ಸ್ಪಿನ್ನರ್ ಮಿಶ್ರಾ ಕೇಸಿಗೆ ಟ್ವಿಸ್ಟ್: ದೂರು ವಾಪಸ್ ಪಡೆದ ಮಹಿಳೆ?
ಬೆಂಗಳೂರು, ಅ.22: ಭಾರತ ತಂಡದ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರ ವಿರುದ್ಧದ ಹಲ್ಲೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಮಿಶ್ರಾ ವಿರುದ್ಧ ಹಲ್ಲೆ ಆರೋಪ ಹೊರೆಸಿದ್ದ ಮಹಿಳೆ ವಂದನಾ ಅವರು ತಾವು ನೀಡಿದ್ದ ದೂರನ್ನು ಹಿಂಪಡೆಪಲು ಮುಂದಾಗಿರುವ ಸುದ್ದಿ ಬಂದಿದೆ.
ಅಮಿತ್ ಮಿಶ್ರಾ ಅವರು ಗೆಳತಿಯೂ ಆಗಿರುವ ಬಾಲಿವುಡ್ ನಿರ್ಮಾಪಕಿ ವಂದನಾ ಅವರು ತಮ್ಮ ಮೇಲೆ ಬೆಂಗಳೂರಿನ ಹೋಟೆಲ್ ನಲ್ಲಿ ಮಿಶ್ರಾ ಹಲ್ಲೆ ಮಾಡಿದ್ದಾರೆ ಎಂದು ಅಶೋಕ್ ನಗರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದರು. [ಸ್ಪಿನ್ನರ್ ಅಮಿತ್ ಮಿಶ್ರಾ ವಿರುದ್ಧ ಎಫ್ಐಆರ್]

ಸೆಪ್ಟೆಂಬರ್ 21 ರಿಂದ 27ರ ಅವಧಿಯಲ್ಲಿ ದಕ್ಷಿಣ ಆಫ್ರಿಕಾದ ಟೂರ್ನಿಗೆ ಆಯ್ಕೆಯಾಗುವುದಕ್ಕೂ ಮುನ್ನಾ ಬೆಂಗಳೂರಿನ ಎನ್ ಸಿಎಯಲ್ಲಿ ಅಭ್ಯಾಸಕ್ಕೆಂದು ಮಿಶ್ರಾ ಅವರು ಬಂದಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಸ್ಪಷ್ಟನೆ ಕೇಳಿ ಪೊಲೀಸರು ಮಿಶ್ರಾ ಅವರಿಗೆ ನೋಟಿಸ್ ಜಾರಿಗೊಳಿಸಿದ್ದರು. ಈ ಬಗ್ಗೆ ಮಿಶ್ರಾ ಅವರ ಹೇಳಿಕೆಯನ್ನು ಪೊಲೀಸರು ಈಗಾಗಲೆ ಪಡೆದುಕೊಂಡಿದ್ದು, ಇಬ್ಬರ ನಡುವೆ ಪರಸ್ಪರ ಮಾತುಕತೆ ನಡೆಸಿ ವಿವಾದವನ್ನು ಇತ್ಯರ್ಥ ಮಾಡಿಕೊಂಡಿರುವ ಸುದ್ದಿ ಬಂದಿದೆ.
ಇದಕ್ಕೂ ಮುನ್ನ ಮಿಶ್ರಾ ಅವರನ್ನು ತನಿಖಾಧಿಕಾರಿಗಳ ಮುಂದೆ ಏಳು ದಿನದೊಳಗಾಗಿ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಲಾಗಿತ್ತು. ಈ ಬಗ್ಗೆ ವಿವರಣೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗೂ ಕಳಿಸಲಾಗಿತ್ತು.
32 ವರ್ಷ ವಯಸ್ಸಿನ ಮಿಶ್ರಾ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿದ್ದು, ಸದ್ಯ ಮೂರನೇ ಏಕದಿನ ಪಂದ್ಯದಲ್ಲಿ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಆಡುತ್ತಿದ್ದಾರೆ. ಟೆಸ್ಟ್ ತಂಡಕ್ಕೂ ಆಯ್ಕೆಯಾಗಿದ್ದಾರೆ. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications