ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ರೋಚಕ ಘಟ್ಟದತ್ತ ಮನೆ ಮಾಡಿದೆ. ಈ ಲೀಗ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಪಂದ್ಯದಲ್ಲಿ ಸೋತ ಪಂಜಾಬ್ ಎರಡನೇ ಕ್ವಾಲಿಫೈಯರ್ ಆಡಲಿದೆ. ಎಲಿಮಿನೇಟರ್‌ನಲ್ಲಿ ಜಯ ಸಾಧಿಸಿದ ತಂಡದ ವಿರುದ್ಧ ಪಂಜಾಬ್ ಎರಡನೇ ಕ್ವಾಲಿಫೈಯರ್ ಆಡಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಐಪಿಎಲ್ 2025ರ ಫೈನಲ್‌ಗೆ ಅರ್ಹತೆ ಪಡೆಯಲಿದೆ.
ಪ್ಲೇ ಆಫ್ ಹಂತದ ಪಂದ್ಯಗಳು ಆರಂಭವಾಗಿದ್ದು, ಎಲ್ಲರ ಕಣ್ಣುಗಳು ಗರಿಷ್ಠ ರನ್ ಹಾಗೂ ಗರಿಷ್ಠ ವಿಕೆಟ್ ಪಡೆದ ಆಟಗಾರರ ಮೇಲೆ ನೆಟ್ಟಿರುತ್ತವೆ. ಈ ಬಾರಿ ಸಹ ಪ್ರತಿ ಪಂದ್ಯ ಆದ ಮೇಲೆ ಅದರ ನೇರ ಪರಿಣಾಮ ಆರೆಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್ ರೇಸ್ ಮೇಲೂ ಬಿದ್ದಿದೆ. ಸದ್ಯ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಯಾರ ಬಳಿ ಇದೆ ಎಂಬ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಈ ಬಾರಿ ಯುವ ಆಟಗಾರ ಗುಜರಾತ್ ಟೈಟಾನ್ಸ್ ತಂಡದ ಸಾಯಿ ಸುದರ್ಶನ್ ಮುನ್ನಡೆ ಸಾಧಿಸಿದ್ದಾರೆ. ಇವರು ಲೀಗ್‌ನ ಉದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರ ಸ್ಥಿರ ಪ್ರದರ್ಶನದ ಫಲವಾಗಿಯೇ ಇವರಿಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಆಯ್ಕೆ ಮಾಡಲಾಗಿದೆ. ಇವರು ಶುಕ್ರವಾರದ ಪಂದ್ಯದ ಆರಂಭದ ವರೆಗೆ ಆರೆಂಜ್ ಕ್ಯಾಪ್‌ನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಸಾಯಿ ಸುದರ್ಶನ್ ಆಡಿರುವ 14 ಪಂದ್ಯಗಳಲ್ಲಿ 52ರ ಸರಸಾರಿಯಲ್ಲಿ 679 ರನ್ ಸಿಡಿಸಿದ್ದಾರೆ. ಇದರಲ್ಲಿ 1 ಶತಕ ಹಾಗೂ 5 ಅರ್ಧಶತಕಗಳು ಸೇರಿವೆ.
ಸಾಯಿ ಸುದರ್ಶನ್, 14 ಪಂದ್ಯ, 679 ರನ್, 1 ಶತಕ, 5 ಅರ್ಧಶತಕ
ಶುಭಮನ್ ಗಿಲ್, 14 ಪಂದ್ಯ, 649 ರನ್, 6 ಅರ್ಧಶತಕ
ಸೂರ್ಯಕುಮಾರ್ ಯಾದವ್, 14 ಪಂದ್ಯ, 640 ರನ್, 5 ಅರ್ಧಶತಕ
ಮಿಚೆಲ್ ಮಾರ್ಷ್, 13 ಪಂದ್ಯ, 627 ರನ್, 1 ಶತಕ, 6 ಅರ್ಧಶತಕ
ವಿರಾಟ್ ಕೊಹ್ಲಿ, 14 ಪಂದ್ಯ, 614 ರನ್, 8 ಅರ್ಧಶತಕ

ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಹಲವು ಸ್ಟಾರ್ ಬೌಲರ್‌ಗಳು ಇದ್ದಾರೆ. ಆರೆಂಜ್ ಕ್ಯಾಪ್‌ನಂತೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯಲು ಜಿದ್ದಾಜಿದ್ದಿನ ಕಾಳಗ ನಡೆದಿದೆ. ಈ ವೇಳೆ ಸ್ಟಾರ್ ಆಟಗಾರರು ತಮ್ಮ ಸ್ಥಿರ ಪ್ರದರ್ಶನದಿಂದ ಎದುರಾಳಿ ಆಟಗಾರರ ಮನ ಗೆದ್ದಿದ್ದಾರೆ. ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನೂರ್ ಅಹ್ಮದ್ 14 ಪಂದ್ಯಗಳಲ್ಲಿ 24 ವಿಕೆಟ್ ಪಡೆದು ಅಬ್ಬರಿಸಿದ್ದಾರೆ. ಆದರೆ ಇವರು ಪ್ರತಿನಿಧಿಸುವ ತಂಡ ಈಗಾಗಲೇ ಪ್ಲೇ ಆಫ್‌ನಿಂದ ದೂರ ಉಳಿದಿದೆ.
ನೂರ್ ಅಹ್ಮದ್, 14 ಪಂದ್ಯ, 24 ವಿಕೆಟ್
ಪ್ರಸಿದ್ಧ್ ಕೃಷ್ಣ, 14 ಪಂದ್ಯ, 23 ವಿಕೆಟ್
ಜೋಶ್ ಹ್ಯಾಜಲ್‌ವುಡ್, 11 ಪಂದ್ಯ, 21 ವಿಕೆಟ್
ಟ್ರೆಂಟ್ ಬೌಲ್ಟ್, 14 ಪಂದ್ಯ, 19 ವಿಕೆಟ್
ಅರ್ಷದೀಪ್ ಸಿಂಗ್, 15 ಪಂದ್ಯ, 18 ವಿಕೆಟ್