ಚಿತ್ರಗಳಲ್ಲಿ: ವಿರುಷ್ಕಾ ದಂಪತಿಗೆ ಶುಭ ಹಾರೈಸಿದ ನರೇಂದ್ರ ಮೋದಿ
ನವದೆಹಲಿ, ಡಿಸೆಂಬರ್ 22: ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಜೋಡಿ ಯೂರೋಪ್ ನಲ್ಲಿ ಹನಿಮೂನ್ ಮುಗಿಸಿಕೊಂಡು ಗುರುವಾರ (ಡಿಸೆಂಬರ್ 21) ನವದೆಹಲಿ ಗ್ರ್ಯಾಂಡ್ ರಿಸೆಪ್ಷನ್ ನಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು.
ದೆಹಲಿಯ ತಾಜ್ ಡಿಪ್ಲೊಮೆಟಿಕ್ ಎನ್ ಕ್ಲೇವ್ ನ ದರ್ಬಾರ್ ಹಾಲ್ ನಲ್ಲಿ ಕೆಂಪು ಬಣ್ಣದ ಬನಾರಸ್ ಸೀರೆಯಲ್ಲಿ ಅನುಷ್ಕಾ ಮಿಂಚಿದ್ರೆ, ಕೊಹ್ಲಿ ಶೇರ್ವಾನಿಯಲ್ಲಿ ನೋಡುಗರ ಕಣ್ಮನ ಸೆಳೆದರು.
ಪ್ರಧಾನಿ ನರೇಂದ್ರ ಮೋದಿ, ಸುರೇಶ್ ರೈನಾ, ಶಿಖರ್ ಧವನ್ ಸೇರಿದಂತೆ ಬಾಲಿವುಡ್ ನಟರು, ಕ್ರಿಕೆಟರ್ಸ್ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ವಿರುಷ್ಕಾ ಮದುವೆ ಆರತಕ್ಷತೆಗೆ ಸಾಕ್ಷಿಯಾದರು.
ಚಿತ್ರಗಳು: ಅನುಷ್ಕಾ-ವಿರಾಟ್ ಆರತಕ್ಷತೆ
ಯತ್ನಿಕ್ ಡ್ರೆಸ್ ನಲ್ಲಿ ಮಿಂಚಿದ ವಿರುಷ್ಕಾ ರಿಸೆಪ್ಷನ್ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್ನು ಮುಂಬೈನಲ್ಲಿ ಇದೇ ಡಿಸೆಂಬರ್ 26ರಂದು ಮುಂಬೈನಲ್ಲಿ ವಿರಾಟ್ ಹಾಗೂ ಅನುಷ್ಕಾ ಆರತಕ್ಷತೆ ಏರ್ಪಡಿಸಿದ್ದಾರೆ.

ಶುಭ ಹಾರೈಸಿದ ಪ್ರಧಾನಿ ನರೇಂದ್ ಮೋದಿ
ಖುದ್ದು ವಿರಾಟ್ ಮತ್ತು ಅನುಷ್ಕಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ತಮ್ಮ ವಿವಾಹ ಅರತ್ಷತೆಗೆ ಬರುವಂತೆ ಆಹ್ವಾನಿಸಿದ್ದರು. ಅದರಂತೆ ಮೋದಿ ಅವರು ವಿರುಷ್ಕಾ ರಿಸೆಪ್ಷನ್ ನಲ್ಲಿ ಬಾಗವಹಿಸಿ ನವಜೋಡಿಗಳಿಗೆ ಶುಭ ಹಾರೈಸಿದರು.

ವಿರುಷ್ಕಾ ರಿಸೆಪ್ಷನ್ ನಲ್ಲಿ ರೈನಾ ದಂಪತಿ
'ಶಾಶ್ವತವಾಗಿ ಪ್ರೀತಿ ಮತ್ತು ಒಡನಾಟದೊಂದಿಗೆ ನಿಮ್ಮ ಜೀವನ ಇರಲಿ ಎಂದು ಭಾರತ ಕ್ರಿಕೆಟ್ ತಂಡದ ಎಡಗೈ ಬ್ಯಾಟ್ಸ್ ಮನ್ ಸುರೇಶ್ ರೈನಾ ಮತ್ತು ಮಡದಿ ಪ್ರಿಯಾಂಕಾ ಚೌಧರಿ ಅವರು ವಿರುಷ್ಕಾಗೆ ಶುಭಕೋರಿದರು.

ಶುಭ ಕೋರಿದ ಶಿಖರ್ ಧವನ್ ದಂಪತಿ
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ವಿವಾಹ ಸಮಾರಂಭದಲ್ಲಿ ಭಾರತದ ಆರಂಭಿಕ ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ದಂಪತಿ ಪಾಲ್ಗೊಂಡು ನವದಂಪತಿಗಳಿಗೆ ಶುಭ ಹಾರೈಸಿದರು.

ಬಾಲಿವುಡ್ ನಟರು, ಕ್ರಿಕೆಟರ್ಸ್ ,ಗಣ್ಯಾತಿಗಣ್ಯರು ಭಾಗಿ
ವಿರುಷ್ಕಾ ಗ್ರ್ಯಾಂಡ್ ರಿಸೆಪ್ಷನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಾಲಿವುಡ್ ನಟ-ನಟಿಯರು, ಕ್ರಿಕೆಟರ್ಸ್ ,ಗಣ್ಯಾತಿಗಣ್ಯರು ಭಾಗವಹಿಸಿದ್ದರು. ಇದೇ ವೇಳೆ ನವಜೋಡಿಗಳು ಆತ್ಮಿಯರೊಂದಿಗೆ ಸ್ಟೆಂಪ್ ಹಾಕಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications