Nikhil Sosale: ಆರ್‌ಸಿಬಿಗೆ ಶುರುವಾಯ್ತು ಬ್ಯಾಡ್ ಟೈಮ್: ನಿಖಿಲ್ ಸೋಸಲೆ ಬಂಧನ
ಬುಧವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಅಮಾಯಕ ಅಭಿಮಾನಿಗಳು ಪ್ರಾಣ ಕಳೆದುಕೊಂಡರು. ಇದರ ವಿರುದ್ಧ ಈಗಾಗಲೇ ಹೈಕೋರ್ಟ್ ಪ್ರಕರಣ ದಾಖಲಿಸಿಕೊಂಡಿದ್ದು ವಿಚಾರಣೆ ನಡೆಯುತ್ತಿದೆ. ಇನ್ನು ಗುರುವಾರ ಕಬ್ಬನ್ ಪಾರ್ಕ್ ಪೊಲೀಸರು ಸಹ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ 24 ಗಂಟೆಯ ಒಳಗೆ ಪೊಲೀಸರು ಆರ್‌ಸಿಬಿ ತಂಡಕ್ಕೆ ಶಾಕ್ ನೀಡಿದ್ದಾರೆ. ಗೆಲುವಿನ ಜೋಶ್‌ನಲ್ಲಿ ಆರ್‌ಸಿಬಿಗೆ ಇದು ದೊಡ್ಡ ಹೊಡೆತ ನೀಡಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆ ಅವರನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಇವರು ಶುಕ್ರವಾರ ಬೆಂಗಳೂರಿನ ವಿಮಾನ ನಿಲ್ದಾಣದಿಂದ, ಮುಂಬೈಗೆ ಪ್ರಯಾಣ ಬೆಳೆಸುತ್ತಿದ್ದರು. ಇವರನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.

ಆರ್‌ಸಿಬಿ ಅಹಮದಾಬಾದ್‌ನಲ್ಲಿ ಕಪ್ ಗೆಲ್ಲುತ್ತಿದ್ದಂತೆ ಸರಣಿ ಪೋಸ್ಟ್‌ಗಳನ್ನು ಮಾಡಿದ್ದಾರೆ. ಅಲ್ಲದೆ ಅಭಿಮಾನಿಗಳನ್ನು ಹುರಿದುಂಬಿಸಿದ್ದರು. ಅಲ್ಲದೆ ವಿಕ್ಟರಿ ಪರೆಡ್ ಇರುವುದಾಗಿ ಈ ಮೊದಲೇ ಸೂಚಿಸಿದ್ದರು. ಆದರೆ ಈ ಪೆರೆಡ್ ಕೊನೆಯ ಕ್ಷಣದಲ್ಲಿ ರದ್ದಾಗಿತ್ತು. ಇವರ ಸಾಮಾಜಿಕ ತಾಣದಲ್ಲಿ ಮಾಡಿದ್ದ ಪೋಸ್ಟ್‌ಗಳು ಸಖತ್ ವೈರಲ್ ಆಗಿದ್ದವು. ಈಗ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ ತಂಡಕ್ಕೆ ಶಾಕ್ ನೀಡಲಾಗಿದೆ. ಆರ್‌ಸಿಬಿ ತಂಡದ ಮಾರ್ಕೆಂಟಿಂಗ್ ಹೆಡ್ ನಿಖಿಲ್ ಸೋಸಲೆ ಅವರನ್ನು ಬಂದಿಸಲಾಗಿದೆ. ಇದು ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.
ಯಾರಿದು ನಿಖೀಲ್?
ಆಗಸ್ಟ್ 18, 1986 ರಂದು ಜನಿಸಿದ ಸೋಸ್ಲೆ, ಕಳೆದ ಎರಡು ವರ್ಷಗಳಿಂದ ಆರ್‌ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸೋಸ್ಲೆ ಮೂಲತಃ ಡಯಾಜಿಯೊ ಇಂಡಿಯಾದ ಉದ್ಯೋಗಿ, ಇದು ಆರ್‌ಸಿಬಿಯ ಮಾಲೀಕರಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್‌ಎಲ್) ಅನ್ನು ನಿರ್ವಹಿಸುತ್ತದೆ. ಆರ್‌ಸಿಬಿ ಬ್ರ್ಯಾಂಡ್‌ನ ಹಿಂದಿನ ವಿನ್ಯಾಸ ಮತ್ತು ಕಾರ್ಯತಂತ್ರದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಬೆಂಗಳೂರಿನ ನಿವಾಸಿಯಾಗಿದ್ದ ಇವರನ್ನು ಹೆಚ್ಚಾಗಿ ಪಂದ್ಯಗಳು ನಡೆದಾಗ ಆರ್‌ಸಿಬಿ ಬಾಕ್ಸ್‌ಗಳಲ್ಲಿ ಹೆಚ್ಚಾಗಿ ಕಾಣಬಹುದು. ಇವರು ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡಿದ್ದಾರೆ. ಆರ್‌ಸಿಬಿ ಸಾಮಾಜಿಕ ತಾಣದಲ್ಲಿ ಅತಿ ಹೆಚ್ಚು ಜನಪ್ರೀಯವಾಗಿದೆ ಎಂದರೆ ಅದರ ಹಿಂದೆ ಇವರ ಕೈವಾಡವೂ ಇದೆ.
ಮಧ್ಯಾಹ್ನ 1 ಗಂಟೆಗೆ ಗೇಟ್ 9 ಮತ್ತು 10 ರ ಬಳಿ ಉಚಿತ ಟಿಕೆಟ್‌ಗಳನ್ನು ವಿತರಿಸಲಾಗುವುದು ಎಂದು ಅವರು ಸಾಮಾಜಿಕ ತಾಣದಲ್ಲಿ ಹೇಳಿಕೊಂಡಿದ್ದರು. ಆದರೆ ಇದು ಸಾಧ್ಯವಾಗಲಿಲ್ಲ. ಭಾರಿ ಜನಸಂದಣೆ ಆಗಿದ್ದರಿಂದ, ಕ್ರೀಡಾಂಗಣಕ್ಕೆ ಪ್ರವೇಶ ಮಧ್ಯಾಹ್ನ 3ಕ್ಕೆ ಎಂದು ಹೇಳಲಾಗಿತ್ತು. ಇದೇ ಗೊಂದಲಕ್ಕೆ ಕಾರಣವಾಯಿತು.
ಆರ್‌ಸಿಬಿ ಸಂಭ್ರಮಾಚರಣೆಯ ವೇಳೆ ನಡೆದ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಈ ವೇಳೆ ಕಾರ್ಯಕ್ರಮ ಆಯೋಜಕರಾದ ಡಿಎನ್‌ಎ , ಕೆಎಸ್‌ಸಿಎ, ಆರ್‌ಸಿಬಿ ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಪಿಐಎಲ್ ದಾಖಲಿಸಲಾಗಿದ್ದು, ವಿಚಾರಣೆ ಮಂಗಳವಾರ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications