Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IPL 2025 LSG: ಲಕ್ನೋ ಪ್ಲೇ ಆಫ್‌ ಹಾದಿ ಕಷ್ಟ ಕಷ್ಟ..

ಲಕ್ನೋ ಸೂಪರ್ ಜೈಂಟ್ಸ್ ಭಾನುವಾರ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡಿದೆ. ಈ ಗೆಲುವಿನ ಮೂಲಕ ಪಂಜಾಬ್ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಲಕ್ನೋ ಸೂಪರ್‌ ಜೈಂಟ್ಸ್ ಈಗ ಪ್ಲೇ ಆಫ್‌ ಲೆಕ್ಕಾಚಾರವನ್ನು ಆರಂಭಿಸಿದೆ. ಎಲ್‌ಎಸ್‌ಜಿ ಮುಂದಿರುವ ಸವಾಲುಗಳು ಏನು? ಇನ್ನು ಎಷ್ಟು ಪಂದ್ಯಗಳನ್ನು ಆಡಬೇಕಿದೆ? ಎಂಬ ಬಗ್ಗೆ ಕಂಪ್ಲೀಟ್ ರಿಪೋರ್ಟ್‌ ಇಲ್ಲಿದೆ.

ಲಕ್ನೋ ಸೂಪರ್ ಜೈಂಟ್ಸ್‌ ಸದ್ಯ ಆಡಿದ 11 ಪಂದ್ಯಗಳಲ್ಲಿ 5 ಜಯ ಸಾಧಿಸಿದ್ದು, 10 ಅಂಕಗಳನ್ನು ಕಲೆ ಹಾಕಿದ್ದು ಏಳನೇ ಸ್ಥಾನದಲ್ಲಿದೆ. ಎಲ್‌ಎಸ್‌ಜಿ ಲೀಗ್‌ ಹಂತದಲ್ಲೇ ಇನ್ನು ಮೂರು ಪಂದ್ಯಗಳನ್ನು ಆಡಲಿದೆ. ಈ ಮೂರು ಪಂದ್ಯಗಳಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿ ಲಕ್ನೋ ತಂಡವಿದೆ. ಐಪಿಎಲ್‌ ಆರಂಭಿಕ ಹಂತದಲ್ಲಿ ಎಲ್‌ಎಸ್‌ಜಿ ಪ್ಲೇ ಆಫ್‌ನ ಪ್ರಬಲ ಸ್ಪರ್ಧಿಎಂದು ಭಾವಿಸಲಾಗಿತ್ತು. ಆದರೆ ಈಗ ಈ ತಂಡದ ಚಿತ್ರಣವೇ ಬದಲಾಗಿದೆ. ಆದರೆ ಎಲ್‌ಎಸ್‌ಜಿ ಡೆಲ್ಲಿ ಕ್ಯಾಪಿಟಲ್ಸ್‌, ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ ಸೋಲು ಕಂಡಿದ್ದು, ಹ್ಯಾಟ್ರಿಕ್ ಸೋಲಿನ ನೋವು ತಂಡವನ್ನು ಆವರಿಸಿಕೊಂಡಿದೆ. ಈ ವೇಳೆ ಗೆಲುವಿನ ಟ್ರ್ಯಾಕ್‌ಗೆ ಮರಳಲು ಎಲ್‌ಎಸ್‌ಜಿ ದೊಡ್ಡ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಆದರೆ ಎಲ್‌ಎಸ್‌ಜ ತಂಡದ ಮುಂದಿನ ಹಾದಿ ಕಷ್ಟವಾಗಿದೆ.

Playoff Equation Tightens for Lucknow Super Giants After Slump in Form

ಲಕ್ನೋ ಸೂಪರ್ ಜೈಂಟ್ಸ್ ತಂಡದ ಮುಂದಿನ ಹಾದಿ ಕಷ್ಟಕರವಾಗಿದೆ. ಇದಕ್ಕೆ ಕಾರಣ ಎಲ್‌ಎಸ್‌ಜಿ ಮುಂದಿನ ಪಂದ್ಯಗಳಲ್ಲಿ ಎದುರಿಸಲಿರುವ ತಂಡಗಳ ಪ್ರದರ್ಶನ. ಇದೇ 9 ರಂದು ಎಲ್‌ಎಸ್‌ಜಿ ತನ್ನ ತವರು ಅಂಗಳದಲ್ಲಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಕಾದಾಟ ನಡೆಸಲಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವುದು ಉಭಯ ತಂಡಗಳಿಗೆ ಅನಿವಾರ್ಯವಾಗಿದೆ. ಆರ್‌ಸಿಬಿ ಈ ಪಂದ್ಯ ಗೆದ್ದ ಪ್ಲೇ ಆಫ್‌ಗೆ ಕ್ವಾಲಿಫೈ ಆಗುವ ಕನಸು ಕಾಣುತ್ತಿದ್ದರೆ, ಎಲ್‌ಎಸ್‌ಜಿ ಈ ಪಂದ್ಯವನ್ನು ಸಹ ಗೆಲ್ಲಲೇ ಬೇಕು.

ಏನಿದೆ ಪ್ಲೇ ಆಫ್‌ ಲೆಕ್ಕಾಚಾರ?

ಆರ್‌ಸಿಬಿ ಪಂದ್ಯದ ಬಳಿಕ ಲಕ್ನೋ ಗುಜರಾತ್ ಟೈಟನ್ಸ್ ತಂಡವನ್ನು ಮೇ 14 ರಂದು ಎದುರಿಸಲಿದೆ. ಗುಜರಾತ್ ಟೈಟನ್ಸ್ ಸಹ ಅಗ್ರ 2 ಸ್ಥಾನದ ಮೇಲೆ ಕಣ್ಣು ನೆಟ್ಟಿದ್ದರಿಂದ ಈ ಪಂದ್ಯದಲ್ಲಿ ಗೆಲುವು ದಾಖಲಿಸುವುದು ಅನಿವಾರ್ಯವಾಗಿದೆ. ಇನ್ನು ಲಕ್ನೋ ತನ್ನ ಲೀಗ್ ಹಂತದ ಕೊನೆಯ ಪಂದ್ಯವನ್ನು ಎಸ್‌ಆರ್‌ಎಚ್‌ ವಿರುದ್ಧ ಮೇ 18 ರಂದು ಆಡಲಿದೆ. ಮೊದಲಿನ ಎರೆಡು ಪಂದ್ಯಗಳನ್ನು ಗೆದ್ದಾಗ ಮಾತ್ರ ಈ ಪಂದ್ಯಕ್ಕೆ ಇಂಪಾರ್ಟೆಂಟ್ಸ್ ಸಿಗುತ್ತದೆ. ಇನ್ನು ಈ ಮೂರು ಪಂದ್ಯಗಳನ್ನು ಗೆದ್ದರೂ ಸಹ ಎಲ್‌ಎಸ್‌ಜಿ ರನ್‌ ರೇಟ್‌ ಮೇಲೆ ಹೆಚ್ಚಿನ ಒತ್ತು ನೀಡುವ ಅವಶ್ಯಕತೆ ಇದೆ. ಮುಂಬರುವ ಮೂರು ಪಂದ್ಯಗಳನ್ನು ಗೆದ್ದಲ್ಲಿ ಮಾತ್ರ ಎಲ್‌ಎಸ್‌ಜಿ ತಂಡ 16 ಅಂಕಕ್ಕೆ ಬಡ್ತಿ ಪಡೆಯಬಹುದಾಗಿದೆ. ಇಲ್ಲದೆ ಇದ್ದರೆ ಎಲ್‌ಎಸ್‌ಜಿ ಲೀಗ್‌ ಹಂತದಲ್ಲೇ ಟೂರ್ನಿಗೆ ಗುಡ್‌ ಬಾಯ್‌ ಹೇಳಬೇಕಾಗುತ್ತದೆ.

Playoff Equation Tightens for Lucknow Super Giants After Slump in Form

ಲಕ್ನೋ ತಂಡದಕ್ಕೆ ಸ್ಟಾರ್ ಆಟಗಾರರ ಕಳಪೆ ಫಾರ್ಮ್‌ ತಲೆ ನೋವಾಗಿದೆ. ಹರಾಜಿನಲ್ಲಿ ಲಕ್ನೋ ತಂಡ 27 ಕೋಟಿ ರೂಪಾಯಿಗೆ ರಿಷಭ್ ಪಂತ್‌ ಅವರನ್ನು ಖರೀದಿಸಿತ್ತು. ಆದರೆ ಪಂತ್ ಈ ಲೀಗ್‌ನಲ್ಲಿ ಸ್ಥಿರ ಪರಿಸ್ಥಿತಿ ನೀಡುವಲ್ಲಿ ವಿಫಲರಾಗಿದ್ದಾರೆ. ಇದು ತಂಡದ ಚಿಂತೆಯನ್ನು ಹೆಚ್ಚಿಸಿದೆ.

Story first published: Monday, May 5, 2025, 17:20 [IST]
Other articles published on May 5, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+