ಭಾನುವಾರ ನವಿ ಮುಂಬೈನಲ್ಲಿ ನಡೆದ ಮಹಿಳಾ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಭಾರತ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಹರ್ಮನ್ ಪ್ರೀತ್ ಕೌರ್ ಪಡೆ 52 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ವಿಶ್ವಕಪ್‌ಗೆ ಮುತ್ತಿಟ್ಟಿತು. ವಿಶ್ವಕಪ್ ವಿಜೇತ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ (ನ.5) ತಮ್ಮ ಕಚೇರಿಯಲ್ಲಿ ಭೇಟಿಯಾದರು.
ಲೀಗ್ ಹಂತದ ಪಂದ್ಯದಲ್ಲಿ ಸತತ ಮೂರು ಸೋಲುಗಳನ್ನು ಕಂಡರೂ ಭಾರತ, ಬಳಿಕ ಸ್ಥಿರ ಪ್ರದರ್ಶನ ನೀಡಿ ಉಪಾಂತ್ಯಕ್ಕೆ ಅರ್ಹತೆ ಪಡೆಯಿತು. ಸೆಮಿಫೈನಲ್ ಹಂತದಲ್ಲಿ ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿ ಮೂರನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿತು. 25 ವರ್ಷಗಳ ಬಳಿಕ ಮಹಿಳಾ ಏಕದಿನ ವಿಶ್ವಕಪ್‌ಗೆ ನೂತನ ಚಾಂಪಿಯನ್ ಸಿಕ್ಕರು. ಐತಿಹಾಸಿಕ ಸಾಧನೆ ಮಾಡಿದ ಮಹಿಳಾ ತಂಡವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಭೇಟಿ ಆದರು.

2017ರ ನೆನಪುಗಳನ್ನು ಹರ್ಮನ್ ಪ್ರೀತ್ ಕೌರ್ ನೆನದರು. ನಾವು ಈ ಹಿಂದೆ ನಿಮ್ಮನ್ನು (ಪ್ರಧಾನಿಯನ್ನು) ಭೇಟಿಯಾದಾಗ ಟ್ರೋಫಿ ನಮ್ಮ ಕೈಯಲ್ಲಿ ಇರಲಿಲ್ಲ. ಆದರೆ ಈ ಬಾರಿ ಟ್ರೋಫಿಯೊಂದಿಗೆ ನಿಮ್ಮ ಭೇಟಿ ಖುಷಿ ನೀಡಿದೆ ಎಂದು ಟೀಮ್ ಇಂಡಿಯಾದ ನಾಯಕಿ ಹೇಳಿದರು.
2017ರಿಂದ ತಾವು ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಕಾತುರರಾಗಿದ್ದೇವು. ತಾವು ಕಂಡ ಕನಸನ್ನು ಸಾಕಾರಗೊಳಿಸುವಲ್ಲಿ ಸಾಕಷ್ಟು ಶ್ರಮಿಸಿದ್ದೇವೆ ಎಂದು ಸರಣಿ ಶ್ರೇಷ್ಠ ಆಟಗಾರ್ತಿ ದೀಪ್ತಿ ಶರ್ಮಾ ತಿಳಿಸಿದರು. ಇದೇ ವೇಳೆ ಮೋದಿ ದೀಪ್ತಿ ಅವರು ಹಾಕಿಸಿಕೊಂಡ ಜೈ ಶ್ರೀರಾಮ ಟ್ಯಾಟೂ ಹಾಕಿಸಿಕೊಂಡಿದರ ಕುರಿತು ಕೇಳಿದರು. ಆಗ ದೀಪ್ತಿ ಶರ್ಮಾ ಇದರಿಂದ ನಮಗೆ ಸ್ಟ್ರೆಂತ್ ಸಿಗುತ್ತದೆ ಎಂದು ತಿಳಿಸಿದ್ದಾರೆ.

ಅಮನ್‌ಜೋತ್ ಕೌರ್ ಫೈನಲ್ ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್ ಆಗುವ ಅಮೋಘ ಕ್ಯಾಚ್ ಪಡೆದರು. ಆದರೆ ಆ ಕ್ಯಾಚ್ ಪಡೆಯುವಾಗ ಅದು ಎರಡು ಬಾರಿ ಕೈ ತಪ್ಪಿತ್ತು. ಬಳಿಕ ಅಮನ್‌ಜೋತ್ ಯಶಸ್ವಿಯಾಗಿ ಕ್ಯಾಚ್ ಪಡೆದರು. ಈ ಕ್ಯಾಚ್ ಬಗ್ಗೆ ಮೋದಿ ಕೇಳಿದಾಗ, ಅಮನ್‌ಜೋತ್ ಕ್ಯಾಚ್ ಪಡೆಯುವ ವರೆಗೂ ಏನಾಯಿತು ತಿಳಿದಿದೆ. ಆದರೆ ಕ್ಯಾಚ್ ಪಡೆದರೆ ಏನು ನಡೆಯಿತು ತಿಳಿದಿಲ್ಲ. ನೀವು ಕ್ಯಾಚ್ ಪಡೆದು ಕಪ್ ಎತ್ತಿದಿರಿ ಎಂದು ಮೋದಿ ತಿಳಿಸಿದರು.
ಇನ್ನು ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಕ್ರಾಂತಿ ಗೌಡ ಅವರ ಸಹ ಜರ್ನಿಯನ್ನು ವಿವರಿಸಿದರು. ಇದೇ ವೇಳೆ ರೇಣುಕಾ ಸಿಂಗ್ ಠಾಕೂರ್ ಅವರ ಆಟ, ರಿಚಾ ಘೋಷ್ ಅವರ ಬ್ಯಾಟಿಂಗ್‌ನ್ನು ಮೋದಿ ಕೊಂಡಾಡಿದರು. ಇದೇ ವೇಳೆ ಪ್ರಧಾನಿ ಮೋದಿ ದೇಶದ ಜನರು ಫಿಟ್ ಆಗಿ ಇಡಲು ನೀವು ಸಮಯ ಸಿಕ್ಕಾಗಲೆಲ್ಲಾ ಸಂದೇಶವನ್ನು ನೀಡಿರಿ ಎಂದು ತಿಳಿಸಿದರು. ಇದೇ ವೇಳೆ ಅವರು ಫಿಟ್‌ನೆಸ್ ಮತ್ತು ವ್ಯಾಯಾಮದ ಮಹತ್ವವನ್ನು ಒತ್ತಿ ಹೇಳಿದರು.