ಪೊಲಾರ್ಡ್, ತಾಹೀರ್, ರಶೀದ್ ಐಪಿಎಲ್‌ನಲ್ಲಿ ಮಿಂಚಲಿದ್ದಾರೆ: ಆಶಿಶ್ ನೆಹ್ರಾ

ಬೆಂಗಳೂರು, ಆಗಸ್ಟ್ 14: ಆಗಸ್ಟ್ 18ರಿಂದ ಆರಂಭಗೊಳ್ಳಲಿರುವ ಕೆರಿಬಿಯನ್ ಪ್ರಿಮಿಯರ್ ಲೀಗ್ ಸೆಪ್ಟೆಂಬರ್ 10ರಂದು ಕೊನೆಗೊಳ್ಳಲಿದೆ. ಇದಾಗಿ ಸೆಪ್ಟೆಂಬರ್ 19ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ. ಪ್ರಮುಖ ಟೂರ್ನಿಗಳನ್ನು ಒಂದರ ನಂತರ ಒಂದು ನಡೆಸುವುದರಿಂದ ಅನುಕೂಲವಾಗಲಿದೆ ಎಂದು ಭಾರತದ ಮಾಜಿ ಆಟಗಾರ ಆಶಿಶ್ ನೆಹ್ರಾ ಹೇಳಿದ್ದಾರೆ.
ಸಿಪಿಎಲ್ ಮತ್ತು ಐಪಿಎಲ್ ಬಗ್ಗೆ ಮಾತನಾಡಿರುವ ಮಾಜಿ ವೇಗಿ ನೆಹ್ರಾ, ಸಿಪಿಎಲ್ ಬಳಿಕ ಐಪಿಎಲ್ ನಡೆಯುತ್ತಿರುವುದರಿಂದ ಸಿಪಿಎಲ್‌ನಲ್ಲಿ ಪಾಲ್ಗೊಳ್ಳುವ ಆಟಗಾರರಿಗೆ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ಉತ್ತಮ ಅಭ್ಯಾಸ ದೊರೆಯುತ್ತದೆ ಎಂದಿದ್ದಾರೆ.
'ಯಾವೆಲ್ಲ ಆಟಗಾರರು ಸಿಪಿಎಲ್‌ನಲ್ಲಿ ಆಡುತ್ತಾರೋ ಅವರೆಲ್ಲರೂ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಾರೆ ಎನ್ನೋದಕ್ಕೆ ಗ್ಯಾರಂಟಿಯಿಲ್ಲ. ಆದರೆ ಅವರು ಉಳಿದ ಆಟಗಾರರಿಗಿಂತ ಉತ್ತಮ ಪ್ರದರ್ಶನ ನೀಡುತ್ತಾರೆ ಅನ್ನೋದರಲ್ಲಿ ಅನುಮಾನವಿಲ್ಲ,' ಎಂದು ಆಶಿಶ್ ಹೇಳಿದ್ದಾರೆ.
'ಒಂದು ತಿಂಗಳ ಕಾಲ ಸಿಪಿಎಲ್ ನಲ್ಲಿ ಆಡಿ ನೀವು ಯುಎಇಗೆ ತಲುಪುವಾಗ ಇದು ನಿಮ್ಮನ್ನು ಖಂಡಿತವಾಗಿಯೂ ಉಳಿದವರಿಗಿಂತ ಭಿನ್ನರನ್ನಾಗಿಸುತ್ತೆ. ಹೀಗಾಗಿ ಕೀರನ್ ಪೊಲಾರ್ಡ್, ಇಮ್ರಾನ್ ತಾಹೀರ್ ಅಥವಾ ರಶೀದ್ ಖಾನ್ ಇಂಥ ಆಟಗಾರರು ಐಪಿಎಲ್‌ನಲ್ಲಿ ಮಿಂಚುತ್ತಾರೆ,' ಎಂದು ನೆಹ್ರಾ ವಿವರಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications