ಸ್ಮೃತಿ ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ದೈಹಿಕ ಕ್ಷಮತೆಯನ್ನು ಕಾಪಾಡಿಕೊಳ್ಳಲು ಮನೆಯಲ್ಲೇ ವರ್ಕೌಟ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ತನ್ನ ಟ್ರೈನರ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ, ಅವರಿಂದ ಸಲಹೆಗಳನ್ನು ಪಡೆದುಕೊಳ್ಳುತ್ತಿದ್ದೇನೆ, ಅಗತ್ಯದ ವರ್ಕೌಟ್‌ಗಳನ್ನು ಈ ಮೂಲಕ ಮಾಡಿಕೊಳ್ಳುತ್ತಿರುವುದಾಗಿ ಮಂಧಾನ ಹೇಳಿದ್ದಾರೆ.
ಇದರ ಜೊತೆಗೆ ಕುಟುಂಬಸ್ಥರ ಜೊತೆಗೆ ಕಾರ್ಡ್ಸ್ ಆಡಿಕೊಂಡು, ತಾಯಿಗೆ ಅಡುಗೆಯಲ್ಲಿ ಸಹಾಯ ಮಾಡುತ್ತಾ ಈ ಸಮಯವನ್ನು ಕಳೆಯುತ್ತಿದ್ದೇನೆ, ಸಿನಿಮಾ ಪ್ರಿಯೆ ಆಗಿರುವುದರಿಂದ ವಾರದಲ್ಲಿ ಮೂರು ಸಿನಿಮಾಗಳನ್ನು ನೋಡುತ್ತಿದ್ದೇನೆ ಎಂದು ಸ್ಮೃತಿ ಮಂಧಾನ ತಮ್ಮ ದಿನಚರಿಯ ಬಗ್ಗೆ ಹೇಳಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications