ರವಿಶಾಸ್ತ್ರಿ ಶುಭ ಹಾರೈಕೆಗೆ ಶಾಸ್ತ್ರಿ ಸ್ಟೈಲಲ್ಲೇ ಪ್ರತಿಕ್ರಿಯಿಸಿದ ಮೋದಿ!
ರಾಂಚಿ, ಮಾರ್ಚ್ 16: ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 300ಪ್ಲಸ್ ಸ್ಥಾನ ಗೆದ್ದು ಭರ್ಜರಿ ಪ್ರದರ್ಶನ ನೀಡಿದ್ದನ್ನು ಮಾಜಿ ಕ್ರಿಕೆಟರ್, ಕಾಮೆಂಟೆಟರ್ ರವಿಶಾಸ್ತ್ರಿ ಅವರು ಗುರುವಾರ(ಮಾರ್ಚ್ 16) ದಂದು ಹೊಗಳಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರಿಗೆ ಶುಭ ಹಾರೈಸಿ ಟ್ವೀಟ್ ಮಾಡಿದ್ದಕ್ಕೆ ಮೋದಿ ಅವರು ಉತ್ತರಿಸಿದ್ದಾರೆ. ಆದರೆ, ಪ್ರಧಾನಿ ಅವರು ಶಾಸ್ತ್ರಿ ಸ್ಟೈಲಲ್ಲೇ ಪ್ರತಿಕ್ರಿಯಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.[ಮೋದಿ ನನ್ನ ತಂದೆ ಎಂದ ಕ್ಯಾಲೆಂಡರ್ ಗರ್ಲ್ ಅವನಿ!]

@RaviShastriOfc ಟ್ವಿಟ್ಟರ್ ಖಾತೆಯಿಂದ ಪ್ರಧಾನಿ ಅವರಿಗೆ ಶುಭ ಹಾರೈಸಿದ ರವಿಶಾಸ್ತ್ರಿ, ಸಂದೇಶ ಕೊನೆಯಲ್ಲಿ Tracer Bullet ಪದ ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಬುಲೆಟ್ ರೀತಿಯಲ್ಲಿ 300 ಸ್ಥಾನಕ್ಕೆ ವೇಗವಾಗಿ ಬಿಜೆಪಿ ನುಗ್ಗಿದೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, ಸ್ಪರ್ಧೆ ಕೊನೆ ಕ್ಷಣದವರೆಗೂ ಕುತೂಹಲ ಕಾಯ್ದುಕೊಂಡಿತ್ತು. ಅಂತಿಮವಾಗಿ ಪ್ರಜಾಪ್ರಭುತ್ವಕ್ಕೆ ಜಯವಾಯಿತು ಎಂದಿದ್ದಾರೆ.
ರವಿಶಾಸ್ತ್ರಿ ತಮ್ಮ ಕಾಮೆಂಟ್ರಿಯಲ್ಲಿ "Cricket is the real winner" ಎಂದು ಹೆಚ್ಚು ಬಳಸುವುದನ್ನು ಕೇಳಿರಬಹುದು. ಇದಕ್ಕೆ ಹೊಂದುವಂತೆ ಮೋದಿ ಅವರು democracy is indeed the real winner ಎಂದು ಉತ್ತರ ಕೊಟ್ಟಿದ್ದಾರೆ. ಈ ಟ್ವೀಟ್, ಪ್ರತಿಕ್ರಿಯೆ ಸಂಜೆ ವೇಳೆಗೆ 3000 ಬಾರಿ ರೀಟ್ವೀಟ್ ಆಗಿದೆ. 6000 ಬಾರಿ ಲೈಕ್ ಪಡೆದುಕೊಂಡಿತ್ತು.
ಶಾಸ್ತ್ರಿ ಅವರ 'Tracer Bullet' ಪದ ಬಳಕೆ ಕೂಡಾ ಜನಪ್ರಿಯತೆ ಪಡೆದುಕೊಂಡಿದ್ದು, ಬಿಸಿಸಿಐ ಈಗಾಗಲೇ ರವಿಶಾಸ್ತ್ರಿ ಅವರ ಅಣಕು ಮಾಡುವಂತೆ ಟೀಂ ಇಂಡಿಯಾ ಆಟಗಾರರಿಗೆ ಹಾಸ್ಯದ ಆಹ್ವಾನ ನೀಡಿದೆಯಂತೆ.(ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications