For Quick Alerts
ALLOW NOTIFICATIONS  
For Daily Alerts
 

Vaibhav Suryavanshi: ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಕೊಂಡಾಡಿದ ಪ್ರಧಾನಿ ಮೋದಿ

ಸದ್ಯ ಕ್ರಿಕೆಟ್‌ ಮೈದಾನದಲ್ಲಿ ಅತಿ ಹೆಚ್ಚು ಚರ್ಚಿತವಾಗುತ್ತಿರುವ ಹೆಸರುಗಳಲ್ಲಿ ವೈಭವ್ ಸೂರ್ಯವಂಶಿ ಅವರದ್ದು ಒಂದು. ಇತ್ತೀಚಿಗೆ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಗುಜರಾತ್ ಟೈಟಾನ್ಸ್‌ ವಿರುದ್ಧ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಇವರ ಕ್ಲಾಸಿಕ್‌ ಇನಿಂಗ್ಸ್‌ ಕಂಡು ಅದೆಷ್ಟೋ ಮಾಜಿ ಆಟಗಾರರು, ಕ್ರಿಕೆಟ್‌ ವಿಶ್ಲೇಷಕರು ಬೆನ್ನು ತಟ್ಟಿದ್ದಾರೆ. ಈಗ ಈ ಸಾಲಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸೇರಿಕೊಂಡಿದ್ದಾರೆ. ಪ್ರಧಾನಿ ಮೋದಿ ವೈಭವ್ ಸೂರ್ಯವಂಶಿ ಅವರ ಆಟವನ್ನು ಶ್ಲಾಘಿಸಿದ್ದಾರೆ.

ವೈಭವ್‌ ಗುಜರಾತ್‌ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದರು. ಅಲ್ಲದೆ ಈ ಮೂಲಕ ಎಲ್ಲರ ಗಮನ ಸೆಳೆದರು. ಆದರೆ ಆ ಬಳಿಕ ಮುಂಬೈ ಇಂಡಿಯನ್ಸ್‌ ಹಾಗೂ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ದೊಡ್ಡ ಇನಿಂಗ್ಸ್ ಬಾರದೇ ಇದ್ದರೂ ಸಹ ವೈಭವ್‌ ಅಭಿಮಾನಿಗಳ ಮನಸದಲ್ಲಿ ಹಸಿರಾಗಿದ್ದಾರೆ. ಇವರ ಆಟವನ್ನು ಪ್ರಧಾನಿ ಮೋದಿ ಕೊಂಡಾಡಿದ್ದಾರೆ.

PM Modi Praises Vaibhav Suryavanshi s Sensational IPL Century Against Gujarat Titans

ಪ್ರಧಾನಿ ಮೋದಿ ಭಾನುವಾರ ಬಿಹಾರದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಇವರು ಖೇಲೋ ಇಂಡಿಯಾ ಯುವ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಇನ್ನು ಕಾರ್ಯಕ್ರಮದಲ್ಲಿ ಮೋದಿ ವೆಬ್‌ನಾರ್‌ ಮೂಲಕ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕೇಂದ್ರ ಕ್ರೀಡಾ ಮತ್ತು ಯುವಜನ ವ್ಯವಹಾರಗಳ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ರಾಜ್ಯ ಸಚಿವ ಸಂಪುಟದ ಸದಸ್ಯರು ಉಪಸ್ಥಿತರಿದ್ದರು. ಇದೇ ವೇದಿಕೆಯಲ್ಲಿ ಮೋದಿ ವೈಭವ್ ಸೂರ್ಯವಂಶಿ ಗುಣಗಾನ ಮಾಡಿದರು.

ಮೋದಿ ಶ್ಲಾಘನೆ

ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ವೈಭವ್ ಸೂರ್ಯವಂಶಿ ಆಟವನ್ನು ನೆನೆದ ಮೋದಿ, ವೈಭವ್‌ ಬಿಹಾರದ್ದವರೇ. ಭಾರತದಲ್ಲಿ ನಡೆಯುತ್ತಿರುವ ಐಪಿಎಲ್‌ನಲ್ಲಿ ಇವರ ಆಟ ನೋಡಿದ್ದೇನೆ. ವೈಭವ್‌ ಅವರ ಈಗಿನ ಶ್ರಮುದ ಹಿಂದೆ ಅವರ ಬೆವರ ಹನಿಗಳು ಎದ್ದು ಕಾಣುತ್ತವೆ. ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದಲ್ಲಿ ಇವರ ಪರಿಶ್ರಮ ದೊಡ್ಡದು ಎಂದು ಮೋದಿ ಶ್ಲಾಘಿಸಿದರು.

PM Modi Praises Vaibhav Suryavanshi s Sensational IPL Century Against Gujarat Titans

ಸೌದಿಯಲ್ಲಿ ನಡೆದ ಐಪಿಎಲ್‌ ಮೆಗಾ ಹರಾಜಿನಲ್ಲಿ ವೈಭವ್ ಸೂರ್ಯವಂಶಿ ಅವರನ್ನು ರಾಜಸ್ಥಾನ ರಾಯಲ್ಸ್ 1.1 ಕೋಟಿ ರೂಪಾಯಿ ನೀಡಿ ತಂಡಕ್ಕೆ ಖರೀದಿಸಿತ್ತು. ಆದರೆ ಆರಂಭಿಕ ಪಂದ್ಯಗಳಲ್ಲಿ ಇವರಿಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಸಂಜು ಸ್ಯಾಮ್ಸನ್‌ ಗಾಯಕ್ಕೆ ತುತ್ತಾದ ಬಳಿಕ ಇವರಿಗೆ ಇನಿಂಗ್ಸ್‌ ಆರಂಭಿಸುವ ಅವಕಾಶ ಸಿಕ್ಕಿತು. ಈ ಅವಕಾಶವನ್ನು ವೈಭವ್‌ ಸಮರ್ಥವಾಗಿ ಬಳಸಿಕೊಂಡರು.

ತಾವು ಎದುರಿಸಿದ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ವೈಭವ್ ಆರ್ಭಟಿಸಿದರು. ಆದರೆ ಈ ವೇಳೆ ಬಿಗ್ ಇನಿಂಗ್ಸ್ ಕಟಲಿಲ್ಲ. ಆದರೆ ತಾವು ಆಡಿದ ಮೂರನೇ ಪಂದ್ಯದಲ್ಲಿ ವೈಭವ್‌ 35 ಎಸೆತಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದಾರೆ. ಈ ಮೂಲಕ ನ್ಯೂ ಪೋಸ್ಟರ್ ಬಾಯ್‌ ಆಗಿ ಹೊರ ಹೊಮ್ಮಿದ್ದಾರೆ.

ಐಪಿಎಲ್‌ 2025ರಲ್ಲಿ ವೈಭವ್‌ ಸೂರ್ಯವಂಶಿ ಆಡಿದ 5 ಪಂದ್ಯಗಳಲ್ಲಿ 31ರ ಸರಾಸರಿಯಲ್ಲಿ 155 ರನ್‌ ಸಿಡಿಸಿದ್ದಾರೆ. ಇವರು ಈ ವೇಳೆ 10 ಬೌಂಡರಿ, 16 ಸಿಕ್ಸರ್ ಬಾರಿಸಿದ್ದಾರೆ.

Story first published: Monday, May 5, 2025, 15:35 [IST]
Other articles published on May 5, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+