Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಂಎಸ್ ಧೋನಿಗೆ ಪತ್ರ ಬರೆದು ಪ್ರಶಂಸೆ ವ್ಯಕ್ತಪಡಿಸಿದ ಪ್ರಧಾನಿ ನರೇಂದ್ರ ಮೋದಿ

Pm Narendra Modis Letter Of Appreciation To Ms Dhoni

ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿ ಹೇಳಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಪತ್ರದಲ್ಲಿ ಧೋನಿ ಕ್ರಿಕೆಟ್‌ ಮೂಲಕ ಭಾರತಕ್ಕೆ ನೀಡಿದ ಕೊಡುಗೆಯನ್ನು ಪ್ರಧಾನಿ ಸ್ಮರಿಸಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ಎರಡು ಪುಟಗಳ ಪತ್ರವನ್ನು ಮಹೇಂದ್ರ ಸಿಂಗ್ ಧೋನಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರಧಾನಿಯ ಈ ಪತ್ರಕ್ಕೆ ಎಂಎಸ್ ಧೋನಿ ಧನ್ಯವಾದವನ್ನು ಸಲ್ಲಿಸಿದ್ದಾರೆ. ಜೊತೆಗೆ ಪ್ರಧಾನಿಗಳ ಈ ಸ್ಪಂದನೆಗೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್‌ನಲ್ಲಿ ಮಾಹಿ ಪ್ರತಿಕ್ರಿಯೆ

ಟ್ವಿಟ್ಟರ್‌ನಲ್ಲಿ ಮಾಹಿ ಪ್ರತಿಕ್ರಿಯೆ

ಎಂಎಸ್ ಧೋನಿ ಟ್ವಿಟ್ಟರ್‌ನಲ್ಲಿ "ಓರ್ವ ಕಲಾವಿದ, ಸೈನಿಕ ಹಾಗೂ ಕ್ರೀಡಾಪಟು ಇತರರಿಂದ ದೊರೆಯುವ ಮೆಚ್ಚುಗೆಗಾಗಿ ಹಂಬಲಿಸುತ್ತಿರುತ್ತಾನೆ. ಕಠಿಣ ಪರಿಶ್ರಮ ಮತ್ತು ತ್ಯಾಗ ಎಲ್ಲರ ಗಮನಕ್ಕೆ ಬರುತ್ತಿದೆ ಹಾಗೂ ಮೆಚ್ಚುಗೆಗೆ ಒಳಪಡುತ್ತಿದೆ. ನಿಮ್ಮ ಶುಭ ಹಾರೈಕೆಗೆ ಹಾಗೂ ಮೆಚ್ಚುಗೆಗೆ ಧನ್ಯವಾದಗಳು ಪ್ರಧಾನಿ ನರೇಂದ್ರ ಮೋದಿಯವರೇ" ಎಂದು ಬರೆದುಕೊಂಡಿದ್ದಾರೆ.

ಪ್ರಧಾನಿ ಪತ್ರಲ್ಲೇನಿದೆ

ಪ್ರಧಾನಿ ಪತ್ರಲ್ಲೇನಿದೆ

"ಆಗಸ್ಟ್ 15 ರಂದು ನಿಮ್ಮ ಟ್ರೇಡ್‌ಮಾರ್ಕ್ ನಿರ್ಭಯ ಶೈಲಿಯಲ್ಲಿ ಚುಟುಕಾದ ವೀಡಿಯೊವೊಂದನ್ನು ಹಂಚಿಕೊಂಡಿದ್ದಿರಿ. ಅದು ಇಡೀ ದೇಶದ ದೊಡ್ಡ, ಭಾವೋದ್ರಿಕ್ತ ಚರ್ಚಾ ಕೇಂದ್ರವಾಗಲು ಸಾಕಾಗಿತ್ತು. 130 ಕೋಟಿ ಭಾರತೀಯರು ನಿರಾಶೆಗೊಂಡರು. ಆದರೆ ಕಳೆದ ಒಂದೂವರೆ ದಶಕದಲ್ಲಿ ನೀವು ಭಾರತೀಯ ಕ್ರಿಕೆಟ್‌ಗಾಗಿ ಮಾಡಿದ ಎಲ್ಲದಕ್ಕೂ ಶಾಶ್ವತವಾಗಿ ಕೃತಜ್ಞರಾಗಿರುತ್ತೇವೆ" ಎಂದು ಪತ್ರವನ್ನು ಪ್ರದಾನಿ ನರೇಂದ್ರ ಮೋದಿ ಆರಂಭಿಸಿದ್ದಾರೆ.

ಕ್ರಿಕೆಟ್ ಕಂಡ ಯಶಸ್ವಿ ನಾಯಕರಲ್ಲಿ ಒಬ್ಬರು

ಕ್ರಿಕೆಟ್ ಕಂಡ ಯಶಸ್ವಿ ನಾಯಕರಲ್ಲಿ ಒಬ್ಬರು

"ನಿಮ್ಮ ಕ್ರಿಕೆಟಿಂಗ್ ವೃತ್ತಿಜೀವನವನ್ನು ನೋಡುವ ಒಂದು ಮಾರ್ಗವೆಂದರೆ ಅಂಕಿಅಂಶಗಳ ಮೂಲಕ. ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ನೀವು ಒಬ್ಬರಾಗಿದ್ದೀರಿ. ಭಾರತವನ್ನು ವಿಶ್ವ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದೀರಿ. ವಿಶ್ವದ ಬ್ಯಾಟಿಂಗ್ ಶ್ರೇಷ್ಠರಲ್ಲಿ ಒಬ್ಬರಾಗಿ, ಶ್ರೇಷ್ಠ ನಾಯಕರಾಗಿ ಮತ್ತು ಖಂಡಿತವಾಗಿಯೂ ಕ್ರಿಕೆಟ್ ಕಂಡ ಅತ್ಯುತ್ತಮ ವಿಕೆಟ್ ಕೀಪರ್‌ಗಳಲ್ಲಿ ಒಬ್ಬರಾಗಿ ನಿಮ್ಮ ಹೆಸರು ಇತಿಹಾಸದಲ್ಲಿ ಉಳಿಯುತ್ತದೆ." ಎಂದು ಪ್ರಧಾನಿ ಮೋದಿ ಪತ್ರದಲ್ಲಿ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಎರಡು ಪುಟಗಳ ಪತ್ರ

ಎರಡು ಪುಟಗಳ ಪತ್ರ

ಎರಡು ಪುಟಗಳ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಧೋನಿ ಕ್ರಿಕೆಟ್‌ಗೆ ನೀಡಿದ ಕೊಡುಗೆ, ನಾಯಕತ್ವ, ವಿಶ್ವಕಪ್‌ನಲ್ಲಿನ ಗೆಲುವು ಹೀಗೆ ಸಾಕಷ್ಟು ಅಂಶಗಳ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಕ್ರಿಕೆಟ್‌ಗೆ ನೀಡಿದ ಸ್ಮರಣೀಯ ಕೊಡುಗೆಯ ಕಾರಣಕ್ಕಾಗಿ ಭಾರತೀಯರು ಸದಾ ಸ್ಮರಿಸಿಕೊಳ್ಳುತ್ತಾರೆ ಎಂದು ಪ್ರಧಾನಿ ಈ ಪತ್ರದಲ್ಲಿ ಬರೆದುಕೊಂಡಿದ್ದಾರೆ.

Story first published: Thursday, August 20, 2020, 17:14 [IST]
Other articles published on Aug 20, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+