For Quick Alerts
ALLOW NOTIFICATIONS  
For Daily Alerts
 

ಟೀಮ್‌ ಇಂಡಿಯಾಗಾಗಿ ಹಾಟ್‌ ಪಿಕ್‌ ಪ್ರಕಟಿಸಿದ ಪೂನಮ್‌ ಪಾಂಡೆ!

Poonam Pandeys Hot Picture After India Beat Australia is Going Viral

ಬೆಂಗಳೂರು, ಜೂನ್‌ 10: ಸಾಮಾಜಿಕ ಜಾಲತಾಣದ ಜನಪ್ರಿಯ ಮಾಡೆಲ್ ಪೂನಮ್‌ ಪಾಂಡೆ ಕ್ರಿಕೆಟ್‌ ಮತ್ತು ಟೀಮ್‌ ಇಂಡಿಯಾದ ಬಹುದೊಡ್ಡ ಅಭಿಮಾನಿ ಎಂಬುದು ಎಲ್ಲರಿಗೂ ತಿಳಿದಿದೆ. 2011ರ ವಿಶ್ವಕಪ್‌ ಟೂರ್ನಿ ವೇಳೆ ಭಾರತ ತಂಡ ಟ್ರೋಫಿ ಗೆದ್ದರೆ ನಗ್ನ ಫೋಟೊ ಪ್ರಕಟಿಸುವುದಾಗಿ ಹೇಳಿಕೆ ನೀಡಿ ಪಡ್ಡೆ ಹುಡುಗರ ನಿದ್ರೆ ಕೆಡಿಸಿದ್ದು ಇದೇ ಪೂನಮ್‌ ಪಾಂಡೆ. ಸೋಷಿಯಲ್‌ ಮೀಡಿಯಾದ ಹಾಟ್‌ ಮಾಡೆಲ್‌ ಆಗಿರುವ 28 ವರ್ಷದ ಪೂನಮ್‌ ಇದೀಗ ಮತ್ತೊಮ್ಮೆ ಇಂಟರ್‌ನೆಟ್‌ನಲ್ಲಿ ಕಿಚ್ಚು ಹಚ್ಚಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಪ್ರಸಕ್ತ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 36 ರನ್‌ಗಳ ಜಯ ದಾಖಲಿಸಿದ ಬಳಿಕ, ಪೂನಮ್‌ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಮತ್ತು ಟ್ವಿಟರ್‌ ಖಾತೆಗಳ ಮೂಲಕ ಟೀಮ್‌ ಇಂಡಿಯಾಗೆ ತಮ್ಮ 'ಹಾಟ್‌ ಪಿಕ್ಚರ್‌' ಒಂದನ್ನು ಸಮರ್ಪಿಸಿದ್ದಾರೆ.

ತಮ್ಮ ಬೋಲ್ಡ್‌ ಲುಕ್‌ಗಳ ಮೂಲಕವೇ ಭಾವನೆಗಳನ್ನು ವ್ಯಕ್ತ ಪಡಿಸುವುದಕ್ಕೆ ಹೆಸರುವಾಸಿಯಾಗಿರುವ ಪೂನಮ್‌, ಕಪ್ಪು ಬಣ್ಣದ ತೆಳುವಾದ ಬಟ್ಟೆ ತೊಟ್ಟು ಮಾದಕ ಬಂಗಿಯಲ್ಲಿ ಪೋಸ್‌ ನೀಡುವ ಮೂಲಕ "ನ್ಯೂ ಪಿಕ್‌ ಫಾರ್‌ ಟೀಮ್‌ ಇಂಡಿಯಾ'' ಎಂದು ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಕ್ಷಣಮಾತ್ರದಲ್ಲೇ ಸಾವಿರಾರು ಮರು ಟ್ವೀಟ್‌ಗಳು ಹರಿದು ಬಂದಿದ್ದು, 2011ರಲ್ಲಿ ನೀವು ಕೊಟ್ಟ ಭರವಸೆ ಇನ್ನೂ ಈಡೇರಿಸಿಲ್ಲ ಎಂದೆಲ್ಲಾ ಪಡ್ಡೆ ಹುಡುಗರು ಪೂನಮ್‌ ಕಾಲೆಳೆದಿದ್ದಾರೆ. ಪೂನಮ್‌ ಪಾಂಡೆ ಅವರ ಈ ಹಾಟ್‌ ಪಿಕ್ಚರ್‌ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ.

View this post on Instagram

A Pic for Team India. #WCW2019

A post shared by Poonam Pandey (@ipoonampandey) on

ಇದೇ ವೇಳೆ ಭಾರತ ತಂಡ ಆಸೀಸ್‌ ವಿರುದ್ಧದ ಪಂದ್ಯದಲ್ಲಿ 352/5 ರನ್‌ಗಳನ್ನು ದಾಖಲಿಸಿ ಬಳಿಕ ಕಾಂಗರೂ ಪಡೆಯನ್ನು 316ಕ್ಕೆ ಆಲ್‌ಔಟ್‌ ಮಾಡಿ ವಿಶ್ವಕಪ್‌ ಟೂರ್ನಿಯಲ್ಲಿ ಸತತ 2ನೇ ಜಯ ದಾಖಲಿಸಿದೆ. ಇದೀಗ ಜೂನ್‌ 13ರಂದು ನ್ಯೂಜಿಲೆಂಡ್‌ ವಿರುದ್ಧ ತನ್ನ ಮೂರನೇ ಪಂದ್ಯವನ್ನಾಡಲಿದ್ದು, ಜೂನ್‌ 16ರಂದು ಬಹು ನಿರೀಕ್ಷಿತ ಇಂಡೊ-ಪಾಕ್‌ ಕದನದಲ್ಲಿ ಆಡಲಿದೆ.

Story first published: Monday, June 10, 2019, 21:32 [IST]
Other articles published on Jun 10, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+